ETV Bharat / state

ಗತಿ ಕಳೆದುಕೊಂಡ ಪ್ರಗತಿ: ರಾಜ್ಯ ಬಜೆಟ್ ಇಲಾಖಾವಾರು ಆರ್ಥಿಕ ಪ್ರಗತಿ ಕೇವಲ ಶೇಕಡಾ 34! - cm basavarj bommai budget

ಆರ್ಥಿಕ ವರ್ಷದಲ್ಲಿ ಆದಾಯ ಮೂಲಗಳು ಚೇತರಿಸಿಕೊಂಡಿದ್ದು, ನಿರೀಕ್ಷಿತ ಗುರಿಯನ್ನೂ ಮೀರಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಆಯವ್ಯಯ ವರ್ಷದ‌ ಮೊದಲ ಅರ್ಧ ವರ್ಷ ಕಳೆದಿದೆ. ಅರ್ಧ ವರ್ಷ ಬಳಿಕ ಇಲಾಖಾವಾರು ಬಜೆಟ್ ಅನುಷ್ಠಾನದ ಆರ್ಥಿಕ ಪ್ರಗತಿ ಮಾತ್ರ ನಿರಾಶಾದಾಯಕವಾಗಿದೆ.

karnataka-govt-department-wise-financial-progress-is-only-34-percent
ಗತಿ ಕಳೆದುಕೊಂಡ ಪ್ರಗತಿ: ರಾಜ್ಯ ಬಜೆಟ್ ಇಲಾಖಾವಾರು ಆರ್ಥಿಕ ಪ್ರಗತಿ ಕೇವಲ ಶೇಕಡಾ 34!
author img

By

Published : Oct 3, 2022, 10:49 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ರ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದರು. ಇದೀಗ ತಮ್ಮ ಬಜೆಟ್ ವರ್ಷದ ಮೊದಲಾರ್ಧ ವರ್ಷ ಕಳೆದಿದೆ. ಆರು ತಿಂಗಳು ಕಳೆದ ಬಳಿಕವೂ ಇಲಾಖಾವಾರು ಬಜೆಟ್ ಅನುಷ್ಠಾನದ ಸ್ಥಿತಿಗತಿ ಮಾತ್ರ ನಿರಾಶಾದಾಯಕವಾಗಿದೆ.

ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಿ 6 ತಿಂಗಳು ಕಳೆದಿದೆ. ಚುನಾವಣಾ ವರ್ಷ ಸನಿಹದಲ್ಲಿದ್ದು, ಅದಕ್ಕೂ ಮುನ್ನದ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಹೀಗಾಗಿ ರಾಜ್ಯ ಬಜೆಟ್ ಅನುಷ್ಠಾನದ ಪ್ರಗತಿಗೆ ವೇಗ ಕೊಡುವ ಅನಿವಾರ್ಯತೆ ಸಿಎಂ ಬೊಮ್ಮಯಿ ಅವರದ್ದಾಗಿದೆ. ತಪ್ಪಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜನಾಕ್ರೋಶ ಎದುರಿಸುವ ಆತಂಕ ಇದೆ.

ಈ ಆರ್ಥಿಕ ವರ್ಷದಲ್ಲಿ ಆದಾಯ ಮೂಲಗಳು ಚೇತರಿಸಿಕೊಂಡಿದ್ದು, ನಿರೀಕ್ಷಿತ ಗುರಿಯನ್ನೂ ಮೀರಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಆಯವ್ಯಯ ವರ್ಷದ‌ ಮೊದಲ ಅರ್ಧ ವರ್ಷ ಕಳೆದಿದೆ. ಅರ್ಧ ವರ್ಷ ಬಳಿಕ ಇಲಾಖಾವಾರು ಬಜೆಟ್ ಅನುಷ್ಠಾನದ ಆರ್ಥಿಕ ಪ್ರಗತಿ ಮಾತ್ರ ನಿರಾಶಾದಾಯಕವಾಗಿದೆ. ಮೊದಲ ತ್ರೈಮಾಸಿಕದಲ್ಲಿ ತಕ್ಕ ಮಟ್ಟಿಗೆ ಪ್ರಗತಿ ಸಾಧಿಸುವಲ್ಲಿ ಸಫಲರಾಗಿದ್ದರು. ಆದರೆ, ಎರಡನೇ ತ್ರೈಮಾಸಿಕದಲ್ಲಿ ಪ್ರಗತಿಯ ವೇಗ ಕಳೆದುಕೊಂಡಿದೆ. ಹಣಕಾಸು ವರ್ಷದ ಮೊದಲಾರ್ಧ ವರ್ಷದಲ್ಲಿ ಇಲಾಖಾವಾರು ಪ್ರಗತಿ ತನ್ನ ಗತಿ ಕಳೆದುಕೊಂಡಿದೆ.

ಮೊದಲಾರ್ಧ ವರ್ಷದ ಆರ್ಥಿಕ ಪ್ರಗತಿ ಕೇವಲ 34.16%: 2022-23ರ ಸಾಲಿನ ಮೊದಲ ಆರು ತಿಂಗಳಲ್ಲಿ ಬೊಮ್ಮಾಯಿ ಸರ್ಕಾರ ಇಲಾಖಾವಾರು ಪ್ರಗತಿ ಕಾಣುವಲ್ಲಿ ಹಿಂದೆ ಬಿದ್ದಿದೆ. ಇಲಾಖಾವಾರು ಪ್ರಗತಿಗೆ ಚುರುಕು ಮುಟ್ಟಿಸುವಲ್ಲಿ ಸಿಎಂ ಬೊಮ್ಮಾಯಿ ಎಡವಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಹಣಕಾಸು ವರ್ಷದ ಮೊದಲಾರ್ಧ ವರ್ಷದಲ್ಲಿ ಒಟ್ಟು ಇಲಾಖಾವಾರು ಆರ್ಥಿಕ ಪ್ರಗತಿ ಕಂಡಿರುವುದು ಕೇವಲ ಶೇ. 34.16. ಮೊದಲಾರ್ಧ ವರ್ಷದಲ್ಲಿ ಕನಿಷ್ಠ ಶೇ50 ರಷ್ಟು ಆದರೂ ಪ್ರಗತಿ ಕಾಣಬೇಕಾಗಿತ್ತು. ಆದರೆ ಸದ್ಯ ಪ್ರಗತಿ ಇನ್ನೂ ಶೇ. 35ರ ಆಸುಪಾಸಿನಲ್ಲಿ ತೆವಳುತ್ತ ಸಾಗುತ್ತಿದೆ.

ಕೆಡಿಪಿ ವರದಿಯ ಅಂಕಿ-ಅಂಶದಂತೆ ಎಲ್ಲ ಇಲಾಖೆಗಳಿಗೆ ಒಟ್ಟು 2,42,210.17 ಕೋಟಿ ರೂ. ಬಜೆಟ್ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಸೆಪ್ಟೆಂಬರ್​​ವರೆಗೆ ಆರು ತಿಂಗಳಲ್ಲಿ ಒಟ್ಟು 86,156 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಒಟ್ಟು 1,00,518.74 ಕೋಟಿ ರೂ. ಆರ್ಥಿಕ ಗುರಿ ಹೊಂದಲಾಗಿದೆ. ಈ ಪೈಕಿ 82,729.74 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಎಲ್ಲ ಇಲಾಖೆಗಳಲ್ಲಿ ಒಟ್ಟು ಹಂಚಿಕೆಗೆ ಕೇವಲ 34.16% ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಕೌಶಲ್ಯಾಭಿವೃದ್ಧಿ ಇಲಾಖೆ ಮಾತ್ರ 100% ಆರ್ಥಿಕ ಪ್ರಗತಿ ಕಂಡಿದೆ. ಉಳಿದಂತೆ ಕಾನೂನು ಮತ್ತು ಸಂಸದೀಯ ಇಲಾಖೆ, ಗೃಹ ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆ, ಸಣ್ಣ ನೀರಾವರಿ, ಪಶು ಸಂಗೋಪನೆ ಇಲಾಖೆ, ತೋಟಗಾರಿಕೆ ಇಲಾಖೆಗಳು 40-50% ಆಸುಪಾಸು ಆರ್ಥಿಕ ಪ್ರಗತಿ ಕಾಣಲು ಯಶ ಕಂಡಿದೆ.

ಪ್ರಮುಖ ಇಲಾಖೆಗಳ ಆರ್ಥಿಕ ಪ್ರಗತಿ ಹೀಗಿದೆ:

ಕಾರ್ಮಿಕ ಇಲಾಖೆ:

  • ಒಟ್ಟು ಅನುದಾನ - 607.29 ಕೋಟಿ
  • ವೆಚ್ಚ - 208 ಕೋಟಿ
  • ಪ್ರಗತಿ - ಶೇ. 34.25

ಸಮಾಜ ಕಲ್ಯಾಣ ಇಲಾಖೆ:

  • ಒಟ್ಟು ಅನುದಾನ - 5,543.37 ಕೋಟಿ
  • ವೆಚ್ಚ - 1,684.54 ಕೋಟಿ
  • ಪ್ರಗತಿ - ಶೇ 30.39

ಲೋಕೋಪಯೋಗಿ ಇಲಾಖೆ:

  • ಒಟ್ಟು ಅನುದಾನ - 9,865.97 ಕೋಟಿ
  • ವೆಚ್ಚ - 3,081.97 ಕೋಟಿ
  • ಪ್ರಗತಿ - 31.24%

ನಗರಾಭಿವೃದ್ಧಿ ಇಲಾಖೆ:

  • ಒಟ್ಟು ಅನುದಾನ - 23,191.32 ಕೋಟಿ
  • ವೆಚ್ಚ - 7,537.33 ಕೋಟಿ
  • ಪ್ರಗತಿ - 32.50%

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ:

  • ಒಟ್ಟು ಅನುದಾನ - 4,727.16 ಕೋಟಿ
  • ವೆಚ್ಚ - 1,713.57 ಕೋಟಿ
  • ಪ್ರಗತಿ - 32.02%

ಆರೋಗ್ಯ ಇಲಾಖೆ:

  • ಒಟ್ಟು ಅನುದಾನ - 15,130.03 ಕೋಟಿ
  • ವೆಚ್ಚ - 4,795.31 ಕೋಟಿ
  • ಪ್ರಗತಿ - 31.69%

ಜಲಸಂಪನ್ಮೂಲ ಇಲಾಖೆ:

  • ಒಟ್ಟು ಅನುದಾನ - 20,815.58 ಕೋಟಿ
  • ವೆಚ್ಚ - 6,070.86 ಕೋಟಿ
  • ಪ್ರಗತಿ - 29.17%

ಇಂಧನ ಇಲಾಖೆ:

  • ಒಟ್ಟು ಅನುದಾನ - 12,653.55 ಕೋಟಿ
  • ವೆಚ್ಚ - 4,298.30 ಕೋಟಿ
  • ಪ್ರಗತಿ - 33.97%

ಶಿಕ್ಷಣ ಇಲಾಖೆ:

  • ಒಟ್ಟು ಅನುದಾನ - 26,895.93 ಕೋಟಿ
  • ವೆಚ್ಚ - 9,638.62 ಕೋಟಿ
  • ಪ್ರಗತಿ - 35.84%

ಉನ್ನತ ಶಿಕ್ಷಣ ಇಲಾಖೆ:

  • ಒಟ್ಟು ಅನುದಾನ - 5559.44 ಕೋಟಿ
  • ವೆಚ್ಚ - 2015.28 ಕೋಟಿ
  • ಪ್ರಗತಿ - 36.15%

ಅರಣ್ಯ ಇಲಾಖೆ:

  • ಒಟ್ಟು ಅನುದಾನ - 2,160.53 ಕೋಟಿ
  • ವೆಚ್ಚ - 630.37 ಕೋಟಿ
  • ಪ್ರಗತಿ -29.18 %

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ:

  • ಒಟ್ಟು ಅನುದಾನ - 1,509.07 ಕೋಟಿ
  • ವೆಚ್ಚ - 438.96 ಕೋಟಿ
  • ಪ್ರಗತಿ - 29.09%

ಸಹಕಾರ ಇಲಾಖೆ:

  • ಒಟ್ಟು ಅನುದಾನ - 1,758.19 ಕೋಟಿ
  • ವೆಚ್ಚ - 481.41 ಕೋಟಿ
  • ಪ್ರಗತಿ - 27.38%

ಗ್ರಾಮೀಣಾಭಿವೃದ್ಧಿ ಇಲಾಖೆ:

  • ಒಟ್ಟು ಅನುದಾನ - 21,711.43 ಕೋಟಿ
  • ವೆಚ್ಚ - 5,941.73 ಕೋಟಿ
  • ಪ್ರಗತಿ - 27.37%

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:

  • ಒಟ್ಟು ಅನುದಾನ - 2,597.71 ಕೋಟಿ
  • ವೆಚ್ಚ - 527.06 ಕೋಟಿ
  • ಪ್ರಗತಿ - 20.29%

ಕೃಷಿ ಇಲಾಖೆ:

  • ಒಟ್ಟು ಅನುದಾನ - 6,746.44 ಕೋಟಿ
  • ವೆಚ್ಚ - 1,292.05 ಕೋಟಿ
  • ಪ್ರಗತಿ - 19.15%

ಆಹಾರ ಇಲಾಖೆ:

  • ಒಟ್ಟು ಅನುದಾನ - 2,983.42 ಕೋಟಿ
  • ವೆಚ್ಚ - 570.12 ಕೋಟಿ
  • ಪ್ರಗತಿ - 19.11%

ವಸತಿ ಇಲಾಖೆ:

  • ಒಟ್ಟು ಅನುದಾನ - 5,928.45 ಕೋಟಿ
  • ವೆಚ್ಚ - 887.06 ಕೋಟಿ
  • ಪ್ರಗತಿ - 14.96%

ಇದನ್ನೂ ಓದಿ: ಅಡಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ 4 ಕೋಟಿ ರೂಪಾಯಿ ಅನುದಾನ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.