ಬೆಂಗಳೂರು: ಲಾಕ್ ಡೌನ್ ಮುಕ್ತಾಯದ ಹಂತ ತಲುಪಿದರು ಸಹ ಕೊರೊನಾ ವೈರಸ್ ಮಾತ್ರ ಹರಡುವುದನ್ನ ನಿಲ್ಲಿಸಿಲ್ಲ. ಇಂದು ಒಂದೇ ದಿನ 54 ಹೊಸ ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿದೆ. ಜೊತೆಗೆ ಉಡುಪಿಯಲ್ಲಿ ಕೊಕೊನಾಗೆ ಮೊದಲ ಬಲಿಯಾಗಿದ್ದು, ರಾಜ್ಯದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 37ಕ್ಕೆ ಏರಿಕೆ ಆಗಿದೆ.
P-1093- 54 ವರ್ಷದ ವ್ಯಕ್ತಿ ಉಡುಪಿಯ ಜಿಲ್ಲೆಯ ನಿವಾಸಿಯಾಗಿದ್ದು, ಹೃದಯ ಸಂಬಂಧದ ತೊಂದರೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 14 ರಂದು ಹೃದಯಾಘಾತದಿಂದ ಮರಣ ಹೊಂದಿದ್ದರು ಎನ್ನಲಾಗಿತ್ತು. ಈಗ ಆ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದ್ದು, ಆತ ಕೊರೊನಾ ವೈರಸ್ನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1146 ಕ್ಕೆ ಏರಿಕೆ ಆಗಿದ್ದು, ಈ ಪೈಕಿ 497 ಜನ ಡಿಸ್ಚಾರ್ಜ್ ಆಗಿದ್ದಾರೆ. ಉಳಿದ 611ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು, ಬೆಂಗಳೂರಿಗೆ ಸ್ವಲ್ಪ ರಿಲೀಫ್ ಸಿಕ್ಕಿದ್ದು, 24 ಗಂಟೆಯಲ್ಲಿ ಯಾವುದೇ ಕೇಸ್ ಪತ್ತೆಯಾಗಿಲ್ಲ. ನಿನ್ನೆ ಮಧ್ಯಾಹ್ನದ ವೇಳೆಗೆ 14 ಕೇಸ್‌ಗಳು ವರದಿಯಾಗಿದ್ದವು. ಆದರೆ ಇಂದು ಮಧ್ಯಾಹ್ನದ ಬುಲೆಟಿನ್ನಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ. ಕಲಬುರಗಿ 10, ಯಾದಗಿರಿ 3, ಹಾಸನ 6, ಧಾರವಾಡ 4, ವಿಜಯಪುರ1, ದಕ್ಷಿಣ ಕನ್ನಡ 2, ಉಡುಪಿ 1, ಕೋಲಾರ 3, ಮಂಡ್ಯ 22, ಶಿವಮೊಗ್ಗ 2 ಕೇಸುಗಳು ದಾಖಲಾಗಿವೆ.