ETV Bharat / state

'ಕೈ' ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ ಶುರು; ಬಂಡಾಯ ಸ್ಪರ್ಧೆಗಿಲ್ಲ ಅವಕಾಶ - Fund for party strengthening in form of DD

ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ಆಕಾಂಕ್ಷಿತ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸುವ ಕಾರ್ಯವನ್ನು ನಿನ್ನೆಯಿಂದ ಪ್ರಾರಂಭಿಸಿದೆ.

Bangalore Congress Headquarters
ಬೆಂಗಳೂರು ಕಾಂಗ್ರೆಸ್​ ಪ್ರಧಾನ ಕಚೇರಿ
author img

By

Published : Nov 6, 2022, 11:49 AM IST

ಬೆಂಗಳೂರು: ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿತ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸುವ ಕಾರ್ಯ ಆರಂಭವಾಗಿದೆ. ಈ ತಿಂಗಳು 15 ರವರೆಗಿದು ಮುಂದುವರಿಯಲಿದೆ. ಈ ಬಾರಿ ಕಾಂಗ್ರೆಸ್ ಸಾಕಷ್ಟು ನಿಯಮ, ನಿರ್ಬಂಧಗಳನ್ನು ವಿಧಿಸಿದೆ. ಅಕಾಂಕ್ಷಿಗಳಿಂದ ದೊಡ್ಡ ಮೊತ್ತದ ದೇಣಿಗೆಯನ್ನೂ ಸಹ ನಿರೀಕ್ಷಿಸುತ್ತಿದೆ.

ಪಕ್ಷ ಬಲವರ್ಧನೆಗೆ ಡಿಡಿ ರೂಪದಲ್ಲಿ ನಿಧಿ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಪಕ್ಷದಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದು ಸಮನ್ವಯ ಸಾಧಿಸಬೇಕಿದೆ. ಈಗಾಗಲೇ 25ಕ್ಕೂ ಹೆಚ್ಚು ಅರ್ಜಿ ಸ್ವೀಕೃತಿ ಆಗಿದೆ ಎಂಬ ಮಾಹಿತಿ ಇದೆ. ಆಕಾಂಕ್ಷಿಗಳಿಂದ ಕಟ್ಟಡ ನಿಧಿ ಹೆಸರಿನಲ್ಲಿ ಡಿಡಿ ರೂಪದಲ್ಲಿ ಪಕ್ಷ ಬಲವರ್ಧನೆಗೆ ನಿಧಿ ಸಂಗ್ರಹಿಸಲಾಗುತ್ತಿದೆ. ಅರ್ಜಿ ನಮೂನೆ ಪಡೆಯಲು 5 ಸಾವಿರ ರೂ. ಶುಲ್ಕ ಪಾವತಿಸಬೇಕು. ಇದಾದ ಬಳಿಕ ಭರ್ತಿ ಮಾಡಿದ ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗದವರು 2 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರು 1 ಲಕ್ಷ ರೂ. ಮೊತ್ತವನ್ನು ಪಕ್ಷದ ಹೆಸರಿನಲ್ಲಿ ಡಿಡಿ ತೆಗೆದು ನೀಡುವ ನಿಯಮ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಲೇವಡಿಗೆ ತಿರುಗೇಟು: ಇದನ್ನು ಬಿಜೆಪಿ ಲೇವಡಿ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನಮ್ಮ ಕಾರ್ಯಕರ್ತರಿಂದ ಪಡದರೆ ಅವರಿಗೇನು ನೋವು ಎಂದರು.

ಬಂಡಾಯವಾಗಿ ಸ್ಪರ್ಧಿಸುವಂತಿಲ್ಲ: ಹಲವು ಕ್ಷೇತ್ರಗಳಲ್ಲಿ ನಾಲ್ಕಕ್ಕೂ ಹೆಚ್ಚು ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಸಲು ಉತ್ಸಾಹ ಕಂಡುಬಂದಿದೆ. ಹೀಗಾಗಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಿಲ್ಲ ಎಂದು ಡಿಕ್ಲರೇಷನ್ ನೀಡುವಂತೆ ಸೂಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.