ETV Bharat / state

ವಿಧಾನಮಂಡಲದ‌‌ ಇನ್ನೊಂದು ಸಮಿತಿ ಸದಸ್ಯರಿಂದ ಅಧ್ಯಯನ ಪ್ರವಾಸ

ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅಧ್ಯಕ್ಷತೆಯ ವಿಧಾನ ಮಂಡಲದ ಉಭಯ ಸದನಗಳ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ‌ ಸಮಿತಿ ಇಂದಿನಿಂದ ಜುಲೈ 8 ರವರೆಗೆ ದೆಹಲಿ ಹಾಗೂ ಗುಜರಾತ್ ರಾಜ್ಯಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಿದೆ.

author img

By

Published : Jul 5, 2022, 1:10 PM IST

Updated : Jul 5, 2022, 1:22 PM IST

legislature study tour
ವಿಧಾನಮಂಡಲದ‌‌ ಇನ್ನೊಂದು ಸಮಿತಿ ಸದಸ್ಯರು ನಾಳೆಯಿಂದ ಅಧ್ಯಯನ ಪ್ರವಾಸ

ಬೆಂಗಳೂರು: ರಾಜ್ಯ ವಿಧಾನಮಂಡಲದ‌‌ ಇನ್ನೊಂದು ಸಮಿತಿ ಇದೀಗ ಅಧ್ಯಯನ ಪ್ರವಾಸಕ್ಕೆ ಸಿದ್ಧತೆ ನಡೆಸಿದೆ. ಶಾಸಕ ಸೋಮಶೇಖರ್ ರೆಡ್ಡಿ ಅಧ್ಯಕ್ಷತೆಯ ಉಭಯ ಸದನಗಳ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ‌ ಸಮಿತಿ ಇಂದಿನಿಂದ ಜುಲೈ 8 ರವರೆಗೆ ದೆಹಲಿ ಹಾಗೂ ಗುಜರಾತ್ ರಾಜ್ಯಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

ಸಮಿತಿಯ ಸದಸ್ಯರಾದ ಸಿ.ಎಸ್.ಪುಟ್ಟರಾಜು, ಡಾ.ಅಂಜಲಿ ನಿಂಬಾಳ್ಕರ್, ಶರಣು ಸಲಗಾರ್, ಅರುಣ್ ಕುಮಾರ್ ಗುತ್ತೂರು, ಕೆ.ವಿ.ನಂಜೇಗೌಡ, ಆರ್.ಶಂಕರ್, ಸಿ.ಎಂ.ಲಿಂಗಪ್ಪ, ಎನ್.ರವಿಕುಮಾರ್, ಎಂ.ಎಲ್.ಅನಿಲ್ ಕುಮಾರ್, ಟಿ.ನಾರಾಯಣಸ್ವಾಮಿ ಈ ತಂಡದಲ್ಲಿದ್ದು, ಈ ಪೈಕಿ ಕೆಲ ಶಾಸಕರು ತಮ್ಮ‌ ಪತ್ನಿ ಹಾಗೂ ಮಕ್ಕಳನ್ನೂ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದಾರೆ‌.

ಕಳೆದ ವಾರ ಮೊದಲ ಸಮಿತಿ ಸದಸ್ಯರು ಲೇಹ್ ಲಡಾಕ್ ಪ್ರವಾಸಕ್ಕೆ ಕುಟುಂಬಸಮೇತ ಪ್ರವಾಸ ತೆರಳಿದ್ದರು. ಇದು ಈ ಸಮಿತಿಯ ಅಂತಿಮ ಅಧ್ಯಯನ ಪ್ರವಾಸವಾಗಿದ್ದು, ಆ ನಂತರ ವರದಿ ಸಲ್ಲಿಸಲಿದೆ.

ಇದನ್ನೂ ಓದಿ: ಚರ್ಚೆ ಹುಟ್ಟು ಹಾಕಿದ ಕರ್ನಾಟಕ ಶಾಸಕರ ಲೇಹ್-ಲಡಾಖ್​ ಪ್ರವಾಸ

Last Updated : Jul 5, 2022, 1:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.