ಬೆಂಗಳೂರು: ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ರೈತರ ಒಪ್ಪಂದದ ಮೇಲೆ ಭೂ ಸ್ವಾಧೀನ:
ವಿಕಾಸಸೌಧದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಇನ್ವೆಸ್ಟ್ ಕರ್ನಾಟಕ(Invest Karnataka)ಕ್ಕಿಂತ ಹಲವು ಕಾರ್ಯಕ್ರಮಗಳನ್ನು ಆರು ಕಡೆಗಳಲ್ಲಿ ನಡೆಸ್ತೇವೆ. ರಾಜ್ಯದಲ್ಲಿ 50 ಸಾವಿರ ಎಕರೆ ಸ್ವಾಧೀನಪಡಿಸಿಕೊಳ್ಳುತ್ತೇವೆ. ಎಫ್ಪಿಸಿ ಮಾಡುವ ಚಿಂತನೆ ನಡೆದಿದೆ. ರೈತರ ಒಪ್ಪಂದದ ಮೇಲೆ ಸ್ವಾಧೀನ ಮಾಡ್ತೇವೆ. ಉದ್ಯಮ ಸ್ಥಾಪನೆಗೆ ಅನುಕೂಲ ಮಾಡಿ ಕೊಡ್ತೇವೆ ಎಂದು ಮಾಹಿತಿ ನೀಡಿದರು.
ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶ:
ಉದ್ಯಮಿ ಸಚಿನ್ ನಾರಾಯಣ್ ಭೂಮಿ ಪಡೆದಿದ್ದರು. ಸಚಿನ್ ನಾರಾಯಣ್ ಕೂಡ ಆಪ್ತರೇ. ಅವರು ಬಳಕೆ ಮಾಡದಿರುವ ಬಗ್ಗೆ ಮಾಹಿತಿಯಿಲ್ಲ. ಬಳಕೆ ಆಗದ ಭೂಮಿ ಬಗ್ಗೆ ಮಾಹಿತಿ ಪಡೆಯುತ್ತೇವೆ. ಪ್ರಸ್ತುತ 12 ಸಾವಿರ ಎಕರೆ ಭೂಮಿ ವಾಪಸ್ ಪಡೆದಿದ್ದೇವೆ. ಕೈಗಾರಿಕೆ ಉದ್ದೇಶಕ್ಕೆ ಪಡೆದು ಬಳಕೆಯಾಗದ ಭೂಮಿ ಇದಾಗಿದೆ. ಉಪಯೋಗವಾಗದ ಭೂಮಿ ವಾಪಸ್ ಪಡೆದಿದ್ದೇವೆ. ಎಸ್ಸಿ, ಎಸ್ಟಿಯವರಿಗೆ ಯೋಜನೆ ಸಿಗಬೇಕು. ಅವರು ಕೂಡ ಸಮಾಜದಲ್ಲಿ ಮೇಲಕ್ಕೆ ಬರಬೇಕು. ಹಾಗಾಗಿ ಕೆಲವು ಯೋಜನೆಗಳನ್ನ ರೂಪಿಸುತ್ತಿದ್ದೇವೆ. ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದರು.
ತ್ರೈಮಾಸಿಕದಲ್ಲಿ ನಾವೇ ಮೊದಲು:
ನವೆಂಬರ್ನಲ್ಲಿ ಸಮಾವೇಶ ನಡೆಯಲಿದೆ. ಸಿಎಂ ಜೊತೆ ಚರ್ಚಿಸಿ ದಿನಾಂಕ ನಿಗದಿ ಮಾಡ್ತೇವೆ. ಮೂರು ದಿನ ದುಬೈ ಫೆಸ್ಟಿವಲ್ನಲ್ಲಿ ಭಾಗವಹಿಸುತ್ತೇನೆ. ಅಕ್ಟೋಬರ್ನಲ್ಲಿ ದುಬೈಗೆ ತೆರಳುತ್ತೇವೆ. ದುಬೈನಲ್ಲಿ ನಾವು ಸ್ಟಾಲ್ ತೆಗೆಯುತ್ತಿದ್ದೇವೆ. ತ್ರೈಮಾಸಿಕದಲ್ಲಿ ನಾವು ಮೊದಲಿದ್ದೇವೆ. 62 ಸಾವಿರ ಕೋಟಿ ವಿದೇಶಿ ನೇರ ಬಂಡವಾಳ ಆಕರ್ಷಿಸಲಾಗಿದೆ. ಹೂಡಿಕೆದಾರದ ಸ್ನೇಹಿತ್ವದಲ್ಲಿ ಶೇ.60ರಷ್ಟು ಇದ್ದೇವೆ. ಪೂರಕ ನೆರವಿನಲ್ಲಿ ಶೇ.100 ಇದ್ದೇವೆ. ಬರುವ ದಿನಗಳಲ್ಲಿ ಮತ್ತಷ್ಟು ಗುರಿಸಾಧನೆ ಮಾಡ್ತೇವೆ. ಹಿಂದಿನ ಸಮಾವೇಶಕ್ಕಿಂತ ಹೆಚ್ಚು ಬಂಡವಾಳ ಆಕರ್ಷಿಸುತ್ತೇವೆ. ರಾಜ್ಯದಲ್ಲಿ ನಾಲ್ಕು ಡಿವಿಜನ್ಗಳಿವೆ. ಇದಕ್ಕೆ ಮತ್ತೆರಡು ಡಿವಿಜನ್ ವಿಂಗಡಣೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ಕೈಗಾರಿಕಾ ಅದಾಲತ್ ಮಾಡ್ತೇವೆ ಎಂದರು.
ಭೂಮಿ ವಾಪಸ್ಗೆ ಸಮಯಾವಕಾಶ:
ಭೂಮಿ ವಾಪಸ್ಗೆ ಸಮಯಾವಕಾಶ ನೀಡ್ತೇವೆ. 15 ದಿನಗಳ ಕಾಲ ಸಮಯಾವಕಾಶ ನೀಡ್ತೇವೆ. ಅವರು ಪೂರಕ ವಿವರಣೆ ಕೊಟ್ಟರೆ ಸರಿ. ಇಲ್ಲವಾದರೆ ಭೂಮಿ ವಾಪಸ್ ಪಡೆಯುತ್ತೇವೆ. ಪಾಂಡವಪುರ ಸಕ್ಕರೆ ಕಾರ್ಖಾನೆ ವೇತನ ನೀಡಿಲ್ಲ ಎಂಬ ವಿಚಾರ ಕುರಿತು ಮಾತನಾಡಿ, ವೇತನ ಕೊಟ್ಟಿಲ್ಲವೆಂಬುದು ಸುಳ್ಳು. ಅಲ್ಲಿ ಯಾವುದೇ ಸಮಸ್ಯೆಯಿಲ್ಲ. ಪ್ರತಿಭಟನೆ ಬಗ್ಗೆ ಮಾಹಿತಿ ಪಡೆಯುತ್ತೇನೆ. ನನಗೂ ಕಾರ್ಖಾನೆಗೂ ಯಾವುದೇ ಸಂಬಂಧವಿಲ್ಲ. ನಾನು ಅದರಲ್ಲಿ ಯಾವ ಭಾಗವೂ ಇಲ್ಲ. ನಾನು 2008ರಲ್ಲೇ ನಿರಾಣಿ ಗ್ರೂಪ್ಗೆ ರಿಸೈನ್ ಮಾಡಿದ್ದೇನೆ. ನಾನು ಅಲ್ಲಿ ಡೈರೆಕ್ಟರ್ ಕೂಡ ಅಲ್ಲ, ಏನೂ ಇಲ್ಲ. ಅದಕ್ಕೆ ಸಂಬಂಧಿಸಿದವರು ಉತ್ತರ ಕೊಡ್ತಾರೆ ಎಂದು ಸಚಿವ ನಿರಾಣಿ ವಿವರಿಸಿದರು.
ಪಾರ್ಟಿ ನಾಯಕರು ಏನ್ ಹೇಳ್ತಾರೋ ಅದನ್ನ ಕೇಳ್ತೇನೆ:
ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ನೊಂದಿಗೆ ಅಧಿಕಾರ ಹಿಡಿಯುವ ವಿಚಾರ ಕುರಿತು ಮಾತನಾಡಿ, ಜೆಡಿಎಸ್ ಬೆಂಬಲದ ಬಗ್ಗೆ ಪಕ್ಷದ ಅಧ್ಯಕ್ಷರು ನಿರ್ಧರಿಸ್ತಾರೆ. ಪಾರ್ಟಿ ನಾಯಕರು ಏನ್ ಹೇಳ್ತಾರೋ ಅದನ್ನ ಕೇಳ್ತೇನೆ ಎಂದರು.
ಇದೇ ವೇಳೆ ಜಾತಿ ಸಮೀಕ್ಷೆಗೆ ವೀರಶೈವ ಲಿಂಗಾಯತ ಸಮುದಾಯ ವಿರೋಧ ವಿಚಾರ ಮಾತನಾಡಿ, ಈ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ವೀರಶೈವ ಸಮಾಜದ ನಮ್ಮ ಮುಖಂಡರಾದ ಶ್ಯಾಮನೂರು ಶಿವಶಂಕರಪ್ಪ ಸೇರಿದಂತೆ ಹಿರಿಯರು ಮಾತನಾಡಲಿದ್ದಾರೆ. ನಾನು ವೈಯಕ್ತಿಕವಾಗಿ ಯಾವುದೇ ಹೇಳಿಕೆ ಕೊಡಲ್ಲ ಎಂದು ಸಚಿವ ನಿರಾಣಿ ಹೇಳಿದ್ರು.