ETV Bharat / state

ವೈಫಲ್ಯ ಮರೆಮಾಚಲು ಭಾವನಾತ್ಮಕ ವಿಚಾರದತ್ತ ಸರ್ಕಾರ ಜನರ ಗಮನ ಸೆಳೆಯುತ್ತಿದೆ: ಸಿದ್ದರಾಮಯ್ಯ

author img

By

Published : Feb 19, 2022, 6:58 AM IST

ಇಂದು ದೇಶದ ರಾಜಕಾರಣ ಮೂಲಭೂತವಾದಿಗಳಿಂದ ಕಲುಷಿತವಾಗುತ್ತಿದೆ. ಎಬಿವಿಪಿ, ಆರ್​ಎಸ್​ಎಸ್, ಸಂಘ ಪರಿವಾರ ಮೊದಲೂ ಇತ್ತು. ಈಗಲೂ ಇದೆ. ಆದರೆ ಇಂದು ಸಮಾಜದಲ್ಲಿ ಏನು ಆಗುತ್ತಿದೆ ಎನ್ನುವುದನ್ನು ಅರಿಯಬೇಕು. ಈ ಬಗ್ಗೆ ಹರಿಪ್ರಸಾದ್​ಗೆ ಆಳವಾದ ಅರಿವು ಇದೆ. ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದೇಶ ಕೋಮುವಾದದಿಂದ ತತ್ತರಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್​ಗೆ ಅಭಿನಂದನೆ ಸಮಾರಂಭ

ಬೆಂಗಳೂರು: ಬೆಂಗಳೂರಲ್ಲಿ ವಿದ್ಯಾರ್ಥಿ ನಾಯಕರಾಗಿ ಹೊರಹೊಮ್ಮಿದವರು ಮುಂದೆ ಒಂದಲ್ಲಾ ಒಂದು ದಿನ ರಾಜ್ಯದ, ರಾಷ್ಟ್ರ ರಾಜಕಾಣದಲ್ಲಿ ಬಂದೇ ಬರುತ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಬೆಂಗಳೂರಿನ ಟೌನ್​ಹಾಲ್​ನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅಭಿನಂದನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಮಲಿಂಗರೆಡ್ಡಿ ಅವರು ಹರಿಪ್ರಸಾದ್ ಅವರ ಸಮಕಾಲಿನರು. ವಿದ್ಯಾರ್ಥಿ ದೆಸೆಯಲ್ಲಿ ಜತೆಯಾಗಿ ಕೆಲಸ ಮಾಡಿದವರು. ನಾನು ಯಾವತ್ತೂ ಬೆಂಗಳೂರಲ್ಲಿ ಓದಿದವನಲ್ಲ, ಮೈಸೂರಿನಲ್ಲಿ ಓದಿದ್ದು.

ಬೆಂಗಳೂರು ವಿದ್ಯಾರ್ಥಿ ರಾಜಕಾರಣ ಆ ಕಾಲದಲ್ಲಿ ಜೋರಾಗಿತ್ತು. ಹರಿಪ್ರಸಾದ್ 1973-74 ರಲ್ಲಿ ಓದಿದ್ದಾರೆ. ನಾನು ಲಾ ಕಾಲೇಜಿನಲ್ಲಿ 1969 ರಿಂದ 71ರವರೆಗೆ ಇದ್ದೆ. ನಾನೂ ವಿದ್ಯಾರ್ಥಿ ಸಂಘಟನೆಯಲ್ಲಿ ಇದ್ದೆ. ಪದಾಧಿಕಾರಿಯಾಗಿ ಇದ್ದೆವು. ಬೆಂಗಳೂರಿನಲ್ಲಿ ವಿದ್ಯಾರ್ಥಿ ರಾಜಕಾರಣದಷ್ಟು ದೊಡ್ಡ ರಾಜಕಾರಣ ಮೈಸೂರಿನಲ್ಲಿ ಇರಲಿಲ್ಲ. ನಾನು ವಿದ್ಯಾರ್ಥಿಯಾಗಿದ್ದಾಗ, ವಕೀಲನಾದ ಮೇಲೆ ಬೆಂಗಳೂರಿನಲ್ಲಿರುವ ವಿದ್ಯಾರ್ಥಿ ರಾಜಕಾರಣ ಗಮನಿಸುತ್ತಿದ್ದೆ ಎಂದರು.

ಕೆ.ಜೆ ಜಾರ್ಜ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಹರಿಪ್ರಸಾದ್ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಕೆ.ಜೆ. ಜಾರ್ಜ್, ರಾಮಲಿಂಗರೆಡ್ಡಿ, ವಿ.ಎಸ್. ಉಗ್ರಪ್ಪ, ಡಿ.ಕೆ. ಶಿವಕುಮಾರ್, ಸಲೀಂ ಅಹ್ಮದ್, ಎಚ್. ಆಂಜನೇಯ, ಆರಾಧ್ಯ, ನಾರಾಯಣಸ್ವಾಮಿ, ಆರ್.ವಿ. ದೇವರಾಜ್ ಸೇರಿದಂತೆ ಹಲವು ನಾಯಕರು ಬೆಂಗಳೂರಿನಲ್ಲಿ ವಿದ್ಯಾರ್ಥಿ ದೆಸೆಯಿಂದ ಬಂದವರು. ಸಾಕಷ್ಟು ಇಂತ ನಾಯಕರು ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಮಿಂಚುತ್ತಿದ್ದಾರೆ ಎಂದರು.

ಹರಿಪ್ರಸಾದ್ ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್, ಸೇವಾದಳ, ರಾಷ್ಟ್ರ ರಾಜಕಾರಣ, 4 ಅವಧಿಗೆ ರಾಜ್ಯಸಭೆಗೆ ಆಯ್ಕೆಯಾಗಿ ಈಗ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿದ್ದಾರೆ. ರಾಷ್ಟ್ರ, ರಾಜ್ಯ, ವಿದೇಶ ರಾಜಕಾರಣಗಳಲ್ಲಿ ಇವರಿಗೆ ಅಪಾರ ಅನುಭವವಿದೆ. ಲೋಕಸಭೆ, ರಾಜ್ಯಸಭೆಯಲ್ಲಿ ಕಾರ್ಯನಿರ್ವಹಿಸಿದ್ದರಿಂದ ಅವರಿಗೆ ವಿದೇಶಿ ರಾಜಕಾರಣದ ಅರಿವೂ ಇದೆ.

ನನಗೆ ರಾಷ್ಟ್ರ ರಾಜಕಾರಣದ ಮೇಲೆ ಆಸಕ್ತಿ ಇಲ್ಲ. ಎರಡು ಸಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತ ಮೇಲೆ ಸಾಕಪ್ಪಾ ಇದು ಅಂತ ಅನ್ನಿಸಿಬಿಟ್ಟಿದೆ. ನಮ್ಮ ಸರ್ಕಾರ 2018 ರಲ್ಲಿ ಹೋದ ಮೇಲೆ ರಾಹುಲ್ ಗಾಂಧಿಯವರು ರಾಷ್ಟ್ರ ರಾಜಕಾರಣಕ್ಕೆ ಬನ್ನಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ಎಂಬ ಆಹ್ವಾನ ಬಂತು. ನಾನೇ ಹಿಂದೆ ಸರಿದೆ ಎಂದರು.

ಹರಿಪ್ರಸಾದ್ ಅವರಿಗೆ ಕೇಂದ್ರ ರಾಜಕಾರಣದ ಅಪಾರ ಅನುಭವವಿದೆ. ಇಂದಿರಾ, ರಾಜೀವ್, ಸೋನಿಯಾ, ರಾಹುಲ್, ಪ್ರಿಯಂಕಾ ಗಾಂಧಿ ಜತೆ ಇವರು ಕಾರ್ಯ ನಿರ್ವಹಿಸಿದ್ದಾರೆ. ರಾಷ್ಟ್ರೀಯ ನಾಯಕರಲ್ಲಿ ಇಷ್ಟೊಂದು ಮಂದಿ ಜತೆ ಕಾರ್ಯ ನಿರ್ವಹಿಸುವ ಅವಕಾಶ ಇವರಿಗೆ ಮಾತ್ರ ಸಿಕ್ಕಿದೆ.

ಹರಿಪ್ರಸಾದ್​ಗೆ​ ರಾಜಕೀಯ ಬದ್ಧತೆ ಇದೆ. ಇದು ಇದ್ದಾಗ ಮಾತ್ರ ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯ. ಇಷ್ಟು ದೀರ್ಘಾವಧಿ ರಾಜಕೀಯ ಮಾಡಿದ್ದಾರೆ, ಸಾಕಷ್ಟು ಅವಕಾಶ ಸಿಕ್ಕಿತ್ತು. ಆದರೆ ಹಣ ಗಳಿಸುವತ್ತ ಹೋಗಿಲ್ಲ. ಕೈ ಬಾಯಿ ಶುದ್ಧವಾಗಿ ಇಟ್ಟುಕೊಂಡಿದ್ದಾರೆ ಎಂದರು.

ಇದನ್ನೂ ಓದಿ: ಅಹೋರಾತ್ರಿ ಧರಣಿ: ಪ್ರತಿಭಟನೆ ಜೊತೆಗೆ ಕೈ ನಾಯಕರಿಂದ ಅಂತಾಕ್ಷರಿ ಹಾಡು!

ಇಂದು ದೇಶದ ರಾಜಕಾರಣ ಮೂಲಭೂತವಾದಿಗಳಿಂದ ಕಲುಷಿತವಾಗುತ್ತಿದೆ. ಎಬಿವಿಪಿ, ಆರ್​ಎಸ್​ಎಸ್, ಸಂಘ ಪರಿವಾರ ಮೊದಲೂ ಇತ್ತು. ಈಗಲೂ ಇದೆ. ಆದರೆ, ಇಂದು ಸಮಾಜದಲ್ಲಿ ಏನು ಆಗುತ್ತಿದೆ ಎನ್ನುವುದನ್ನು ಅರಿಯಬೇಕು. ಈ ಬಗ್ಗೆ ಹರಿಪ್ರಸಾದ್​ಗೆ ಆಳವಾದ ಅರಿವು ಇದೆ. ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದೇಶ ಕೋಮುವಾದದಿಂದ ತತ್ತರಿಸಿದೆ.

ಎಲ್ಲಾ ಕ್ಷೇತ್ರದಲ್ಲಿ ಕೋಮುವಾದ ತಂದಿಡುತ್ತಿದ್ದಾರೆ. ನೈಜ ಸಮಸ್ಯೆಗಳನ್ನು ಬದಿಗೊತ್ತಿ, ಜನರನ್ನು ದಾರಿತಪ್ಪಿಸಿ, ಜನರಿಗೆ ಸುಳ್ಳುಹೇಳಿ ಇಂದು ಹಿಂದುತ್ವದ ಅಮಲನ್ನು ತುಂಬುವ ಕಾರ್ಯ ಮಾಡುತ್ತಿದ್ದಾರೆ. ಹಿಜಾಬ್ ಹೆಸರಿನಲ್ಲಿ ಗಲಾಟೆ ಮಾಡುತ್ತಿದ್ದಾರೆ. ನೈಜ ಸಮಸ್ಯೆಗಳ ಬಗ್ಗೆ ಜನರ ಗಮನ ಹರಿಯದಿರಲಿ ಎಂದು ಇಂತ ವಿಚಾರ ಇಟ್ಟು ಜನರ ದಾರಿ ತಪ್ಪಿಸಲಾಗುತ್ತಿದೆ.

ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಸಣ್ಣ ಕೈಗಾರಿಕೆಗಳ ಶೇ.60 ರಷ್ಟು, ಶೇ.50ರಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಸಮಸ್ಯೆಯಿಂದ ಜನರನ್ನು ಬೇರೆಡೆಗೆ ತಿರುಗಿಸಲು ಬೇರೆ ವಿಚಾರ ಸಿಗದೆ ಭಾವನಾತ್ಮಕ ವಿಚಾರ ಮುಂದಿಟ್ಟು ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಈಶ್ವರಪ್ಪ ಮತಾಂಧ: ಈಶ್ವರಪ್ಪ ಎಂಬ ಮತಾಂಧ ದೇಶದ್ರೋಹದ ಕೆಲಸ ಮಾಡಿದ್ದಾನೆ. ದೇಶದ ಇತಿಹಾಸ ಗೊತ್ತಿದ್ದು ಕೂಡ, ಜನರಿಗೆ ತಪ್ಪು ಮಾಹಿತಿ ನೀಡುವ ಕಾರ್ಯ ಮಾಡಿದ್ದಾನೆ. ನರೇಂದ್ರ ಮೋದಿ ಜನರಿಗೆ ಉದ್ಯೋಗ ಕಸಿದುಕೊಂಡಿದ್ದಾರೆ. ಕೇಳಿದರೆ ಪಕೋಡಾ ಮಾರೋಕೆ ಹೋಗಿ ಅನ್ನುತ್ತಾರೆ. ದೇಶದ ಮಾನ ಹರಾಜು ಹಾಕಿದ್ದಾರೆ. ದಿವಾಳಿಗೆ ಕೊಂಡೊಯ್ದಿದ್ದಾರೆ ಎಂದರು.

ಹರಿಪ್ರಸಾದ್​ ತುಂಬಾ ಹಿರಿಯರು- ಡಿಕೆಶಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ನಾನು ಕೆಪಿಸಿಸಿ ಅಧ್ಯಕ್ಷನಾದ ಬಳಿಕ ರಾಜ್ಯಕ್ಕೆ ಬರಲು ಹರಿಪ್ರಸಾದ್ ಅವರಿಗೆ ಒಂದು ಅವಕಾಶ ಒದಗಿ ಬಂದಿದೆ. ಯಾರಾದರೂ ನಾನು ಹರಿಪ್ರಸಾದ್ ಅವರಿಗೆ ಅಧಿಕಾರ ಕೊಟ್ಟಿದ್ದೀನಿ, ಕೊಡಿಸಿದ್ದೀನಿ ಅಂದರೆ ಅದು ತಪ್ಪು. ಅವರು ತುಂಬಾ ಹಿರಿಯರು.

ವಿದ್ಯಾರ್ಥಿ ನಾಯಕರಾಗಿ ಬೆಳೆದು ಏಳು ಸಾರಿ ಚುನಾವಣೆಗೆ ನಿಂತು ಗೆದ್ದಿದ್ದೇವೆ ಎಂಬ ಹೆಮ್ಮೆ ಇದೆ. ಪಕ್ಷಕ್ಕೆ ನಿಷ್ಠರಾಗಿರುವುದೇ ನಮ್ಮ ಶಕ್ತಿ. ನಾಯಕತ್ವವನ್ನು ಪ್ರತಿಪಾದಿಸಿಕೊಂಡು ಶಿಸ್ತಿನ ಸಿಪಾಯಿಯಾಗಿ ಬೆಳೆದಿದ್ದಾರೆ. ಅವರು ರಾಜ್ಯದಲ್ಲಿ ಇದ್ದಿದ್ದರೆ ನಾಲ್ಕೈದು ಸಾರಿ ಮಂತ್ರಿ ಆಗಿರುತ್ತಿದ್ದರು. ಅವರು ಅಧಿಕಾರವನ್ನು ಹುಡುಕಿ ಹೋಗಿರಲಿಲ್ಲ.

ಸೂಕ್ತ ವ್ಯಕ್ತಿ, ಸೂಕ್ತ ಸ್ಥಾನಕ್ಕೆ ನೇಮಕವಾಗಿದ್ದಾರೆ. ಪ್ರತಿಪಕ್ಷ ಸ್ಥಾನಕ್ಕೆ ಸೂಕ್ತ ಅಲಂಕಾರವಾಗುವ ವ್ಯಕ್ತಿ ಹರಿಪ್ರಸಾದ್ ಎಂದು ಕೆಲವರು ನನಗೆ ಹೇಳಿದರು. ಆದರೆ ಇವರ ಆಯ್ಕೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮಾಡಿದ್ದಾರೆ. ಹಲವಾರು ನಾಯಕರನ್ನು ಹುಟ್ಟು ಹಾಕಿದ ಶಕ್ತಿ ಇವರದ್ದು ಎಂದರು.

ಆದರ್ಶ ಇಲ್ಲದೇ ಬದುಕಿದರೆ ಅವಮಾನ: ಸಾಧನೆ ಇಲ್ಲದೇ ಸತ್ತರೆ ಅವಮಾನ, ಆದರ್ಶ ಇಲ್ಲದೇ ಬದುಕಿದರೆ ಅವಮಾನ. ಹರಿಪ್ರಸಾದ್ ಸಾಧನೆ ಅಂದರೆ ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸಿದ್ದಾರೆ. ಪಕ್ಷ ನಿಷ್ಠೆ ಹೆಚ್ಚಿದೆ. ಪ್ರತಿಯೊಬ್ಬರೂ ಇಂದು ಹಣ, ಕ್ಯಾಬಿನ್​, ಕ್ಯಾಬಿನೆಟ್ ಕೇಳುತ್ತಿದ್ದಾರೆ. ಎಲ್ಲರಿಗೂ ಅಧಿಕಾರ ಸಿಗಲಿದೆ. ಯಾರೂ ಆತಂಕ ಪಡುವುದು ಬೇಡ. ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡಿ.

ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಉಪ ಚುನಾವಣೆ, ಮತ್ತಿತರ ಚಟುವಟಿಕೆಗಳು ಮಧ್ಯೆ ಬಂದು ಆಗಲಿಲ್ಲ. ಸದ್ಯದಲ್ಲೇ ಈ ತಿಂಗಳಲ್ಲೇ ಮಾಡಲು ಪ್ರಯತ್ನಿಸುತ್ತೇನೆ. ಎಲ್ಲರಿಗೂ ಅವಕಾಶ ನೀಡುವುದು ಕಷ್ಟ. ನಿಷ್ಠವಂತ ಕಾರ್ಯಕರ್ತರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ತಳಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಿ. ನಿಮ್ಮ ನಿಮ್ಮ ಭೂತ್​ನಲ್ಲಿ ಸದಸ್ಯತ್ವ ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿ ಎಂದು ಸಲಹೆ ನೀಡಿದರು.

ನನ್ನನ್ನು ಜೈಲಿಗೆ ಕಳುಹಿಸಿದ್ದು ನೀವು- ಡಿಕೆಶಿ: ಮೂರ್ತಿ ಮಾಡಬೇಕಾದರೆ ಸಾಕಷ್ಟು ಉಳಿ ಏಟು ಬೀಳುತ್ತದೆ. ಉಳಿಗೆ ನೋವಾಗುವುದಿಲ್ಲ. ಏಟು ತಿಂದ ಶಿಲೆಗೆ ನೋವಾಗಿರುತ್ತದೆ. ಹೇಳುವುದು ಸುಲಭ, ಅವನ್ಯಾವನೋ ಹೇಳ್ತಾ ಇದ್ದಾ, ಜೈಲಿಗೆ ಹೋಗಿ ಬಂದವನು, ಜೈಲಿಗೆ ಹೋಗಿ ಬಂದವನು ಅಂತಾ. ನಾನು ಜೈಲಿಗೆ ಹೋಗಿದ್ನಾ. ಲಂಚ ಹೊಡೆದಿದ್ನಾ, ಕೇಸಲ್ಲಿ ಸಿಕ್ಕಿದ್ನಾ. ನನ್ನನ್ನು ಜೈಲಿಗೆ ಕಳುಹಿಸಿದ್ದು ನೀವು. ಸಮಯ ಬಂದಾಗ ಇದಕ್ಕೆಲ್ಲಾ ಉತ್ತರ ಕೊಡುತ್ತೇನೆ. ಇಂತದ್ದಕ್ಕೆಲ್ಲಾ ಬಗ್ಗುವನಲ್ಲ ನಾನು.

ಇನ್ನೂ ಏನೇನು ಪ್ಲಾನ್ ಹಾಕುತ್ತಿದ್ದಾರೆ ಎನ್ನುವ ಅರಿವಿದೆ. ಬಗ್ಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷದ ನಾಯಕನ ಪರವಾಗಿ ನಿಂತಿದ್ದಕ್ಕೆ ಎಷ್ಟು ಸಮಸ್ಯೆ ಬಂತು ಎನ್ನುವುದು ಗೊತ್ತಿದೆ. ಮುಂದೆ ಇದಕ್ಕೆಲ್ಲಾ ಉತ್ತರ ಕೊಡುತ್ತೇನೆ. ರಾಜ್ಯಕ್ಕೆ, ದೇಶಕ್ಕೆ ಕಳಂಕವಾಗಿರುವ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಬೇಕಿದೆ ಎಂದು ಹೇಳಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಅಭಿನಂದಿಸಲಾಯಿತು. ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.