ಬೆಂಗಳೂರು: ರಾಜ್ಯದಲ್ಲಿಂದು 55,829 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, 181 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,43,108ಕ್ಕೆ ಏರಿಕೆಯಾಗಿದೆ. ಪಾಸಿಟಿವ್ ರೇಟ್ 0.32% ರಷ್ಟಿದೆ.
ಇಂದು 222 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 39,00,127 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ರಾಜ್ಯದಲ್ಲಿ 2,937 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿಗೆ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,006ಕ್ಕೆ ಏರಿಕೆಯಾಗಿದೆ. ಡೆತ್ ರೇಟ್ 1.10% ರಷ್ಟಿದೆ. ಈ ದಿನ ವಿಮಾನ ನಿಲ್ದಾಣದಿಂದ 2160 ಪ್ರಯಾಣಿಕರು ಆಗಮಿಸಿದ್ದಾರೆ.
ರಾಜಧಾನಿ ಕೋವಿಡ್ ವಿವರ: ಬೆಂಗಳೂರಿನಲ್ಲಿ 122 ಮಂದಿಗೆ ಸೋಂಕು ತಗುಲಿದ್ದು, 17,79,857 ಕ್ಕೆ ಏರಿಕೆಯಾಗಿದೆ. 147 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 17,60,636 ಜನರು ಗುಣಮುಖರಾಗಿದ್ದಾರೆ. ಇಂದು ಸೋಂಕಿನಿಂದ ಸಾವು ಸಂಭವಿಸಿಲ್ಲ. ಸದ್ಯ ಸಾವಿನ ಸಂಖ್ಯೆ 16,937 ರಷ್ಟಿದ್ದು, ಸಕ್ರಿಯ ಪ್ರಕರಣಗಳು 2,283 ರಷ್ಟಿವೆ.
ರೂಪಾಂತರಿ ವೈರಸ್ ಅಪ್‌ಡೇಟ್ಸ್: ಅಲ್ಪಾ- 156, ಬೇಟಾ-08, ಡೆಲ್ಟಾ ಸಬ್ ಲೈನ್ ಏಜ್- 4431, ಇತರೆ- 286, ಒಮಿಕ್ರಾನ್-1115, BAI.1.529- 807, BA1- 89, BA2-219-ಒಟ್ಟು- 5996