ETV Bharat / state

SSLC ಪರೀಕ್ಷಾ ಶುಲ್ಕ ಪರಿಷ್ಕರಣೆ ಮಾಡಿದ ಶಿಕ್ಷಣ ಇಲಾಖೆ; ಪ್ರತಿ ವಿದ್ಯಾರ್ಥಿಗೆ 100 ರೂ. ಹೆಚ್ಚಳ

author img

By

Published : Dec 8, 2021, 5:58 PM IST

2019-20ನೇ ಸಾಲಿನಲ್ಲಿ ಕೋವಿಡ್ 19 ಸಮಯದಲ್ಲಿ ಪರೀಕ್ಷೆ ನಡೆಸಿದಾಗ, ಆ ಪ್ರಕ್ರಿಯೆಗಳಲ್ಲಿ SOP ಅನುಪಾಲನೆಯಿಂದಾಗಿ ಮಂಡಳಿ ಆಯವ್ಯಯದಲ್ಲಿ ಹಂಚಿಕೆ ಮಾಡಿಕೊಂಡಿದ್ದ ಅನುದಾನಕ್ಕಿಂತ ಒಟ್ಟಾರೆ ಸುಮಾರು 10.61ಕೋಟಿ ರೂ.ಗಳು ಹೆಚ್ಚುವರಿ ವೆಚ್ಚವಾಗಿದೆ.‌ ಈ ಹೆಚ್ಚುವರಿ ಹೊರೆಯನ್ನು ಸರಿದೂಗಿಸಲು ಪ್ರತಿ ವಿದ್ಯಾರ್ಥಿಗಳಿಗೆ ತಲಾ 100 ರೂಪಾಯಿ ಹೆಚ್ಚಿಸಲಾಗಿದೆ.

Karnataka Education department hike SSLC exam fees to Rs. 100
ಎಸ್ಎಸ್ಎಲ್​ಸಿ ಪರೀಕ್ಷಾ ಶುಲ್ಕ ಪರಿಷ್ಕರಣೆ ಮಾಡಿದ ಶಿಕ್ಷಣ ಇಲಾಖೆ

ಬೆಂಗಳೂರು: 2021-22ನೇ ಸಾಲಿನಲ್ಲಿ ನಡೆಯುವ ಎಸ್ಎಸ್ಎಲ್​ಸಿ ಪರೀಕ್ಷೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪೂರ್ವ ಸಿದ್ಧತೆಯನ್ನ ಮಾಡಿಕೊಳ್ತಿದೆ. ಈ ಮಧ್ಯೆ ಎಸ್ಎಸ್ಎಲ್​ಸಿ ಪರೀಕ್ಷಾ ಶುಲ್ಕ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದ್ದು, ಪ್ರತಿ ವಿದ್ಯಾರ್ಥಿಯಿಂದ ಹೆಚ್ಚುವರಿ 100 ರೂಪಾಯಿ ಪಾವತಿಸುವಂತೆ ಸೂಚಿಸಿದೆ.‌

ಇಲಾಖೆಯ ಈ ದಿಢೀರ್​ ನಿರ್ಧಾರಕ್ಕೆ ಪ್ರಮುಖ ಕಾರಣವೆಂದರೆ, ಕಳೆದ 2019-20ನೇ ಸಾಲಿನಲ್ಲಿ ಕೋವಿಡ್ 19 ಸಮಯದಲ್ಲಿ ಪರೀಕ್ಷೆ ನಡೆಸಿದಾಗ, ಆ ಪ್ರಕ್ರಿಯೆಗಳಲ್ಲಿ SOP ಅನುಪಾಲನೆಯಿಂದಾಗಿ ಮಂಡಳಿ ಆಯವ್ಯಯದಲ್ಲಿ ಹಂಚಿಕೆ ಮಾಡಿಕೊಂಡಿದ್ದ ಅನುದಾನಕ್ಕಿಂತ ಒಟ್ಟಾರೆ ಸುಮಾರು 10.61ಕೋಟಿ ರೂಗಳು ಹೆಚ್ಚುವರಿ ವೆಚ್ಚವಾಗಿದೆ.‌ ಈ ಹೆಚ್ಚುವರಿ ಹೊರೆಯನ್ನು ಸರಿದೂಗಿಸಲು ಪ್ರತಿ ವಿದ್ಯಾರ್ಥಿಗಳಿಗೆ ತಲಾ 100 ರೂಪಾಯಿ ಹೆಚ್ಚಿಸಿದೆ ಎಂದು ತಿಳಿದುಬಂದಿದೆ.

2021-22ರ ಶೈಕ್ಷಣಿಕ ವರ್ಷದಲ್ಲಿ ಕೋವಿಡ್-19ರ ಪ್ರತಿಕೂಲ ಸನ್ನಿವೇಶ ಮುಂದುವರೆಯುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷಾ ಶುಲ್ಕ ಪರಿಷ್ಕರಿಸಿದೆ.

Karnataka Education department hike SSLC exam fees to 100 Rs

ಪರೀಕ್ಷಾ ಶುಲ್ಕ‌ ಹೀಗಿದೆ..

ಪ್ರಥಮ ಬಾರಿಗೆ ಹಾಜರಾಗುವ ಶಾಲಾ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ 485 ರಿಂದ 585 ರೂ.ಗಳಿಗೆ ಏರಿಕೆ. ಲ್ಯಾಮಿನೇಷನ್ ಶುಲ್ಕ 22 ರೂ. ಇದ್ದು ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಪುನರಾವರ್ತಿತ ಶಾಲಾ/ಖಾಸಗಿ ಅಭ್ಯರ್ಥಿಗಳ ಶುಲ್ಕ :

  • ಒಂದು ವಿಷಯಕ್ಕೆ- 320 ರೂ. ಇದ್ದದ್ದು, ಇದೀಗ 370 ರೂ.ಗೆ ಏರಿಕೆ
  • ಎರಡು ವಿಷಯಕ್ಕೆ- 386 ರೂ. ಯಿಂದ 461 ರೂ.ಗೆ ಏರಿಕೆ
  • ಮೂರು ವಿಷಯ ಹಾಗೂ ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ- 520 ರೂ.ಗಳಿಂದ 620 ರೂ.ಗಳಿಗೆ ಏರಿಕೆ.

ಇದನ್ನೂ ಓದಿ:ಶಾಲೆಗಳಲ್ಲಿ ಪರಿಷ್ಕೃತ ಎಸ್ಒಪಿ ಜಾರಿ ಕುರಿತು ಅಧಿಕಾರಿಗಳ ಜೊತೆ ಸಿಎಂ ಮಹತ್ವದ ಸಭೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.