ETV Bharat / state

ನಾಳೆಯಿಂದ ಮಳೆಗಾಲದ ಅಧಿವೇಶನ: ಪ್ರತಿಪಕ್ಷ-ಆಡಳಿತ ಪಕ್ಷಗಳ ನಡುವೆ 'ಸಿಡಿಲಿನ ಆರ್ಭಟ'

ಸೋಮವಾರದಿಂದ ಮಳೆಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ಪ್ರತಿಪಕ್ಷಗಳ ಮುಂದೆ ಉತ್ತರ ಸಿಗದ ಹಲವು ಪ್ರಶ್ನೆಗಳು, ಅನುಮಾನಗಳು, ಆಕ್ರೋಶ, ಆರೋಪಗಳಿದ್ದು, ಅವುಗಳೆಲ್ಲವನ್ನೂ ಸರ್ಕಾರದ ಮೇಲೆ ಪ್ರಯೋಗಿಸಲು ಸರ್ವಸನ್ನದ್ಧವಾಗಿದೆ. ಇತ್ತ ಸರ್ಕಾರ ಪ್ರತಿಪಕ್ಷಗಳ ವಾಗ್ದಾಳಿಯನ್ನು ಸಮರ್ಥವಾಗಿ ಎದುರಿಸಲು ಪ್ರತಿತಂತ್ರವನ್ನು ರೂಪಿಸಿದೆ.

ನಾಳೆಯಿಂದ ಅಧಿವೇಶನ
ನಾಳೆಯಿಂದ ಅಧಿವೇಶನ
author img

By

Published : Sep 20, 2020, 7:12 PM IST

ಬೆಂಗಳೂರು: ಪ್ರತಿಪಕ್ಷ-ಆಡಳಿತ ಪಕ್ಷಗಳ ನಡುವಿನ ಜಟಾಪಟಿಗೆ ಮಳೆಗಾಲದ ಅಧಿವೇಶನದ ವೇದಿಕೆ ಸಜ್ಜಾಗಿದೆ.‌ ನಾಳೆಯಿಂದ ಪ್ರಾರಂಭವಾಗಲಿರುವ ಕಲಾಪದಲ್ಲಿ ಪ್ರತಿಪಕ್ಷ ಹಲವು ವಿಚಾರಗಳ ಬಗ್ಗೆ ಸರ್ಕಾರದ ಕಿವಿ ಹಿಂಡಲು ತವಕದಲ್ಲಿದ್ದರೆ, ಇತ್ತ ಸರ್ಕಾರ ಪ್ರತಿಪಕ್ಷಗಳ ಪ್ರಶ್ನೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧವಾಗಿದೆ.

ನಾಳೆಯಿಂದ ಮಳೆಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ಪ್ರತಿಪಕ್ಷ-ಆಡಳಿತ ಪಕ್ಷಗಳ ನಡುವಿನ ಸದನ ಕದನ ಕುತೂಹಲಕ್ಕೆ ಸಾಕ್ಷಿಯಾಗಲಿದೆ. ಕೋವಿಡ್ ಆರಂಭಿಕ ತಿಂಗಳಾದ ಮಾರ್ಚ್ ಅಧಿವೇಶನದ ಬಳಿಕ ಸುದೀರ್ಘ ಆರು ತಿಂಗಳ ಅಂತರದಲ್ಲಿ ತಡವಾಗಿ ಮಳೆಗಾಲದ ಅಧಿವೇಶನವನ್ನು ನಡೆಸಲಾಗುತ್ತಿದೆ. ಪ್ರತಿಪಕ್ಷಗಳ ಮುಂದೆ ಉತ್ತರ ಸಿಗದ ಹಲವು ಪ್ರಶ್ನೆಗಳು, ಅನುಮಾನಗಳು, ಆಕ್ರೋಶ, ಆರೋಪಗಳಿದ್ದು, ಅವುಗಳೆಲ್ಲವನ್ನೂ ಸರ್ಕಾರದ ಮೇಲೆ ಪ್ರಯೋಗಿಸಲು ಸರ್ವಸನ್ನದ್ಧವಾಗಿದೆ. ಇತ್ತ ಸರ್ಕಾರ ಪ್ರತಿಪಕ್ಷಗಳ ವಾಗ್ದಾಳಿಯನ್ನು ಸಮರ್ಥವಾಗಿ ಎದುರಿಸಲು ಪ್ರತಿತಂತ್ರವನ್ನು ರೂಪಿಸಿದೆ.

ಸರ್ಕಾರದ ಕಿವಿ ಹಿಂಡಲು ಪ್ರತಿಪಕ್ಷ ರೆಡಿ:

ಅನೇಕ ಜ್ವಲಂತ ವಿಚಾರಗಳ ಬಗ್ಗೆ ಸರ್ಕಾರದ ಕಿವಿ ಹಿಂಡಲು ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಎಲ್ಲಾ ತಯಾರಿಗಳನ್ನು ನಡೆಸಿದೆ.

ಪ್ರಮುಖವಾಗಿ ಕೋವಿಡ್ ವಿಚಾರವಾಗಿ ಸರ್ಕಾರವನ್ನು ಬಗ್ಗು ಬಡಿಯಲು ಪ್ರತಿಪಕ್ಷ ಅಸ್ತ್ರಗಳನ್ನು ಸಿದ್ಧಗೊಳಿಸಿದೆ. ಕೋವಿಡ್ ಪರಿಕರ ಖರೀದಿಯಲ್ಲಿನ ಹಗರಣ ಆರೋಪದ ಮೂಲಕ ಸರ್ಕಾರವನ್ನು ಟಾರ್ಗೆಟ್ ಮಾಡಲು ಪ್ರತಿಪಕ್ಷ ರೆಡಿಯಾಗಿದೆ. ಕೋವಿಡ್ ಖರ್ಚು, ವೆಚ್ಚದ ಬಗ್ಗೆ ಪಕ್ಕಾ ಲೆಕ್ಕಕೊಡುವಂತೆ ಕಾಂಗ್ರೆಸ್ ಆಗ್ರಹಿಸಲಿದೆ. ಈ ಸಂಬಂಧ ತನ್ನಲ್ಲಿರುವ ದಾಖಲಾತಿಗಳನ್ನು ಮುಂದಿಟ್ಟು ಸರ್ಕಾರದ ಕಿವಿ ಹಿಂಡಲು ಮುಂದಾಗಿದೆ.

ಬಳಿಕ ಕೋವಿಡ್ ಪ್ರಕರಣಗಳಲ್ಲಿ ಏರಿಕೆ, ನಿರ್ವಹಣೆಯಲ್ಲಿನ ವೈಫಲ್ಯಗಳ ಬಗ್ಗೆ ಸರ್ಕಾರವನ್ನು ಬೊಟ್ಟು ಮಾಡಲು ಸಿದ್ಧವಾಗಿದೆ. ಜೊತೆಗೆ ಆರ್ಥಿಕ ಸಂಕಷ್ಟ, ಕೇಂದ್ರದಿಂದ ಅನುದಾನ, ಜಿಎಸ್​ಟಿ ಪರಿಹಾರ ಕಡಿತ, ಹೆಚ್ಚುವರಿ ಸಾಲ ಎತ್ತುವಳಿ, ಗಲಭೆ ಪ್ರಕರಣ, ಅತಿವೃಷ್ಟಿ ಪರಿಹಾರ, ಡ್ರಗ್ಸ್ ದಂಧೆ ಬಗ್ಗೆ ಸರ್ಕಾರದ ವಿರುದ್ಧ ಸಮರ ಸಾರಲು ಪ್ರತಿಪಕ್ಷಗಳು ಸಜ್ಜಾಗಿವೆ.

ವಿವಾದಾತ್ಮಕ ಭೂ ಸುಧಾರಣೆ ತಿದ್ದುಪಡಿ ಸುಗ್ರೀವಾಜ್ಞೆ ವಿಧೇಯಕಗಳು ಸದನದಲ್ಲಿ ಮಂಡನೆಯಾಗಲಿದ್ದು, ಈ ಸಂಬಂಧ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದ್ದಾರೆ. ವಿಧೇಯಕಗಳ ಅಂಗೀಕಾರಕ್ಕೆ ಪ್ರತಿಪಕ್ಷಗಳು ತಡೆಯೊಡ್ಡಲು ಯತ್ನಿಸಲಿವೆ.

ಪ್ರತಿಪಕ್ಷಗಳ ತಂತ್ರಕ್ಕೆ ಸರ್ಕಾರದ ಪ್ರತಿತಂತ್ರ:

ಕಲಾಪದಲ್ಲಿ ಪ್ರತಿಪಕ್ಷಗಳು ಮುಗಿಬೀಳುವುದನ್ನು ನಿರೀಕ್ಷಿಸಿರುವ ಬಿಜೆಪಿ ಸರ್ಕಾರವೂ ತನ್ನದೇ ಆದ ಪ್ರತಿತಂತ್ರವನ್ನು ಹೆಣೆದಿದೆ.

ಕೋವಿಡ್ ಖರೀದಿ ಸಂಬಂಧ ಪೈಸೆ ಪೈಸೆಗೆ ಅಧಿವೇಶನದಲ್ಲಿ ಲೆಕ್ಕ ಕೊಡ್ತೀವಿ ಅಂತಿದ್ದ ಸರ್ಕಾರ, ಈವರೆಗಿನ ಖರ್ಚು ವೆಚ್ಚಗಳ ಸಂಪೂರ್ಣ ಲೆಕ್ಕವನ್ನು ಕೊಡಲು ಸಿದ್ಧವಾಗಿದೆ. ಆ ಮೂಲಕ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ನಿರ್ಧರಿಸಿದೆ. ಜೊತೆಗೆ ಕೋವಿಡ್ ನಿರ್ವಹಣೆಯಲ್ಲಿನ ಕರ್ನಾಟಕದ ಸಾಧನೆ, ಯಶಸ್ಸನ್ನೂ ಸದನದಲ್ಲಿಡಲು ನಿರ್ಧರಿಸಿದೆ.

ಕೊರೊನಾ ನಿಯಂತ್ರಣಕ್ಕಾಗಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸವಿವರವಾಗಿ ಉತ್ತರಿಸುವ ಮೂಲಕ ಪ್ರತಿಪಕ್ಷಗಳ ಬಾಯಿ ಮುಚ್ಚಿಸುವ ತಂತ್ರ ಸರ್ಕಾರದ್ದು. ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಮೂಲಕ ಕೋವಿಡ್ ನಿರ್ವಹಣೆ, ಖರ್ಚು, ವೆಚ್ಚಗಳ ಬಗ್ಗೆ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ಸರ್ಕಾರ ಮುಂದಾಗಿದೆ.

ಅದೇ ರೀತಿ ರಾಜ್ಯದ ಆರ್ಥಿಕ ಸಂಕಷ್ಟ, ಸಾಲ ನಿರ್ವಹಣೆ, ಸಂಪನ್ಮೂಲ ಕ್ರೂಢೀಕರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಬಲವಾದ ವಾದವನ್ನು ಮುಂದಿಡಲಿದೆ. ಪ್ರತಿಪಕ್ಷಗಳ ಆರೋಪವನ್ನು ಸಮರ್ಥವಾಗಿ ನಿಭಾಯಿಸುವಂತೆ ಸಿಎಂ ಈಗಾಗಲೇ ಎಲ್ಲಾ ಸಚಿವರುಗಳಿಗೆ ಸೂಚನೆ ನೀಡಿದ್ದಾರೆ.

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಸೇರಿದಂತೆ ಹಲವು ಸುಗ್ರೀವಾಜ್ಞೆಗೆ ಸದನದ ಅಂಗೀಕಾರ ಪಡೆಯಲು ಸರ್ಕಾರ ಪಣತೊಟ್ಟಿದೆ. ಈ ವೇಳೆ ಎಲ್ಲಾ ಬಿಜೆಪಿ ಶಾಸಕರು ಸದನದಲ್ಲಿದ್ದು, ವಿಧೇಯಕಗಳು ಪಾಸ್ ಆಗುವಂತೆ ನೋಡಿಕೊಳ್ಳಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಮಳೆಗಾಲದ ಅಧಿವೇಶನ ಸದ್ದು ಗದ್ದಲಕ್ಕೆ ಸಾಕ್ಷಿಯಾಗುವುದಂತೂ ಸತ್ಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.