ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಪವಿತ್ರ ರಂಜಾನ್ ಹಬ್ಬಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಾಮಾಜಿಕ ಅಂತರದ ಜೊತೆಗೆ ಕಡ್ಡಾಯ ಮಾಸ್ಕ್ ಬಳಸುವಂತೆ ಸರ್ಕಾರ ತನ್ನ ಹೊಸ ಗೈಡ್ಲೈನ್ಸ್ನಲ್ಲಿ ವಿವರಿಸಿದೆ.
-
Karnataka Govt issues guidelines for observance of rituals in connection with Ramzan month in Masjids, in view of #COVID19; Masjids in containment zones to remain closed till the zone is denotified, large gathering continues to remain prohibited, face masks mandatory pic.twitter.com/WMu3Iv3lEv
— ANI (@ANI) April 13, 2021 " class="align-text-top noRightClick twitterSection" data="
">Karnataka Govt issues guidelines for observance of rituals in connection with Ramzan month in Masjids, in view of #COVID19; Masjids in containment zones to remain closed till the zone is denotified, large gathering continues to remain prohibited, face masks mandatory pic.twitter.com/WMu3Iv3lEv
— ANI (@ANI) April 13, 2021Karnataka Govt issues guidelines for observance of rituals in connection with Ramzan month in Masjids, in view of #COVID19; Masjids in containment zones to remain closed till the zone is denotified, large gathering continues to remain prohibited, face masks mandatory pic.twitter.com/WMu3Iv3lEv
— ANI (@ANI) April 13, 2021
ಹೀಗಿದೆ ಹೊಸ ಗೈಡ್ಲೈನ್ಸ್
- ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ ಕಡ್ಡಾಯ.
- ನಮಾಜ್ ವೇಳೆ ಒಬ್ಬರು ಒಂದೇ ಕಾರ್ಪೆಟ್ ಬಳಸಬೇಕು.
- ಕಂಟೈನ್ಮೆಂಟ್ ಝೂನ್ನಲ್ಲಿರುವ ಮಸೀದಿಗಳನ್ನು ಬಂದ್ ಮಾಡಬೇಕು.
- ನಮಾಜ್ಗೂ ಮುನ್ನ 5 ನಿಮಿಷ ಮಸೀದಿಗಳ ಬಾಗಿಲು ತೆರೆಯಬೇಕು.
- ಮೂರು ಪಾಳಿಯಲ್ಲಿ ನಮಾಜ್ ಮಾಡಬೇಕು.
- ನಮಾಜ್ ಮಾಡುವ ಸ್ಥಳದಲ್ಲಿ ಮಾರ್ಕ್ಗಳನ್ನು ಹಾಕಬೇಕು.
- ಮನೆಯಲ್ಲಿ ಇಫ್ತಿಯಾರ್ ಕೂಟ ಮುಗಿಸಬೇಕು.
- 60 ವರ್ಷ ಮೇಲ್ಪಟ್ಟವರು ಮನೆಯಲ್ಲಿ ನಮಾಜ್ ಮಾಡಬೇಕು.
- ಮಸೀದಿಗೆ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಬೇಕು.
- ಮುಂದಿನ ಆದೇಶದವರೆಗೆ ಕಂಟೈನ್ಮೆಂಟ್ ವಲಯದ ಮಸೀದಿ ತೆರೆಯದಂತೆ ಸೂಚಿಸಲಾಗಿದೆ.
- ಮಸೀದಿಗೆ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ
- ನಮಾಜ್ ಮುಗಿದ ತಕ್ಷಣ ಮಸೀದಿಯ ಬಾಗಿಲು ಮುಚ್ಚಬೇಕು.
- ಸಾಮಾಜಿಕ ಅಂತರದ ಜೊತೆಗೆ ಮಾಸ್ಕ್ ಕಡ್ಡಾಯ
- ಕಂಟೈನ್ಮೆಂಟ್ ವಲಯ ಹೊರತುಪಡಿಸಿ ಉಳಿದೆಡೆ ಮಾತ್ರ ನಮಾಜ್ಗೆ ಅವಕಾಶ
- ಶೀತ, ಕೆಮ್ಮು, ಜ್ವರ, ಉಸಿರಾಟ ತೊಂದರೆ ಇದ್ದವರು ಮಸೀದಿ ಪ್ರವೇಶ ಮಾಡಕೂಡದು.
- ಕೈ ತೊಳೆಯುವ ಸೋಪು ಮತ್ತು ದ್ರಾವಕಗಳ ವ್ಯವಸ್ಥೆ ಮಾಡಬೇಕು
- ನಮಾಜ್ ಮುಗಿದ ಬಳಿಕ ಸೋಂಕು ನಿವಾರಕ ದ್ರಾವಕಗಳನ್ನು ಬಳಸಬೇಕು
- ಈ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ಸೂಚನೆ ನೀಡಿದೆ.