ಬೆಂಗಳೂರು : ರಾಜ್ಯದಲ್ಲಿಂದು 69,993 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 356 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 30,05,232ಕ್ಕೆ ಏರಿಕೆ ಆಗಿದೆ.
ಇನ್ನು 347 ಮಂದಿ ಗುಣಮುಖರಾಗಿದ್ದಾರೆ. ಈತನಕ 29,59,429 ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಸೋಂಕಿತರು ಮೃತರಾಗಿದ್ದು, ಒಟ್ಟಾರೆ 38,318ಕ್ಕೆ ಸಾವಿನ ಸಂಖ್ಯೆ ಏರಿದೆ.
ಸದ್ಯ ಸಕ್ರಿಯ ಪ್ರಕರಣಗಳು 7,456ಕ್ಕೆ ಏರಿಕೆ ಕಂಡಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.50ರಷ್ಟಿದೆ. ಸಾವಿನ ಪ್ರಮಾಣ ಶೇ.0.56 ರಷ್ಟು ಇದೆ. ವಿಮಾನ ನಿಲ್ದಾಣದಲ್ಲಿ 1,389 ತಪಾಸಣೆಗೊಳ್ಳಪಟ್ಟಿದ್ದು, ಹೈರಿಸ್ಕ್ ದೇಶಗಳಿಂದ 690 ಪ್ರಯಾಣಿಕರು ಆಗಮಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿಂದು 269 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 12,61,997ಕ್ಕೆ ಏರಿದೆ. 209 ಜನರು ಡಿಸ್ಚಾರ್ಜ್ ಆಗಿದ್ದು 12,39,486 ಗುಣಮುಖರಾಗಿದ್ದಾರೆ. ಒಬ್ಬ ಸೋಂಕಿತ ಮೃತರಾಗಿದ್ದು, ಸಾವಿನ ಸಂಖ್ಯೆ 16,388 ರಷ್ಟಿದೆ. ಸದ್ಯ ಸಕ್ರಿಯ ಪ್ರಕರಣಗಳು 6122ರಷ್ಟಿವೆ.
ರೂಪಾಂತರಿ ಅಪ್ಡೇಟ್ಸ್ :
ಅಲ್ಪಾ- 155
ಬೇಟಾ-08
ಡೆಲ್ಟಾ- 2569
ಡೆಲ್ಟಾ ಸಬ್ ಲೈನ್ ಏಜ್- 949
ಕಪ್ಪಾ-160
ಈಟಾ-01
ಒಮಿಕ್ರಾನ್- 38