ETV Bharat / state

ಕುರುಬ ಸಮುದಾಯವನ್ನು ಎಸ್​​ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು: ಸಿಎಂ ಬೊಮ್ಮಾಯಿ - ಕಾಡು ಕುರುಬ

ಕಾನೂನು ಪ್ರಕಾರ ಕುಲಶಾಸ್ತ್ರ ಅಧ್ಯಯನ ವರದಿಯಲ್ಲಿನ ಅರ್ಹತೆಗಳನ್ನು ಪರಿಗಣಿಸಿ ಕುರುಬ ಸಮುದಾಯವನ್ನು ಎಸ್​​ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Basavaraj Bommai
ಸಿಎಂ ಬೊಮ್ಮಾಯಿ
author img

By

Published : Mar 25, 2023, 7:39 AM IST

ಬೆಂಗಳೂರು: ಕಾಡು ಕುರುಬ ಹಾಗೂ ಗೊಂಡ ಕುರುಬ ಪಂಗಡವನ್ನು ಎಸ್​​ಟಿ ಮೀಸಲಾತಿ ಪಟ್ಟಿಗೆ ಸೇರಿಸುವ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಲು ಸಂಬಂಧಿತ ಇಲಾಖೆಗೆ ಸೂಚನೆ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 4 ಜಿಲ್ಲೆಗಳಲ್ಲಿರುವ ಕುರುಬ ಸಮುದಾಯದ ಪಂಗಡವಾದ ಕಾಡು ಕುರಬ ಹಾಗೂ ಗೊಂಡ ಕುರುಬರನ್ನು ಶಿಫಾರಸು ಮಾಡಿದೆ. ಮೈಸೂರು ವಿವಿಯ ಮಾನವ ಶಾಸ್ತ್ರ ಅಧ್ಯಯನ ವಿಭಾಗಕ್ಕೆ ಕುಲ‌ಶಾಸ್ತ್ರ ಅಧ್ಯಯನ ಮಾಡುವಂತೆ ತಿಳಿಸಲಾಗಿತ್ತು. ಅವರು ನಿನ್ನೆ ಅಧ್ಯಯನ ವರದಿ ನೀಡಿದ್ದರು.‌ ಅದು ಕೂಡ ಸಂಪುಟದಲ್ಲಿ ಚರ್ಚೆ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

"ಇದರಲ್ಲಿ ನಮ್ಮ ಪಾತ್ರ ಇಲ್ಲ. ಯಾವ ರೀತಿ ಎಸ್​​ಸಿ ಹಾಗೂ ಎಸ್​ಟಿ ಮೀಸಲಾತಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ. ಈ ಸಂಬಂಧ ಸಂಬಂಧಿತ‌ ಇಲಾಖೆಗೆ ಶಿಫಾರಸು ಮಾಡಲು ನಿರ್ದೇಶನ ನೀಡಲಾಗಿದೆ. ಕಾನೂನು ಪ್ರಕಾರ, ಕುಲಶಾಸ್ತ್ರ ಅಧ್ಯಯನ ವರದಿಯಲ್ಲಿನ ಅರ್ಹತೆಗಳನ್ನು ಪರಿಗಣಿಸಿ ಕೇಂದ್ರಕ್ಕೆ ಶಿಫಾರಸು ಮಾಡುವ ನಿಟ್ಟಿನಲ್ಲಿ ಮುಂದಿನ‌ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆಗೆ ಸೂಚನೆ ನೀಡಲಾಗಿದೆ" ಎಂದು ಸಿಎಂ ಸ್ಪಷ್ಟಪಡಿಸಿದರು.

ಜಂಗಮರಿಗೆ ಎಸ್​​ಟಿ ಸರ್ಟಿಫಿಕೇಟ್ ನೀಡುವ ವಿಚಾರವಾಗಿ ಒಂದು ಸಮಿತಿ ಮಾಡಿದ್ದೇವೆ. ಆ ಸಮಿತಿಯ ವರದಿ ಬಂದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಣ್ಣ ಸಣ್ಣ ಸಮಾಜ ಇದೆ. ಅವು ಯಾವ ಲೀಸ್ಟ್‌ನಲ್ಲೂ ಇಲ್ಲ. ಅದರ ವರದಿ ಪಡೆಯಲಾಗಿದೆ. ಅದರ ಸಂಪೂರ್ಣ ಅಧ್ಯಯನ ಮಾಡಿ, ಮುಂದಿನ ಕ್ಯಾಬಿನೆಟ್​​​ನಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.

ಸಂಪುಟದ ಇತರ ಪ್ರಮುಖ ತೀರ್ಮಾನ:1. -2022-23 ಸಾಲಿನಿಂದ ಪ್ರಾರಂಭವಾಗಿರುವ ಪರಿಷ್ಕೃತ ಯಶಸ್ವಿನಿ ಯೋಜನೆಯಡಿ ಬರುವ ಕೆಲವು ಚಿಕಿತ್ಸೆಗಳಿಗೆ ಹಿಂದಿನ ಯಶಸ್ವಿನಿ ಯೋಜನೆಯ ದರಗಳನ್ನೇ ಅಳವಡಿಸಿಕೊಳ್ಳಲು 24.01.2023 ರಂದು ಹೊರಡಿಸಿರುವ ಸರ್ಕಾರಿ ಆದೇಶಕ್ಕೆ ಘಟನೋತ್ತರ ಅನುಮೋದನೆ.

2.ಕೇಂದ್ರ ಪುರಸ್ಕೃತ ಯೋಜನೆಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಯೋಜನೆಯಡಿ ಒಟ್ಟು 66.99 ಕೋಟಿ ಹಾರ್ಡ್ ವೇರ್ ಸಾಮಾಗ್ರಿಗಳನ್ನು ಖರೀದಿಸಲು ಅನುಮೋದನೆ.

3. ಅಂಗವಿಕಲ ಸರ್ಕಾರಿ ನೌಕರರಿಗೆ ಗುಂಪು ಡಿ, ಗುಂಪು ಸಿ ವೃಂದಗಳಿಗೆ ನೀಡುವ ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿ ಕಲ್ಪಿಸಲು ಒಪ್ಪಿಗೆ.

4. ನೂತನ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರವನ್ನು ರೂ. 592.86 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.

5. ಅನುಸೂಚಿತ ಜಾತಿ ಮತ್ತು ಅನುಸೂಚಿತ ವರ್ಗಗಳ ಗುತ್ತಿಗೆದಾರರಿಗೆ ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ ಗುತ್ತಿಗೆ ಮೀಸಲಾತಿ ಮಿತಿಯನ್ನು ರೂ. 50.00 ಲಕ್ಷಗಳಿಂದ ರೂ. 1 ಕೋಟಿಗೆ ಹೆಚ್ಚಿಸುವ" ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಅಧಿನಿಯಮ 2023"ನ್ನು ಅಧ್ಯಾದೇಶ ರೂಪದಲ್ಲಿ ಹೊರಡಿಸುವ ಬಗ್ಗೆ ಅನುಮೋದನೆ.

6. ರಾಜ್ಯದ ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳಲ್ಲಿನ 10 ಮಾದರಿ ಪ.ಜಾತಿ/ಪ.ವರ್ಗದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಟ್ಟಡ ನಿರ್ಮಾಣ ಕಾಮಗಾರಿಯ ಮೂಲ ಅಂದಾಜು ರೂ. 237.50 ಕೋಟಿಗಳಿದ್ದು, ಪರಿಷ್ಕೃತ ಅಂದಾಜು ರೂ. 347.35 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ.

7. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 11 ಕ್ರಿಮಿನಲ್ ಮೊಕದಮೆಗಳನ್ನು ಅಭಿಯೋಜನೆಯಿಂದ ಹಿಂಪಡೆತಕ್ಕೆ ಸಮ್ಮತಿ.

8. ಕರ್ನಾಟಕ ಗೃಹ ಮಂಡಳಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿ, ಪುಲಿಮಂಚಿ ಹಾಗೂ ಸಸಿಮಾಕನಹಳ್ಳಿ ಗ್ರಾಮದ ಒಟ್ಟು 71 ಎಕರೆ 29 ಗುಂಟೆ ಜಮೀನುಗಳನ್ನು ಶೇ. 50:50 ರ ಅನುಪಾತದ ಪಾಲುದಾರಿಕೆಯಡಿಯಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಭೂಮಾಲೀಕರಿಗೆ ನೀಡಲು ಹಾಗೂ ಪ್ರತಿ ಎಕರೆಗೆ ರೂ. 15 ಲಕ್ಷಗಳ ಮುಂಗಡ ಹಣವನ್ನು ಭೂ ಮಾಲೀಕರಿಗೆ ನೀಡಲು ಹಾಗೂ ರೂ. 113.77 ಕೋಟಿಗಳ ಮೊತ್ತದಲ್ಲಿ ವಸತಿ ಯೋಜನೆ ಕೈಗೊಳ್ಳಲು ಅನುಮೋದನೆ.

9. ಧಾರವಾಡ ಜಿಲ್ಲೆ, ಧಾರವಾಡ ತಾಲೂಕು ಮತ್ತು ಹೋಬಳಿ ಅತ್ತಿಕೊಳ್ಳ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ 26.28 ಎಕರೆ ಜಮೀನು 50:50 ಅನುಪಾತದ ಪಾಲುದಾರಿಕೆಯಡಿಯಲ್ಲಿ ಅಭಿವೃದ್ಧಿಪಡಿಸಿದ ನಿದೇಶನಗಳನ್ನು ಭೂಮಾಲೀಕರಿಗೆ ನೀಡಲು ಹಾಗೂ ಪ್ರತಿ ಎಕರೆಗೆ ರೂ. 10 ಲಕ್ಷಗಳ ಮುಂಗಡ ಹಣವನ್ನು ಭೂ ಮಾಲೀಕರಿಗೆ ನೀಡಲು ಹಾಗೂ ರೂ. 43.36 ಕೋಟಿಗಳ ಮೊತ್ತದಲ್ಲಿ ವಸತಿ ಯೋಜನೆ ಕೈಗೊಳ್ಳಲು ಅನುಮೋದನೆ.

10. ಕರ್ನಾಟಕ ಗೃಹ ಮಂಡಳಿಯ ವಸತಿ ಯೋಜನೆಗೆ ತಾಲ್ಲೂಕು ಕೊಪ್ಪಳ ಜಿಲ್ಲೆ ಕೊಪ್ಪಳ ತಾಲ್ಲೂಕಿನ ಇರಕಲಗಡ ಗ್ರಾಮ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು ಕ್ಷೇತ್ರ 25.15 ಎಕರೆ ಜಮೀನನ್ನು 60:40 ಅನುಪಾತದ ವಾಲುದಾರಿಕೆಯಡಿಯಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಭೂಮಾಲೀಕರಿಗೆ ನೀಡಲು ಹಾಗೂ ಯೋಜನೆಯ ವೆಚ್ಚ ರೂ. 27.50 ಕೋಟಿಗಳಿದ್ದು, ಪ್ರತಿ ಎಕರೆಗೆ ರೂ. 5 ಲಕ್ಷಗಳ ಮುಂಗಡ ಹಣವನ್ನು ಭೂ ಮಾಲೀಕರಿಗೆ ನೀಡಲು ಅನುಮೋದನೆ.

11. ಗೃಹ ಬಳಕೆ, ವಾಣಿಜ್ಯ, ಕೈಗಾರಿಕಾ ಗ್ರಾಹಕರಿಗೆ ಕೊಳವೆ ಮೂಲಕ ನೈಸರ್ಗಿಕ ಅನಿಲ ಸರಬರಾಜು (PNG) ಮತ್ತು ವಾಹನಗಳಿಗೆ ಕಂಪ್ರೆಸ್ ನೈಸರ್ಗಿಕ ಅನಿಲ (CNG) ಒದಗಿಸುವ ಕುರಿತಾದ ನಗರ ಅನಿಲ ವಿತರಣಾ ಜಾಲದ ಅಭಿವೃದ್ಧಿ ರಾಜ್ಯ ನೀತಿ'ಗೆ ಅನುಮೋದನೆ.

12. ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿಯ ಆವರಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನಿರ್ಮಿಸಲಾಗುತ್ತಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆಯ 300 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ಕಾಮಗಾರಿಗಳ ರೂ. 182.46 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

13. ಬೆಳಗಾವಿ ಜಿಲ್ಲೆ, ಕಿತ್ತೂರು ತಾಲೂಕು, ಕಿತ್ತೂರು ಕೋಟೆ ಅರಮನೆ ಅವಶೇಷಗಳ ಹನುಮಾನ್ ದೇವಾಲಯದ ಸಂರಕ್ಷಣೆ ಹಾಗೂ ಕೋಟೆಯ ಒಳಭಾಗದಲ್ಲಿ ಲ್ಯಾಂಡ್ ಸ್ಕೇಪಿಂಗ್ ಕಾಮಗಾರಿಯ ರೂ.18.05 ಕೋಟಿಗಳ ವಿಸ್ತ್ರತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ.

14. ಕಲಬುರಗಿ ಜಿಲ್ಲೆ, ಕಲಬುರಗಿ ತಾಲೂಕು, ಸಿಂದಗಿ ಗ್ರಾಮದ ಸರ್ಕಾರಿ ಗಾಯರಾಣ ಸ.ನಂ. 73/1 ರಲ್ಲಿ 15.00 ಎಕರೆ ಜಮೀನನ್ನು ಜೆ.ಎಸ್.ಎಸ್. ಮಹಾವಿದ್ಯಾಪೀಠ, ಜಗದ್ಗುರು ಡಾ|| ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ, ಮೈಸೂರು ಇವರಿಗೆ ಮಂಜೂರು.

15. "ಉತ್ತರ ಕರ್ನಾಟಕ ಸಂಘ-ಸಂಸ್ಥೆಗಳ ಮಹಾಸಂಸ್ಥೆ, ಬೆಂಗಳೂರು ಇವರಿಗೆ ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಉತ್ತರ ತಾಲೂಕು, ದಾಸನಪುರ ಹೋಬಳಿ, ಕಮ್ಮಸಂದ್ರ ಗ್ರಾಮದ ಸರ್ವೆ ನಂ.65ರಲ್ಲಿ ಮಂಜೂರು ಮಾಡಿರುವ 3-24 ಎಕರೆ ಗುಂಟೆ ಜಮೀನಿಗೆ ವಿಧಿಸಿರುವ ಮೊತ್ತ ಪರಿಷ್ಕರಣೆಗೆ ಅಸ್ತು.

16. ಜಲ್ ಜೀವನ್ ಮಿಷನ್ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ ಹಾಗೂ ಇತರ 123 ಜನವಸತಿಗಳು (ವಿಟ್ಲ ಪಟ್ಟಣ ಪಂಚಾಯತ್ ಒಳಗೊಂಡಂತೆ), ಪುತ್ತೂರು ತಾಲೂಕಿನ 319 ಜನವಸತಿಗಳು, ಕಡಬ ತಾಲೂಕಿನ 51 ಜನವಸತಿಗಳು, ಸುಳ್ಯ ತಾಲೂಕಿನ 243 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ" ನೀರಿನ ಯೋಜನೆಯನ್ನು ರೂ. 780 ಕೋಟಿಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

17. ಜಲ್ ಜೀವನ್ ಮಿಷನ್ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಅಲಂಕಾರು ಹಾಗೂ ಇತರೆ 299 ಜನವಸತಿಗಳಿಗೆ (ಕಡಬ ತಾಲೂಕಿನ 203 ಜನವಸತಿಗಳು, ಪುತ್ತೂರು ತಾಲೂಕಿನ 53 ಜನವಸತಿಗಳು ಹಾಗೂ ಬೆಳ್ತಂಗಡಿ ತಾಲ್ಲೂಕಿನ 44 ಜನವಸತಿಗಳು) ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ರೂ. 230 ಕೋಟಿಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡುವ ಬಗ್ಗೆ ಆಡಳಿತಾತ್ಮಕ ಅನುಮೋದನೆ.

18. ಜಲ್ ಜೀವನ್ ಮಿಷನ್ ಯೋಜನೆಯಡಿ ದಾವಣಗೆರೆ ಜಿಲ್ಲೆ ದಾವಣಗೆರೆ ತಾಲೂಕಿನ ಆನಗೋಡು ಮತ್ತು ಇತರ 18 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ರೂ. 18.50 ಕೋಟಿಗಳ ಮೊತ್ತದ ವರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

19. ಜಲ್ ಜೀವನ್ ಮಿಷನ್ ಯೋಜನೆಯಡಿ ದಾವಣಗೆರೆ ಜಿಲ್ಲೆ ದಾವಣಗೆರೆ ತಾಲೂಕಿನ ಅಣಜಿ, ಬೇತೂರು ಮತ್ತು ಇತರೆ 26 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ರೂ. 35.55 ಕೋಟಿಗಳ ಮೊತ್ತದ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

20. ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳ ಕನ್ನಡ ಮಾಧ್ಯಮದ 01 ರಿಂದ 03ನೇ ತರಗತಿ ಮತ್ತು ಉರ್ದು ಮಾಧ್ಯಮದ 01 ಮತ್ತು 02ನೇ ತರಗತಿವರೆಗಿನ ನಲಿಕಲಿ ಘಟಕಗಳಿಗೆ ಕಲಿಕಾ ಸಾಮಗ್ರಿಗಳನ್ನು ರೂ. 39.79 ಕೋಟಿಗಳ ಅಂದಾಜು ವೆಚ್ಚದಲ್ಲಿ ಸರಬರಾಜು ಮಾಡಲು ಅನುಮತಿ.

21. ಪ್ರಾದೇಶಿಕ ಅಂಗ್ಲ ಭಾಷಾ ಸಂಸ್ಥೆ ದಕ್ಷಿಣ ಭಾರತ, ಜ್ಞಾನ ಭಾರತಿ ಆವರಣದಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ಪುರುಷರ ವಸತಿ ಗೃಹಗಳನ್ನು ರೂ. 14.75 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಅಡಳಿತಾತ್ಮಕ ಅನುಮೋದನೆ.

22. ಬೆಂಗಳೂರು ಆಯ್ದ 16 ಶಾಲೆಗಳನ್ನು ಪಬ್ಲಿಕ್ ಶಾಲೆಗಳನ್ನಾಗಿ ರೂ. 69.52 ಕೋಟಿಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ.

23. 15ನೇ ಹಣಕಾಸು ಆಯೋಗದ National Clean Air Programme (NCAP) ಯೋಜನೆಯಡಿ 100 ಎಲೆಕ್ಟ್ರಿಕ್ ಫೀಡರ್ ಸೇವೆಗಳ ಬಸ್​​ಗಳನ್ನು ಜಿಸಿಸಿ ಮಾದರಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ 15 ಕೋಟಿಗಳ ಮೊತ್ತದಲ್ಲಿ ಕಾರ್ಯಾಚರಣೆ ಮಾಡಲು ಆಡಳಿತಾತ್ಮಕ ಅನುಮೋದನೆ.

24. ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರಕ್ಕೆ ಸಮಗ್ರ ಒಳಚರಂಡಿ ವ್ಯವಸ್ಥೆ ಕಲ್ಪಿಸುವ 2ನೇ ಹಂತದ ಕಾಮಗಾರಿಯ ರೂ.94.37 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.

25. ದಿನಾಂಕ: 24-11-2020ರ ಸರ್ಕಾರದ ಆದೇಶದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 12 ಹೈ ಟ್ರಾಫಿಕ್ ಡೆನ್ಸಿಟಿ ಕಾರಿಡಾರ್ (High Traffic Density Corridor)ಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಕೆ.ಆರ್.ಡಿ.ಸಿ.ಎಲ್.ಗೆ ವಹಿಸಿರುವ ಅದೇಶವನ್ನು ರದ್ದುಪಡಿಸಿ, ಸದರಿ ಕಾಮಗಾರಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವಹಿಸಿ ದಿನಾಂಕ: 17.12.2022 ರಂದು ಹೊರಡಿಸಿರುವ ಸರ್ಕಾರಿ ಅದೇಶಕ್ಕೆ ಸಚಿವ ಸಂಪುಟದ ಘಟನೋತ್ತರ ಅನುಮೋದನೆ.

26. World Design Capital-2022 ಕಾರ್ಯಕ್ರಮದ ಬಿಡ್‌ನಲ್ಲಿ ಬೆಂಗಳೂರು ನಗರವು ಭಾಗವಹಿಸಲು, ಬಿಬಿಎಂಪಿಗೆ ಅನುಮತಿ ನೀಡಿರುವ ಕ್ರಮಕ್ಕೆ ಸ್ಥಿರೀಕರಣ ಹಾಗೂ ಸದರಿ ಯೋಜನೆಗೆ ರಾಜ್ಯ ಸರ್ಕಾರದಿಂದ ರೂ. 200 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲು ಹಾಗೂ Memorandum of Agreement (MOA) Host Programme Agreement (HPA)ಗಳನ್ನು ಮಾಡಿಕೊಳ್ಳಲು ಅನುಮೋದನೆ.

27. ದಕ್ಷಿಣ ಕನ್ನಡ ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರದೇಶಗಳಲ್ಲಿನ ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಾತೃಪೂರ್ಣ ಯೋಜನೆ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾದ ಫಲಾನುಭವಿಗಳಿಗೆ ಕಚ್ಚಾ ಆಹಾರ ಸಾಮಗ್ರಿಗಳನ್ನು ರೂ. 21.00 ಘಟಕ ವೆಚ್ಚದಲ್ಲಿ 15 ದಿನಗಳಿಗೊಮ್ಮೆ ಅವರುಗಳ ಮನೆಯಲ್ಲೇ ವಿತರಿಸಲು ಅನುಮೋದನೆ ಹಾಗೂ ನಿಗದಿಪಡಿಸಲು ತೀರ್ಮಾನ.

ಇದನ್ನೂ ಓದಿ: 85 ಶೇಕಡಾ ಕಮಿಷನ್ ಪಡೆಯುತ್ತಿದ್ದವರಿಂದ 40% ಆರೋಪ: ಸುಧಾಂಶು ತ್ರಿವೇದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.