ETV Bharat / state

ಸರ್ಕಾರಿ ಕಾಮಗಾರಿಗಳು ಮೂಲ ವೆಚ್ಚಕ್ಕಿಂತ ಹೆಚ್ಚುವರಿಯಾಗಿ ಪರಿಷ್ಕೃತಗೊಳ್ಳುವ ಪಟ್ಟಿ ನಿಯಂತ್ರಣಕ್ಕೆ ಸಮಿತಿ ರಚಿಸಿದ ರಾಜ್ಯ ಸರ್ಕಾರ - ಲೋಕೋಪಯೋಗಿ ಇಲಾಖೆ

ಲೋಕೋಪಯೋಗಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ.ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ ಇಬ್ಬರು ಸದಸ್ಯರನ್ನೊಳಗೊಂಡ ಕಾಮಗಾರಿ ಅಂದಾಜುಗಳ ತಯಾರಿಕಾ ಅಧ್ಯಯನ ಸಮಿತಿಯನ್ನು ರಚಿಸಿ ಆದೇಶಿಸಿದೆ.

Etv Bharat
Etv Bharat
author img

By ETV Bharat Karnataka Team

Published : Oct 23, 2023, 7:19 AM IST

Updated : Oct 23, 2023, 7:56 AM IST

ಬೆಂಗಳೂರು: ಸಿವಿಲ್ ಕಾಮಗಾರಿಗಳ ಹಲವಾರು ಅಂದಾಜು ವೆಚ್ಚಗಳು ಹೆಚ್ಚುವರಿಯಾಗಿ ಪರಿಷ್ಕೃತಗೊಳ್ಳುತ್ತಿರುವುದನ್ನು ನಿಯಂತ್ರಿಸಲು ಕಾಮಗಾರಿ ಅಂದಾಜುಗಳ ತಯಾರಿಕಾ ಅಧ್ಯಯನ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಲೋಕೋಪಯೋಗಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ.ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ ಇಬ್ಬರು ಸದಸ್ಯರನ್ನೊಳಗೊಂಡ ಕಾಮಗಾರಿ ಅಂದಾಜುಗಳ ತಯಾರಿಕಾ ಅಧ್ಯಯನ ಸಮಿತಿ ರಚಿಸಿ ಆದೇಶಿಸಿದೆ. ರಾಜ್ಯ ಸರ್ಕಾರದಿಂದ ಕೈಗೆತ್ತಿಕೊಳ್ಳುವ ಕಾಮಗಾರಿಗಳ ಅಂದಾಜುಗಳು ಪರಿಷ್ಕೃತಗೊಳ್ಳುತ್ತಿರುವುದರ ಬಗ್ಗೆ ಸಮಗ್ರವಾಗಿ ಪರಾಮರ್ಶಿಸಿ ಹಾಗೂ ಅಧ್ಯಯನ ನಡೆಸಿ ಕಾಮಗಾರಿಗಳ ಅಂದಾಜುಗಳು ಅನಗತ್ಯವಾಗಿ ಪರಿಷ್ಕೃತಗೊಳ್ಳುವುದನ್ನು ತಡೆಗಟ್ಟಲು, ನಿಯಂತ್ರಿಸಲು ಸೂಕ್ತ ಸಲಹೆ/ಸೂಚನೆಗಳನ್ನು ಒಳಗೊಂಡ ವರದಿಯನ್ನು ಒಂದು ತಿಂಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ.

ಸರ್ಕಾರದ ವಿವಿಧ ಇಲಾಖೆಗಳಡಿ ಕೈಗೊಳ್ಳುತ್ತಿರುವ ಕಾಮಗಾರಿಗಳಲ್ಲಿ ಹಲವಾರು ಕಾಮಗಾರಿಗಳ ಅನುಷ್ಠಾನದಲ್ಲಿ ಯೋಜನೆ ಮತ್ತು ವಿನ್ಯಾಸ ತಯಾರಿಸುವಲ್ಲಿನ ನ್ಯೂನ್ಯತೆಗಳು, ಅವೈಜ್ಞಾನಿಕ ವಿಸ್ತೃತ ಯೋಜನಾ ವರದಿ ತಯಾರಿಕೆ, ಅಗತ್ಯವಿರುವ ಎಲ್ಲ ಐಟಂಗಳನ್ನೊಳಗೊಂಡ ಸಮಗ್ರವಾದ ಅಂದಾಜು ತಯಾರಿಸದೇ ಇರುವುದು, ಭೂಸ್ವಾಧೀನ ಪ್ರಕ್ರಿಯೆ, ಪರಿಸರ ಸಂಬಂಧಿತ ತೀರುವಳಿ ಮುಂತಾದ ಅಗತ್ಯವಿರುವ ಶಾಸನಬದ್ಧ ತೀರುವಳಿ ಸಕಾಲದಲ್ಲಿ ಪಡೆಯದೇ ಕಾಮಗಾರಿಗಳನ್ನು ಆರಂಭಿಸುವುದು, ಗುತ್ತಿಗೆ ಒಪ್ಪಂದದಲ್ಲಿ ನಿಖರವಾದ ನಿಬಂಧನ/ಷರತ್ತುಗಳ ವಿಧಿಸುವ ಕೊರತೆಯಿಂದ ಉಂಟಾಗುವ ಅರ್ಬಿಟ್ರೇಷನ್/ನ್ಯಾಯಾಲಯಗಳ ದಾವೆಗಳಿಂದ ಉಂಟಾಗುವ ವಿಳಂಬ ಹಾಗೂ ಇತರ ಕಾರಣಾಂತರಗಳಿಂದ ಕಾಮಗಾರಿಗಳ ಮೂಲ ಅಂದಾಜು ಮೊತ್ತವು ಪರಿಷ್ಕೃತಗೊಂಡು ಸರ್ಕಾರಕ್ಕೆ ಆರ್ಥಿಕ ಹೊರೆ ಉಂಟಾಗುತ್ತಿದೆ.

ಜೊತೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗುತ್ತಿರುವುದರಿಂದ ಈ ಕಾಮಗಾರಿಗಳ ಸೌಲಭ್ಯಗಳು ಸಾರ್ವಜನಿಕರಿಗೆ ಸಕಾಲದಲ್ಲಿ ತಲುಪುವಲ್ಲಿ ವಿಳಂಬವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೂಲ ಅಂದಾಜುಗಳು ಪರಿಷ್ಕರಣೆಗೊಳ್ಳುವ ಮೂಲಕ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿರುವುದನ್ನು ತಡೆಗಟ್ಟಲು ಹಾಗೂ ಸರ್ಕಾರದ ಕಾಮಗಾರಿಗಳ ಸೌಲಭ್ಯಗಳು ಸಾರ್ವಜನಿಕರಿಗೆ ಸಕಾಲದಲ್ಲಿ ಪೂರೈಸುವ ಉದ್ದೇಶದಿಂದ ಕಾಮಗಾರಿಗಳ ಅಂದಾಜುಗಳು ಪರಿಷ್ಕರಣೆಯಾಗಲು ಕಾರಣವಾಗುವ ಎಲ್ಲ ಅಂಶಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ನ್ಯೂನ್ಯತೆಗಳನ್ನು ಗುರುತಿಸಿ ಸೂಕ್ತ ಸಲಹೆ ಸೂಚನೆಗಳುಳ್ಳ ವರದಿಯನ್ನು ನೀಡಲು ಪರಿಣಿತರನ್ನೊಳಗೊಂಡ ಸಮಿತಿಯನ್ನು ರಚಿಸಲು ಸರ್ಕಾರ ತೀರ್ಮಾನಿಸಿದೆ.

ಸಮಿತಿ ಪರಿಗಣಿಸಬೇಕಾದ ಪ್ರಮುಖ ಅಂಶಗಳೇನು?: ಕಾಮಗಾರಿಗಳ ಯೋಜನೆ ಮತ್ತು ವಿನ್ಯಾಸ ತಯಾರಿಕೆಯಲ್ಲಿ ಸುಧಾರಣೆ ಕುರಿತು, ಕಾಮಗಾರಿಗಳ ಸ್ವರೂಪ, ಭೂ ಒಡೆತನ ಹಾಗೂ ಕಾಮಗಾರಿಗೆ ಅಗತ್ಯವಿರುವ ಭೂಮಿಯ ಪರಿಮಾಣ ಆಧರಿಸಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕಾಲಮಿತಿ ನಿಗದಿಪಡಿಸುವ ಕುರಿತು 10 ಕೋಟಿವರೆಗಿನ ಅಂದಾಜು ಮೊತ್ತದ ಕಾಮಗಾರಿಗಳ ಯೋಜನೆ ಮತ್ತು ವಿನ್ಯಾಸವನ್ನು ಪರಿಣಾಮಕಾರಿಯಾಗಿ ರೂಪಿಸಿ ಸಕಾಲದಲ್ಲಿ ಪೂರ್ಣಗೊಳಿಸಲು ಸಾಧ್ಯವಿರುವುದರಿಂದ ಇವುಗಳ ಅನುಮೋದಿತ ಅಂದಾಜುಗಳು, ಮೂಲ ಅಂದಾಜು ಮೊತ್ತವನ್ನು ಮೀರಿ ಪರಿಷ್ಕೃತಗೊಳ್ಳುವುದನ್ನು ನಿರ್ಬಂಧಗೊಳಿಸುವ ಬಗ್ಗೆ ಅಧ್ಯಯನ ನಡೆಸಬೇಕು.

ಗುತ್ತಿಗೆದಾರರು ಆರ್ಬಿಟ್ರೇಷನ್/ನ್ಯಾಯಾಲಯಗಳಲ್ಲಿ ದಾವೆ ಹೂಡವುದನ್ನು ತಡೆಯುವ ನಿಟ್ಟಿನಲ್ಲಿ ಗುತ್ತಿಗೆ ಕರಾರುಗಳಲ್ಲಿ ಸೂಕ್ತ ರೀತಿಯ ಷರತ್ತು/ನಿಬಂಧನೆಗಳ ಅಳವಡಿಕೆ ಹಾಗೂ ಇವುಗಳನ್ನು ಜಾರಿಗೊಳಿಸುವಲ್ಲಿ ಇಲಾಖೆಗಳಿಗೆ ಹೊಣೆಗಾರಿಕೆ ನಿಗದಿಪಡಿಸುವ ಕುರಿತು, ಪರಿಷ್ಕೃತ ಅಂದಾಜನ್ನು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವ ಕುರಿತಂತೆ ಕಾಲಮಿತಿ ನಿಗದಿಪಡಿಸುವ ಕುರಿತು ವರದಿ ನೀಡಬೇಕು.

ಮೂಲ ಅಂದಾಜು ಪರಿಷ್ಕೃತಗೊಳ್ಳುವುದನ್ನು ಮುಂಚಿತವಾಗಿಯೇ ಊಹಿಸಿ ಕಾಮಗಾರಿಗಳ ಭೌತಿಕ ಪ್ರಗತಿ ಮತ್ತು ಆರ್ಥಿಕ ಪ್ರಗತಿಗಳ ಆಧಾರದ ಮೇಲೆ ಯಾವ ಹಂತದಲ್ಲಿ ಅಂದಾಜು ಪರಿಷ್ಕರಣೆಯ ಪ್ರಕ್ರಿಯೆಯನ್ನು ಆರಂಭಿಸಬೇಕೆಂಬುದರ ಬಗ್ಗೆ, ಪರಿಷ್ಕೃತ ಅಂದಾಜು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಳ್ಳದೇ ಅನುಮೋದಿತ ಮೊತ್ತವನ್ನು ಮೀರಿ ಭರಿಸುವ ವೆಚ್ಚವನ್ನು ನಿರ್ಬಂಧಗೊಳಿಸುವ ಕುರಿತು, ಪರಿಷ್ಕೃತ ಅಂದಾಜನ್ನು ಮರುಪರಿಷ್ಕೃತಗೊಳಿಸುವುದನ್ನು ನಿರ್ಬಂಧಿಸುವ ಬಗ್ಗೆ ಅಧ್ಯಯನ ಮಾಡಬೇಕು.

ಪ್ರಚಲಿತ ಅನುಸೂಚಿ ದರಗಳಿಗೆ ಅನುಗುಣವಾಗಿ ಅಂದಾಜುಗಳನ್ನು ತಯಾರಿಸಿ, ಆಡಳಿತಾತ್ಮಕ ಅನುಮೋದನೆಯೊಂದಿಗೆ ಟೆಂಡರ್ ಕರೆಯುವ ಬಗ್ಗೆ, ಆಡಳಿತಾತ್ಮಕ ಅನುಮೋದನೆ ಪಡೆದ ನಂತರ ಕಾಲ ವಿಳಂಬ ಮಾಡದೇ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಸಮಯ ನಿಗದಿಪಡಿಸುವುದು ಹಾಗೂ ಈ ರೀತಿ ಕ್ರಮವಹಿಸಲು ವಿಳಂಬವಾದಲ್ಲಿ ಪ್ರಚಲಿತ ದರಗಳ ಅನ್ವಯ ಅಂದಾಜು ತಯಾರಿಸಿ ಪುನಃ ಆಡಳಿತಾತ್ಮಕ ಪಡೆಯುವ ಕುರಿತು ಪರಿಶೀಲಿಸಬೇಕು.

ಮೂಲ ಅಂದಾಜುಗಳನ್ನು ತಯಾರಿಸುವಾಗ ಸಣ್ಣ ಪುಟ್ಟ ಕಾಮಗಾರಿಗಳಾದ ಪೀಠೋಪಕರಣ ಅಳವಡಿಕೆ/LAN ಸಂಪರ್ಕ/ವಿದ್ಯುತ್ ಸಂಪರ್ಕ ದೀಪದ ಕಂಬಗಳ ಅಳವಡಿಕೆಯಂತಹ ಕಾಮಗಾರಿಗಳಿಗೆ ಅಂದಾಜು ಅನುವು ಮಾಡಿಕೊಳ್ಳದೇ ಪ್ರತ್ಯೇಕವಾಗಿ ಕೈಗೊಳ್ಳುವ ಬದಲಾಗಿ ಈ ಎಲ್ಲಾ ಅಂಶಗಳನ್ನು ಒಳಗೊಂಡಂತಹ ಸಮಗ್ರವಾದ ಅಂದಾಜು ತಯಾರಿಸುವ ಬಗ್ಗೆ, ಕಾಮಗಾರಿಗಳ ಕರಾರುವಕ್ಕಾದ ಅಂದಾಜು ತಯಾರಿಕೆಗೆ ಅಗತ್ಯವಿರುವ ಮಣ್ಣಿನ ಗುಣ ಪರೀಕ್ಷೆ, ಹೂಳೆತ್ತುವಿಕೆ, ಸ್ಥಳ ಪರಿವೀಕ್ಷಣೆ, Utility Shifting, ಮತ್ತು ಇತರ ಅಗತ್ಯ ಪರೀಕ್ಷೆಗಳನ್ನು ಯಾವ ಹಂತದಲ್ಲಿ ಕೈಗೊಳ್ಳಬೇಕೆಂಬ ಬಗ್ಗೆ ಕಡ್ಡಾಯಗೊಳಿಸುವ ಕುರಿತು ಹಾಗೂ ಕಾಮಗಾರಿಗಳ ಸ್ವಭಾವಗಳು ಮತ್ತು ಸ್ವರೂಪಗಳನ್ನಾಧರಿಸಿ DBOT ಟಂಡರ್‌ ಪದ್ಧತಿಯ ಆಧಾರದ ಮೇಲೆ ಕೈಗೆತ್ತಿಕೊಳ್ಳಬಹುದಾದ ಕಾಮಗಾರಿಗಳನ್ನು ಗುರುತಿಸುವ ಕುರಿತು ಅಧ್ಯಯನ ನಡೆಸಿ ವರದಿ ನೀಡಬೇಕು.

ಇದನ್ನೂ ಓದಿ: 2023-24ನೇ ಸಾಲಿನ ಅರ್ಧ ವರ್ಷ ಕಳೆದರೂ ವಿಶೇಷ ಅಭಿವೃದ್ಧಿ ಯೋಜನೆಯ ಪ್ರಗತಿ ನಿರಾಶಾದಾಯಕ

Last Updated : Oct 23, 2023, 7:56 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.