ಬೆಂಗಳೂರು: ರಾಜ್ಯದಲ್ಲಿಂದು 10,552 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು 90 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,46,735 ಕ್ಕೆ ಏರಿಕೆ ಆಗಿದೆ. ಪಾಸಿಟಿವ್ ದರೂ 0.85% ಇದೆ.
45 ಸೋಂಕಿತರು ಗುಣಮುಖರಾಗಿದ್ದು ಈತನಕ 39,05,041 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಸೋಂಕಿನಿಂದ ಮೃತಪಟ್ಟವರ ಬಗ್ಗೆ ವರದಿಯಾಗಿಲ್ಲ. ಈ ವರೆಗೆ 40,057 ಸೋಂಕಿತರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 1595 ರಷ್ಟಿದೆ.
ವಿಮಾನ ನಿಲ್ದಾಣದಿಂದ 3270 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. ಬೆಂಗಳೂರಿನಲ್ಲಿ 85 ಮಂದಿಗೆ ಸೋಂಕು ತಗುಲಿದ್ದು 17,82,747 ಕ್ಕೆ ಏರಿಕೆ ಆಗಿದೆ. 39 ಮಂದಿ ಡಿಸ್ಚಾರ್ಜ್ ಆಗಿದ್ದು ಈತನಕ 17,64,264 ಏರಿಕೆ ಕಂಡಿದೆ. ಇಂದು ಯಾವುದೇ ಸಾವಿನ ವರದಿಯಾಗಿಲ್ಲ. ಸಾವಿನ ಸಂಖ್ಯೆ 16,962 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1,520 ರಷ್ಟಿದೆ.
ರೂಪಾಂತರಿ ವೈರಸ್ಗಳಾದ ಅಲ್ಪಾ- 156, ಬೇಟಾ-08, ಡೆಲ್ಟಾ ಸಬ್ ಲೈನ್ ಏಜ್- 4620, ಇತರೆ- 311, ಒಮಿಕ್ರಾನ್- 3775, BAI.1.529- 947, BA1- 99, BA2- 2729 ಪ್ರಕರಣಗಳು ಪತ್ತೆಯಾಗಿದೆ.
ಇದನ್ನೂ ಓದಿ: ದೆಹಲಿ-ತಮಿಳುನಾಡಿನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ: ₹500 ದಂಡ ಎಚ್ಚರಿಕೆ