ETV Bharat / state

ಗಡಿ ವಿವಾದ: ಅಮಿತ್ ಶಾಗೆ ಸಿಎಂ ಬೊಮ್ಮಾಯಿ ಫೋನ್, ದೆಹಲಿ ಭೇಟಿ ಮುನ್ನ ಸರ್ವಪಕ್ಷ ಸಭೆ - ಸರ್ವಪಕ್ಷ ಸಭೆ

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡುವಂತೆ ರಾಜ್ಯ ಸಂಸದರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ.

ಗಡಿ ವಿವಾದ
ಗಡಿ ವಿವಾದ
author img

By

Published : Dec 10, 2022, 8:04 AM IST

Updated : Dec 10, 2022, 1:25 PM IST

ಬೆಂಗಳೂರು: ಗಡಿ ವಿಚಾರವಾಗಿ ಸೋಮವಾರ ರಾಜ್ಯ ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಲಿದ್ದು, ನಾನೂ ಭೇಟಿಯಾಗಲಿದ್ದೇನೆ. ಈಗಾಗಲೇ ಅಮಿತ್ ಶಾ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಅವರ ಜನ್ಮದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ ಬಳಿಕ ಮಾತನಾಡಿದರು. ಮಹಾರಾಷ್ಟ್ರ ಗಡಿ ಕ್ಯಾತೆ ಸಂಬಂಧ ಸೋಮವಾರ ರಾಜ್ಯದ ಎಂಪಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ನೀಡಿ ವಸ್ತುಸ್ಥಿತಿ ತಿಳಿಸಲಿದ್ದಾರೆ. ಬಳಿಕ ಖುದ್ದಾಗಿ ಅಮಿತ್ ಶಾ ಅವರನ್ನ ನಾನು ಭೇಟಿ ಮಾಡಲಿದ್ದೇನೆ. ಬಹುತೇಕ ಡಿಸೆಂಬರ್ 14 ಅಥವಾ 15 ರಂದು ಅಮಿತ್ ಶಾ ಜೊತೆ ಮಹಾರಾಷ್ಟ್ರ ಸಿಎಂ ಸಭೆ ನಡೆಯಲಿದೆ. ಅದಕ್ಕೆ ನನ್ನನ್ನೂ ಕರೆದಿದ್ದಾರೆ. ಮಹಾರಾಷ್ಟ್ರ ನಿಯೋಗ ಗೃಹ ಸಚಿವರ ಭೇಟಿ ಮಾಡಿದೆ. ನಾನು ಕೂಡ ಅಮಿತ್ ಶಾ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ

ನಮ್ಮನ್ನು ಕೂಡ ಸಭೆಗೆ ಅಮಿತ್ ಶಾ ಕರೆದಿದ್ದಾರೆ. ನಾನು ಮಹಾರಾಷ್ಟ್ರ ಸಿಎಂ ಸಭೆಯಲ್ಲಿ ಭಾಗಿಯಾಗುತ್ತೇವೆ. ಸಭೆಯಲ್ಲಿ ಅಮಿತ್ ಶಾ ಜೊತೆ ವಿವರವಾಗಿ ಮಾತನಾಡುತ್ತೇನೆ. ಈಗಾಗಲೇ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೇನೆ. ದೆಹಲಿ ಭೇಟಿಗೂ ಮುನ್ನ ಸರ್ವಪಕ್ಷ ನಾಯಕರ ಜೊತೆ ಮತ್ತೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಿಎಂ ಟ್ವಿಟ್ ಮಾಡಿ, ಮಹಾರಾಷ್ಟ್ರದ ನಿಯೋಗ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವುದು ಯಾವುದೇ ವ್ಯತ್ಯಾಸ ಆಗುವುದಿಲ್ಲ. ಈ ಹಿಂದೆ ಕೂಡ ಮಹಾರಾಷ್ಟ್ರ ಈ ರೀತಿಯ ಪ್ರಯತ್ನ ಮಾಡಿದೆ‌. ಈ ಪ್ರಕರಣ ಸುಪ್ರೀಂ ಕೋರ್ಟ್​​​ನಲ್ಲಿದೆ. ಕೋರ್ಟ್​​ನಲ್ಲಿ ನಮ್ಮ ನ್ಯಾಯ ಸಮ್ಮತ ಪ್ರಕರಣ ಗಟ್ಟಿಯಾಗಿದೆ. ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ ಎಂದಿದ್ದರು.

ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸೋಮವಾರ ಭೇಟಿ ಮಾಡುವಂತೆ ರಾಜ್ಯ ಸಂಸದರಿಗೆ ತಿಳಿಸಿದ್ದೇನೆ. ನಾನೂ ಕೂಡ ರಾಜ್ಯದ ನ್ಯಾಯ ಸಮ್ಮತ ನಿಲುವನ್ನು ತಿಳಿಸಲು ಕೇಂದ್ರ ಗೃಹ ಸಚಿವರನ್ನು ಶೀಘ್ರವೇ ಭೇಟಿ ಮಾಡಲಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.

(ಓದಿ: ಕರ್ನಾಟಕ ಸೇರಲು 11 ಗ್ರಾ. ಪಂಚಾಯಿತಿಗಳಿಂದ ಠರಾವು: ವಿಸರ್ಜನೆ ಎಚ್ಚರಿಕೆ ನೀಡಿದ 'ಮಹಾ' ಸರ್ಕಾರ )

Last Updated : Dec 10, 2022, 1:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.