ETV Bharat / state

ಬಿಬಿಎಂಪಿ ಕಾಯ್ದೆಗೆ ರಾಜ್ಯಪಾಲರ ಅಂಕಿತ : ಸರ್ಕಾರಕ್ಕೆ ಮರುವಿಂಗಡನೆ ಹಾದಿ ಸುಗಮ

ಬಿಬಿಎಂಪಿ ವ್ಯಾಪ್ತಿಯನ್ನು ಹಿಗ್ಗಿಸುವ ಮತ್ತು ಆಡಳಿತ ಯಂತ್ರದಲ್ಲಿ ಬದಲಾವಣೆ ತರುವ ಬಿಬಿಎಂಪಿ ಕಾಯ್ದೆಗೆ ಇಂದು ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ.

Vidhana sowdha
ವಿಧಾನ ಸೌಧ
author img

By

Published : Dec 22, 2020, 2:07 PM IST

ಬೆಂಗಳೂರು: ವಿಧಾನಮಂಡಲದಲ್ಲಿ ಅಂಗೀಕಾರಗೊಂಡಿದ್ದ ಬಿಬಿಎಂಪಿ ಕಾಯ್ದೆಗೆ ರಾಜ್ಯಪಾಲರ ಅಂಕಿತ ಬಿದ್ದಿದೆ. ಬಿಬಿಎಂಪಿ ಕಾಯ್ದೆಯ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದ್ದು, ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಹಾದಿಯನ್ನೂ ಸುಗಮಗೊಳಿಸಿದೆ.

ಬಿಬಿಎಂಪಿ ವ್ಯಾಪ್ತಿಯನ್ನು ಹಿಗ್ಗಿಸುವ ಮತ್ತು ಆಡಳಿತ ಯಂತ್ರದಲ್ಲಿ ಬದಲಾವಣೆ ತರುವ ಬಿಬಿಎಂಪಿ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈ ಸಂಬಂಧ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ. ಮೊನ್ನೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಬಿಬಿಎಂಪಿ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಗಿತ್ತು. ಇದೀಗ ವಿಧಾನಮಂಡಲದಲ್ಲಿ ಅಂಗೀಕಾರ ಪಡೆದ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕುವ ಮೂಲಕ ಬಿಬಿಎಂಪಿ ಕಾಯ್ದೆ ಜಾರಿಯಾಗಿದೆ.

ಅಧಿಸೂಚನೆ ಮೂಲಕ ಕಾಯ್ದೆ ಜಾರಿಯಾದ ಹಿನ್ನೆಲೆ ಮತ್ತು ಬಿಬಿಎಂಪಿ ಚುನಾವಣೆ ನಡೆಸುವ ಸಂಬಂಧ ಹೈ ಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಸರ್ಕಾರ ಬಿಬಿಎಂಪಿ ವಾರ್ಡ್ ಗಳನ್ನು 243ಗೆ ಹೆಚ್ಚಿಸುವ ಮರವಿಂಗಡನೆ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದಾಗಿದೆ.

ಈ ನೂತನ ಬಿಬಿಎಂಪಿ ಕಾಯ್ದೆಯ ಪ್ರಕಾರ ಬಿಬಿಎಂಪಿಯ ವ್ಯಾಪ್ತಿ ಮತ್ತಷ್ಟು ಹಿಗ್ಗಲಿದೆ. ಮೇಯರ್ ಮತ್ತು ಉಪಮೇಯರ್ ಅಧಿಕಾರಾವಧಿ ಈಗಿನ ಒಂದು ವರ್ಷದಿಂದ ಎರಡೂವರೆ ವರ್ಷಕ್ಕೆ ಹೆಚ್ಚಾಗಲಿದೆ. ನೂತನ ಕಾಯ್ದೆಯ ಪ್ರಕಾರ ಬಿಬಿಎಂಪಿ ಸುತ್ತಲೂ ಇರುವ 1 ಕಿಲೋ ಮೀಟರ್‌ ವ್ಯಾಪ್ತಿಯ ಗ್ರಾಮ, ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಗೆ ಸೇರಿದ ಪ್ರದೇಶಗಳು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ. ಆ‌ ಮೂಲಕ ಬಿಬಿಎಂಪಿ ವಾರ್ಡ್ ಗಳ ಸಂಖ್ಯೆ 198 ರಿಂದ 243ಕ್ಕೆ ಏರಿಕೆಯಾಗಲಿದೆ.
ಬಿಬಿಎಂಪಿ ಕಾಯ್ದೆಯ ಹೈಲೈಟ್ಸ್:

  • ಬಿಬಿಎಂಪಿಗೆ ಪ್ರಸ್ತುತ ಇರುವ ಬಿಬಿಎಂಪಿ ಆಯುಕ್ತರ ಹುದ್ದೆಯನ್ನು ಮುಖ್ಯ ಹುದ್ದೆಯಾಗಿ ಮಾಡಲಾಗುತ್ತದೆ. ರಾಜ್ಯ ಸರ್ಕಾ​ರದ ಪ್ರಧಾನ ಕಾರ್ಯ​ದ​ರ್ಶಿಯ ಹುದ್ದೆಗಿಂತ ಕಡಿಮೆ ಇಲ್ಲ​ದ​ವ​ರ​ನ್ನು ಮುಖ್ಯ ಹುದ್ದೆಗೆ ನೇಮ​ಕ ಮಾಡಲಾಗುವುದು. ಮುಖ್ಯ ಆಯುಕ್ತರ ಅಧಿ​ಕಾರಾವಧಿ ಎರ​ಡು ವರ್ಷ​ಗ​ಳಿ​ಗಿಂತ ಕಡಿಮೆ ಇಲ್ಲ​ದಂತೆ ನಿಯೋ​ಜನೆ ಮಾಡಬೇಕು. ಅವಧಿಗೆ ಮೊದಲು ವರ್ಗಾವಣೆ ಮಾಡಬೇಕಾದರೆ ಬಿಬಿಎಂಪಿ ಮೇಯರ್‌ ಅವರಿಗೆ ಕಾರಣಗಳನ್ನು ತಿಳಿಸಬೇಕಾಗಿದೆ.
  • ವಿಪತ್ತು ನಿರ್ವಹಣಾ ಸಮಿತಿ ರಚನೆಯಾಗಲಿದೆ. ನಗ​ರ​ದಲ್ಲಿ ಸಾರ್ವಜ​ನಿ​ಕರಿಗೆ ತುರ್ತಾಗಿ ಸ್ಪಂದಿ​ಸುವ ಉದ್ದೇ​ಶ​ದಿಂದ ವಿಪತ್ತು ನಿರ್ವ​ಹಣಾ ಸಮಿ​ತಿ​ ರಚನೆಯಾಗಲಿದೆ.
  • ಪಾಲಿ​ಕೆಯ ವ್ಯಾಪ್ತಿ​ಯಲ್ಲಿ ಅಧಿ​ಕಾರ ವಿಕೇಂದ್ರೀ​ಕ​ರಣ ಮಾಡುವ ಉದ್ದೇ​ಶ​ದಿಂದ ವಿಧಾ​ನ​ಸಭಾ ಕ್ಷೇತ್ರ​ವಾರು ಹಾಗೂ ವಾರ್ಡ್‌​ನಲ್ಲಿ ‘ಪ್ರಾಂತ್ಯ ಸಭೆ’ಗಳು ಅಥವಾ ಏರಿಯಾ ಸಭಾಗಳು ರಚನೆಯಾಗಲಿವೆ. ಏರಿಯಾ ಸಭಾಗಳಲ್ಲಿ ವಾರ್ಡಿನ ಪ್ರತಿಯೊಬ್ಬ ಮತದಾರರೂ ಸದಸ್ಯರಾಗಿರಲಿದ್ದಾರೆ. ಶಾಸ​ಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದೆ. ಇದರಿಂದ ಶಾಸಕರಿಗೆ ಬಿಬಿಎಂಪಿ ಆಡಳಿತದಲ್ಲಿ ಹೆಚ್ಚಿನ ಪ್ರಾತಿನಿತ್ಯ ಸಿಗಲಿದೆ.
  • ಕ್ಷೇತ್ರ ಸಮಾ​ಲೋ​ಚನಾ ಸಮಿ​ತಿಗಳ ರಚನೆ ಮಾಡಲಾಗುವುದು. ಪಾಲಿ​ಕೆ ವ್ಯಾಪ್ತಿಯ ಪ್ರತಿ ವಿಧಾ​ನಸಭಾ ಕ್ಷೇತ್ರ ವ್ಯಾಪ್ತಿ​ಯಲ್ಲಿ ಒಂದು ವಿಧಾ​ನ​ಸಭಾ ಸಮಾಲೋ​ಚನಾ ಸಮಿ​ತಿ​ಯ​ನ್ನು ರಚ​ನೆ ಮಾಡಲಾಗುವುದು. ಆಯಾ ವಿಧಾ​ನ​ಸಭಾ ಕ್ಷೇತ್ರದ ಶಾಸ​ಕರೇ ಈ ಸಮಿ​ತಿಯ ಅಧ್ಯ​ಕ್ಷ​ರಾಗಿರುತ್ತಾರೆ. ಆಯಾ ವಿಧಾ​ನ​ಸಭಾ ಕ್ಷೇತ್ರ ವ್ಯಾಪ್ತಿ​ಯ​ಲ್ಲಿನ ವಾರ್ಡ್‌​ಗಳ ವಾರ್ಡ್‌ ಸದ​ಸ್ಯರು ಈ ವಾರ್ಡ್‌​ನಲ್ಲಿ ಸದ​ಸ್ಯ​ರಾಗಿರುತ್ತಾರೆ. ಈ ಸಮಿ​ತಿಯ ಅಧಿ​ಕಾರಾವಧಿ 30 ತಿಂಗಳು ಇರ​ಲಿದೆ. ಪಾಲಿಕೆ ವ್ಯಾಪ್ತಿ​ಯಲ್ಲಿ ಪ್ರತಿ ವಲ​ಯಕ್ಕೂ ಒಂದು ಸಮಿ​ತಿ​ಯನ್ನು ರಚನೆ ಮಾಡಲಾಗುವುದು.
  • ಪಾಲಿಕೆಯನ್ನು 15 ವಲಯಗಳನ್ನಾಗಿ ಮರುವಿಂಗಡನೆ ಮಾಡಲಾಗುವುದು. ಪ್ರತಿ ವಲಯಗಳಿಗೂ ಸಮಿತಿ ರಚನೆಯಾಗಲಿದೆ.

ಓದಿ...ದೊಡ್ಡ ಪ್ರಮಾಣದಲ್ಲಿ ಹೊಸ ವರ್ಷಾಚರಣೆಯಿಲ್ಲ; ನೈಟ್ ಕರ್ಫ್ಯೂ ಅಗತ್ಯವಿಲ್ಲ: ಬಿಎಸ್​ವೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.