ETV Bharat / state

ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿ: ಬಸವರಾಜ ಬೊಮ್ಮಾಯಿ - ETV Bharath Kannada news

ಭಾರತದ ಶೇ.46 ರಷ್ಟು ವಿದ್ಯುತ್ ಕರ್ನಾಟಕ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ನವೀಕರಿಸಬಹುದಾದ ಇಂಧನವನ್ನು ವಿದ್ಯುತ್ ಉತ್ಪಾದನೆ ಹಾಗೂ ಸಂಗ್ರಹಣೆ ಹೆಚ್ಚಿಸಲು ಬಳಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

Karnataka is a leader in renewable energy generation
ಬಸವರಾಜ ಬೊಮ್ಮಾಯಿ
author img

By

Published : Dec 17, 2022, 8:30 AM IST

ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿ

ಬೆಂಗಳೂರು: ಸುಮಾರು 2 ಲಕ್ಷ ಕೋಟಿಯ ಬಂಡವಾಳ ಹೂಡಿಕೆ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಹರಿದುಬಂದಿದ್ದು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೇಂದ್ರ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ, ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಡಾ. ಹರ್ ದೀಪ್ ಸಿಂಗ್ ಪುರಿ ಅವರೊಂದಿಗೆ ಇಂಡಿಯಾ ಎನರ್ಜಿ ವೀಕ್ 2023 ಯ ಕರ್ಟನ್ ರೈಸರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಏಷ್ಯಾದಲ್ಲೇ ಮೊದಲ ಜಲವಿದ್ಯುತ್ ಶಕ್ತಿ ಘಟಕವನ್ನು ಪ್ರಾರಂಭಿಸಿದ ರಾಜ್ಯ ಕರ್ನಾಟಕ. 31 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ರಾಜ್ಯದಲ್ಲಾಗುತ್ತಿದ್ದು ಅದರಲ್ಲಿ ಅರ್ಧದಷ್ಟು ನವೀಕರಿಸಬಹುದಾದ ಇಂಧನವಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಹತ್ತಿರ ಸೋಲಾರ್ ಪಾರ್ಕ್​ನ್ನು ಸ್ಥಾಪಿಸಲಾಗಿದೆ. ಭಾರತದ ಶೇ.46 ರಷ್ಟು ವಿದ್ಯುತ್ ಕರ್ನಾಟಕ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ಆದರೆ ವಿದ್ಯುತ್ ಸಂಗ್ರಹಣೆ ಸವಾಲಿನ ವಿಷಯವಾಗಿದೆ. ನವೀಕರಿಸಬಹುದಾದ ಇಂಧನವನ್ನು ವಿದ್ಯುತ್ ಉತ್ಪಾದನೆ ಹಾಗೂ ಸಂಗ್ರಹಣೆ ಹೆಚ್ಚಿಸಲು ಬಳಸಲಾಗುತ್ತದೆ. ರಾಜ್ಯದ ಹೈಡ್ರೋಜನ್ ಸೈನ್ಸ್ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯೂ ಆಗುತ್ತಿದೆ. ಇದಲ್ಲದೇ ಸಮುದ್ರದನೀರಿನಿಂದ ಅಮೋನಿಯಾ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ಪಳೆಯುಳಿಕೆ ಇಂಧನದ ಕಡಿಮೆ ಬಳಕೆ ಹಾಗೂ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಸಮತೋಲನವನ್ನು ಕಂಡುಕೊಳ್ಳಬೇಕಿದೆ ಎಂದರು.

ಹಸಿರು ಇಂಧನ ಉತ್ಪಾದನೆಗೆ ಒತ್ತು: ಇಂಧನ ಕ್ಷೇತ್ರದಲ್ಲಿ ಉತ್ತಮ ಆರ್​ಆ್ಯಂಡ್​ಡಿ ಕೇಂದ್ರಗಳು ರಾಜ್ಯದಲ್ಲಿವೆ. ರಾಜ್ಯದಲ್ಲಿ ಉತ್ತಮ ರೀತಿಯ ವಿದ್ಯುತ್ ಉತ್ಪಾದನೆ ಹಾಗೂ ಪ್ರಸರಣಾ ವ್ಯವಸ್ಥೆಗಳಿವೆ. ಕೇಂದ್ರ ಸರ್ಕಾರದ ಒಂದು ದೇಶ, ಒಂದು ಗ್ರಿಡ್ ನೀತಿ , ಇಂಧನ ಕ್ಷೇತ್ರದಲ್ಲಿ ಸುಧಾರಣೆ ತರಲಿದೆ. ದೇಶದಾದ್ಯಂತ ವಿದ್ಯುತ್ ಪ್ರಸರಣವನ್ನು ಸರಳೀಕರಿಸುವ ಯೋಜನೆ ಇದಾಗಿದೆ. ದೇಶಕ್ಕೆ ಸಾಕಾಗುವಷ್ಟು ಇಂಧನ ಉತ್ಪಾದನೆ ಆಗುವತ್ತ ಪ್ರಯತ್ನಗಳಾಗುತ್ತಿದೆ. ಹಸಿರು ಇಂಧನದ ಉತ್ಪಾದನೆ ಹಾಗೂ ಬಳಕೆಯ ಬಗ್ಗೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಗಮನಹರಿಸಬೇಕು. ಇಂಡಿಯಾ ಎನರ್ಜಿ ವೀಕ್ 2023 ಕಾರ್ಯಕ್ರಮ ಉದ್ದೇಶ ಸಾಕಾರಗೊಳ್ಳಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.

ಇಂಧನ ಶಕ್ತಿ ಹಾಗೂ ಪರಿಸರದಲ್ಲಿ ಸಮತೋಲನ ಸಾಧಿಸಬೇಕು: ಮನುಷ್ಯ ಸಾಹಸಪ್ರಿಯ. ತನ್ನ ಸಾಹಸದಿಂದ ಹೊಸ ಅವಿಷ್ಕಾರಗಳನ್ನು ಮಾಡುತ್ತಾ ಬಂದಿದ್ದಾನೆ. ಮೂಲಭೂತ ಸಂಶೋಧನೆಗಳನ್ನು ಪ್ರತ್ಯೇಕ ವ್ಯಕ್ತಿಗಳು ಮಾಡಿರುವುದೇ ಹೊರತು ಸಂಸ್ಥೆಗಳಲ್ಲ. ನ್ಯೂಟನ್, ಥಾಮಸ್ ಆಲ್ವಾ ಎಡಿಸನ್ ನಂತಹವರು ಪ್ರತ್ಯೇಕ ವ್ಯಕ್ತಿಗಳ ಸಂಶೋಧನೆಗಳು ಪ್ರಪಂಚಕ್ಕೆ ಒಳಿತನ್ನು ತಂದಿದೆ. ಮನುಷ್ಯನ ಎಲ್ಲ ಅವಶ್ಯಕತೆಗಳನ್ನು ನಿಸರ್ಗ ಪೂರೈಸುತ್ತದೆ. ಸುಸ್ಥಿರ ಅಭಿವೃದ್ಧಿ ಹಾಗೂ ಸುಸ್ಥಿರ ಪರಿಸರವನ್ನು ಖಾತ್ರಿಪಡಿಸುವ ಸಂಶೋಧನೆಗಳಾಬೇಕು. ಇಂಧನ ಮತ್ತು ಪರಿಸರ ವಿಜ್ಞಾನ ಎರಡೂ ಸಮತೋಲನವನ್ನು ಸಾಧಿಸಬೇಕು. ಪಳೆಯುಳಿಕೆ ಇಂಧನದಿಂದ ಪರಿಸರದಲ್ಲಿ ಅಸಮತೋಲನತೆಯನ್ನು ಸೃಷ್ಟಿಸಿದೆ. ಅಭಿವೃದ್ಧಿಗೆ ಇಂಧನ ಶಕ್ತಿ ಬೇಕು ಎಂದರು.

ಇದನ್ನೂ ಓದಿ: ನೇಕಾರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ: ನೇಕಾರ ಸಮ್ಮಾನ್ ಯೋಜನೆಗೆ ಸಿಎಂ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.