ETV Bharat / state

ಕರುನಾಡಿಗೆ ಮತ್ತೆ ನಿರ್ಬಂಧದ ಬರೆ: ವಿದ್ಯಾಗಮ, ಸ್ವಿಮ್ಮಿಂಗ್​​ ಪೂಲ್​, ಜಿಮ್ ಬಂದ್​; ಹೊಸ ನಿಯಮಗಳು ನಿಮಗೆ ತಿಳಿದಿರಲಿ.. - karnataka covid

karnataka-govt-releases-new-covid rules
karnataka-govt-releases-new-covid rules
author img

By

Published : Apr 2, 2021, 6:28 PM IST

Updated : Apr 2, 2021, 8:30 PM IST

18:26 April 02

ಕೋವಿಡ್ ಅಬ್ಬರ: ರಾಜ್ಯದಲ್ಲಿ ಹೊಸ ಮಾರ್ಗಸೂಚಿ ರಿಲೀಸ್​

ಡಾ. ಗಿರಿಧರ್ ಬಾಬು - ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ

ಬೆಂಗಳೂರು: ಕರ್ನಾಟಕದಲ್ಲೂ ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇನ್ನಷ್ಟು ಬಿಗಿ ಕ್ರಮಗಳೊಂದಿಗೆ ಹೊಸ ಮಾರ್ಗಸೂಚಿ ಬಿಡುಗಡೆ​ ಮಾಡಿ, ಮಹತ್ವದ ಆದೇಶ ಹೊರಹಾಕಿದೆ. ಈ ನಿಯಮಗಳು ಮುಂದಿನ 18 ದಿನಗಳ ಕಾಲ ಜಾರಿಯಲ್ಲಿರಲಿವೆ.

ಪ್ರಮುಖವಾಗಿ ಬೆಂಗಳೂರು ನಗರ ಹಾಗು ಗ್ರಾಮಾಂತರ ಜಿಲ್ಲೆ ಸೇರಿದಂತೆ ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್​ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪಬ್​, ಬಾರ್​, ಕ್ಲಬ್​​, ರೆಸ್ಟೋರೆಂಟ್​ಗಳಲ್ಲಿ ಗರಿಷ್ಠ ಗ್ರಾಹಕರ ಸಂಖ್ಯೆ ಶೇ.50 ಮೀರುವಂತಿಲ್ಲ.

ಕೋವಿಡ್​ ಮುನ್ನೆಚ್ಚರಿಕೆಗಾಗಿ ಕಡ್ಡಾಯವಾಗಿ ಮುಖಗವಸು, ದೈಹಿಕ ಅಂತರ ಪಾಲನೆ, ಹ್ಯಾಂಡ್ ಸ್ಯಾನಿಟೈಸರ್​, ಹ್ಯಾಂಡ್​ ವಾಷ್​ ಬಳಕೆಯನ್ನು ಜಾರಿಗೊಳಿಸುವುದು. ರಾಜ್ಯದಲ್ಲಿ ಎಲ್ಲಾ ಜಿಮ್​ ಹಾಗೂ ಈಜುಕೊಳ ಬಂದ್​ ಆಗಿರುತ್ತವೆ.  

ಪ್ರಮುಖವಾಗಿ 8 ಜಿಲ್ಲೆಗಳಲ್ಲಿ ಸಿನಿಮಾ ಥಿಯೇಟರ್​ಗಳಿಗೆ ಶೇ. 50ರಷ್ಟು ಆಸನ ಮಿತಿ ವಿಧಿಸಲಾಗಿದೆ. ಜಿಮ್, ಸ್ವಿಮ್ಮಿಂಗ್​ ಪೂಲ್​ ಮುಚ್ಚಲು ಆದೇಶಿಸಲಾಗಿದೆ. ವಿದ್ಯಾಗಮ ಸೇರಿ ರಾಜ್ಯಾದ್ಯಂತ 6 ರಿಂದ 9 ನೇ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಉಳಿದಂತೆ 10, 11 ಹಾಗೂ 12ನೇ ತರಗತಿಗಳು ಮುಂದುವರೆಯಲಿವೆ. ಆದಾಗ್ಯೂ, ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರುವುದಿಲ್ಲ.

ಹೊಸ ಮಾರ್ಗಸೂಚಿಯಲ್ಲಿ ಯಾವುದಕ್ಕೆ ನಿರ್ಬಂಧ?

  • ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗಳ ತರಗತಿಗಳಲ್ಲಿ ಮಂಡಳಿಯ/ ವಿಶ್ವವಿದ್ಯಾಲಯಗಳ ಪರೀಕ್ಷೆ ಬರೆಯುವ ಹಾಗೂ ವೈದ್ಯಕೀಯ ಶಿಕ್ಷಣದ ತರಗತಿಗಳನ್ನು ಹೊರತುಪಡಿಸಿ, ಇತರ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.
  • ವಸತಿ ಶಾಲೆಗಳು ಹಾಗೂ ಬೋರ್ಡಿಂಗ್ ಇರುವ ಶಾಲೆಗಳಲ್ಲಿ 10, 11 ಹಾಗೂ 12ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು, ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗಳ ವಿಶ್ವವಿದ್ಯಾಲಯಗಳ ಪರೀಕ್ಷೆ ಬರೆಯುವವರು ಮತ್ತು ವೈದ್ಯಕೀಯ ಶಿಕ್ಷಣದ ತರಗತಿಗಳನ್ನು ಹೊರತುಪಡಿಸಿ ಇತರ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.
  • ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿರುತ್ತದೆ. ಆದರೆ ಗುಂಪು ಸೇರುವ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ.
  • ಅಪಾರ್ಟ್​ಮೆಂಟ್​​ ಕಾಂಪ್ಲೆಕ್ಸ್​​​​ಗಳಲ್ಲಿ ಸಾಮಾನ್ಯವಾಗಿ ನಿವಾಸಿಗಳು, ಜನರು ಸೇರುವ ಸ್ಥಳಗಳಾದ ಜಿಮ್‌, ಪಾರ್ಟಿ, ಹಾಲ್​ಗಳು, ಕ್ಲಬ್​ಹೌಸ್​ಗಳು, ಸ್ವಿಮ್ಮಿಂಗ್​​ ಪೂಲ್​ ಇತ್ಯಾದಿ ಮುಚ್ಚಲ್ಪಟ್ಟಿರುತ್ತದೆ.
  • ಯಾವುದೇ ತರಹದ ರ‍್ಯಾಲಿ, ಮುಷ್ಕರ, ಧರಣಿ ಇತ್ಯಾದಿಗಳಿಗೆ ನಿಷೇಧ
  • ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಕರ ಸಂಖ್ಯೆ ನಿಗದಿಪಡಿಸಿರುವ ಆಸನದ ವ್ಯವಸ್ಥೆಯನ್ನು ಮೀರುವಂತಿಲ್ಲ.
  • ಕಛೇರಿಗಳು ಹಾಗೂ ಇತರ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಲು ಆಧ್ಯತೆ

Last Updated : Apr 2, 2021, 8:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.