ETV Bharat / state

ನಾನು ರಾಜೀನಾಮೆ ನೀಡಿಲ್ಲ: ಸದನದಲ್ಲಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

author img

By

Published : Jul 22, 2019, 10:15 PM IST

ನಾನು ರಾಜೀನಾಮೆ ನೀಡಿದ್ದೇನೆ ಎಂಬ ವದಂತಿ ಹಬ್ಬಿದೆ. ಈ ಸುದ್ದಿಯನ್ನು ಯಾರು ಹರಡಿದ್ದಾರೆಂದು ಗೊತ್ತಿಲ್ಲ ಎಂದು ಸಿಎಂ ಸದನದಲ್ಲಿ ಹೇಳಿದರು.

ಕುಮಾರಸ್ವಾಮಿ

ಬೆಂಗಳೂರು: ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಿರುವುದಾಗಿ ವದಂತಿ ಸೃಷ್ಟಿಯಾಗಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿಗಳೇ ಸದನದಲ್ಲಿ ಸ್ಪಷ್ಟನೆ ನೀಡಿದರು.

ಸದನದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಾನು ರಾಜೀನಾಮೆ ನೀಡಿದ್ದೇನೆ ಎಂಬ ವದಂತಿ ಹಬ್ಬಿದೆ. ಈ ಸುದ್ದಿಯನ್ನು ಯಾರು ಹರಡಿದ್ದಾರೆಂದು ಗೊತ್ತಿಲ್ಲ. ಸಿಎಂ ಆಗಲು ಯಾರು ಕಾಯುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಯಾರೋ ನನ್ನ ಸಹಿಯನ್ನು ನಕಲಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ರಾಜೀನಾಮೆ ಪತ್ರ ಹರಿದಾಡುತ್ತದೆ. ಇದು ನನಗೆ ಆಘಾತ ತಂದಿದೆ ಎಂದು ತಿಳಿಸಿದರು.

ನಾನು ರಾಜೀನಾಮೆ ನೀಡಿಲ್ಲ. ಯಾರೋ ನನ್ನ ಸಹಿಯನ್ನು ನಕಲಿ ಮಾಡಿ, ವದಂತಿ ಹರಡುತ್ತಿದ್ದಾರೆ ಎಂದು ಇದೇ ವೇಳೆ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಬೆಂಗಳೂರು: ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಿರುವುದಾಗಿ ವದಂತಿ ಸೃಷ್ಟಿಯಾಗಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿಗಳೇ ಸದನದಲ್ಲಿ ಸ್ಪಷ್ಟನೆ ನೀಡಿದರು.

ಸದನದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಾನು ರಾಜೀನಾಮೆ ನೀಡಿದ್ದೇನೆ ಎಂಬ ವದಂತಿ ಹಬ್ಬಿದೆ. ಈ ಸುದ್ದಿಯನ್ನು ಯಾರು ಹರಡಿದ್ದಾರೆಂದು ಗೊತ್ತಿಲ್ಲ. ಸಿಎಂ ಆಗಲು ಯಾರು ಕಾಯುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಯಾರೋ ನನ್ನ ಸಹಿಯನ್ನು ನಕಲಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ರಾಜೀನಾಮೆ ಪತ್ರ ಹರಿದಾಡುತ್ತದೆ. ಇದು ನನಗೆ ಆಘಾತ ತಂದಿದೆ ಎಂದು ತಿಳಿಸಿದರು.

ನಾನು ರಾಜೀನಾಮೆ ನೀಡಿಲ್ಲ. ಯಾರೋ ನನ್ನ ಸಹಿಯನ್ನು ನಕಲಿ ಮಾಡಿ, ವದಂತಿ ಹರಡುತ್ತಿದ್ದಾರೆ ಎಂದು ಇದೇ ವೇಳೆ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

Intro:ಹಂಪಿ ಉತ್ಸವಕ್ಕೆಂದು ಬಂದ ಒಂಟೆಗಳು ಅರಣ್ಯ ಇಲಾಖೆ ವಶಕ್ಕೆ!
ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವಕ್ಕೆಂದು ಬಂದ ಒಂಟೆಗಳನ್ನು ಜಿಲ್ಲಾಡಳಿತವು ಅರಣ್ಯ ಇಲಾಖೆಗೆ ಸುಪರ್ದಿಗೆ ವಹಿಸಿದೆ.
ಜಿಲ್ಲಾಡಳಿತವು 2019ರ ಮಾರ್ಚ್‌ ತಿಂಗಳಲ್ಲಿ ಆಯೋಜಿಸಿದ್ದ ಹಂಪಿ ಉತ್ಸವದಲ್ಲಿ ಪ್ರದರ್ಶನಕ್ಕಾಗಿ ಮಹಾರಾಷ್ಟ್ರ ರಾಜ್ಯದ
ಪುಣೆ, ಅಹಮ್ಮದನಗರ ಮತ್ತು ಸೋಲ್ಲಾಪುರ ಜಿಲ್ಲೆಯ ಅಲೆ ಮಾರಿಗಳನ್ನು ಸಂಪರ್ಕಿಸಿ, ಒಂಟೆ ತೆಗೆದುಕೊಂಡು ಬರುವಂತೆ ತಿಳಿಸಿತ್ತು. ಹಂಪಿಯಲ್ಲಿ ಮೂರು ದಿನಗಳಕಾಲ ನಡೆಯಲಿರುವ ಉತ್ಸವದಲ್ಲಿ ದಿನವೊಂದಕ್ಕೆ 1.50 ಲಕ್ಷ ರೂ. ಸಂಭಾವನೆ ಕೊಡೋದಾಗಿ ತಿಳಿಸಿ, 40,000 ರೂ. ಮುಂಗಡ ಹಣವನ್ನು ಪಾವತಿಸಿತ್ತು. ಆದರೆ, ಈ ಅಲೆಮಾರಿ ಕುಟುಂಬಗಳು ಮಾರ್ಚ್‌
1ರ ಬದಲಿಗೆ 2ನೇ ತಾರೀಖಿನಂದು ಹಂಪಿಗೆ ಬಂದಿಳಿದಿದ್ದರು. ವಿಳಂಬವಾಗಿದ್ದರಿಂದ ಆಯೋಜಕರು ಇನ್ನುಳಿದ ಹಣ ಪಾವತಿಸಿರಲಿಲ್ಲ. ಬಂದ ಹಣದಲ್ಲಿ 35,000 ಒಂಟೆ ತಂದ ಲಾರಿಯವರಿಗೆ ಪಾವತಿಸಿದ್ದಾರೆ. ಹಣವಿಲ್ಲದೆ ತಮ್ಮೂರಿಗೆ ವಾಪಾಸ್ಸಾಗದೆ, ಊರಿಂದ ಊರಿಗೆ ಅಲೆಯುತ್ತ, ಜನರನ್ನು
ಒಂಟೆ ಮೇಲೆ ಸುತ್ತಾಡಿಸಿ, ಬಂದ ಹಣದಲ್ಲಿ ಬಾಳ ಬುತ್ತಿಯನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಕೆಲವರು ಒಂಟೆಗಳ ಛಾಯಾಚಿತ್ರವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸಂಸದೆ, ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಮೇನಕಾ ಗಾಂಧಿ ಅವರಿಗೆ ಕಳುಹಿಸಿದ್ದಾರೆ.
ಸಂಸದೆಯ ನಿರ್ದೇಶನದ ಮೇರೆಗೆ ಕಮಲಾಪುರದ ಪೊಲೀಸರು, ಆ ಒಂಟೆಗಳನ್ನು ವಶಕ್ಕೆ ಪಡೆದು, ಹೊಸಪೇಟೆ ತಾಲೂಕಿನ ಬಿಳಿಕಲ್‌ ಸಂರಕ್ಷಿತ ಅರಣ್ಯದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಇರಿಸಿದ್ದಾರೆ.
ಅಲೆಮಾರಿ ಕುಟುಂಬದವರು ಜಿಲ್ಲಾಧಿಕಾರಿ, ಅರಣ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದಿಕ್ಕು ತೋಚದೇ ಅವರು ತಾಲೂಕಿನ ಕೊಂಡನಾಯಕನಹಳ್ಳಿ ಸಮೀಪದ ಮುಖ್ಯರಸ್ತೆ ಬಳಿ ಟೆಂಟ್‌ನಲ್ಲಿ ಉಳಿದುಕೊಂಡಿದ್ದಾರೆ.
ನಾವು ಜೀವನೋಪಾಯಕ್ಕಾಗಿ ಒಂಟೆಗಳ ಮೇಲೆ ಜನರನ್ನು ಸುತ್ತಾಡಿಸುತ್ತೇವೆ. ಮಾರಾಟ ಮಾಡಲು ಬಂದಿಲ್ಲ. ತಪ್ಪಾಗಿ ಭಾವಿಸಿ ವಶಕ್ಕೆ ಪಡೆದಿದ್ದಾರೆ. ಜಿಲ್ಲಾಡಳಿತ ಕರೆಸಿರುವ ದಾಖಲೆಗಳನ್ನು ಕೊಟ್ಟರೂ ಬಿಡುಗಡೆ ಮಾಡುತ್ತಿಲ್ಲ. ಜಿಲ್ಲಾಧಿಕಾರಿ ಅವರಿಗೂ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಲೆಮಾರಿ ಕುಟುಂಬದವರು ದೂರಿದ್ದಾರೆ.
ಕಳೆದ ಐದು ದಿನಗಳಿಂದ ಒಂಟೆಗಳನ್ನು ಪೊಲೀಸರು ವಶದಲ್ಲಿ ಇಟ್ಟುಕೊಂಡಿರುವ ಕಾರಣ ನಮ್ಮ ಜೀವನ ಸಾಗಿಸಲು ಕಷ್ಟಕರ ಆಗುತ್ತಿದೆ. ರಸ್ತೆಬದಿ ಟೆಂಟ್‌ನಲ್ಲಿ ಕಾಲ ಕಳೆಯುತ್ತಿದ್ದು, ಮಕ್ಕಳಿಗೆ ಊಟ ಕೊಡಿಸಲು ಆಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ.
ಹಂಪಿ ಉತ್ಸವಕ್ಕೆ ಕರೆಸಿದ್ದ ಒಂಟೆಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಈಗ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಾಗಿದೆ. ಕೂಡಲೇ ಬಿಡುಗಡೆ ಗೊಳಿಸಬೇಕು ಎಂದು ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಗೌರವಾಧ್ಯಕ್ಷ ಕೆ.ಎಂ. ಮೇತ್ರಿ ಆಗ್ರಹಿಸಿದ್ದಾರೆ.
Body:ಬಕ್ರೀದ್ ಹಬ್ಬದ ನಿಮಿತ್ತ ಒಂಟೆ ಮಾಂಸ ಮಾರಾಟ ಶಂಕೆ:
ಮುಸ್ಲಿಂ ಧರ್ಮೀಯರ ಬಕ್ರೀದ್‌ ಹಬ್ಬದ ನಿಮಿತ್ತ ಒಂಟೆಗಳ ಮಾಂಸಕ್ಕೆ ಬೇಡಿಕೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಲೆಮಾರಿಗಳು ಬಂದಿದ್ದಾರೆ ಎಂದು ಕೆಲವರು ಸಂಸದೆ ಮನೇಕಾ ಗಾಂಧಿಗೆ ದೂರು ನೀಡಿದ್ದಾರೆ.
ಅದನ್ನು ಪರಿಶೀಲಿಸುವಂತೆ ಕಮಲಾಪುರ ಪೊಲೀಸರಿಗೆ ಮೇನಕಾ ಗಾಂಧಿ ಅವರು ಸೂಚನೆ ನೀಡಿದ್ದಾರೆ. ಸಂಸದೆ ಗಾಂಧಿಯವರ ಸೂಚನೆ ಮೇರೆಗೆ ಹೊಸಪೇಟೆ ನಗರದಲ್ಲಿ ಬೀಡುಬಿಟ್ಟಿದ್ದ ಅಲೆ ಮಾರಿಗಳ ಜತೆಗಿದ್ದ ಒಂಟೆಗಳನ್ನು ನೋಡಿ, ಪೊಲೀಸರು ಜು. 17ರಂದು ಅವುಗಳನ್ನು ವಶಕ್ಕೆ ಪಡೆದಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_FOREST_DEPT_CAMEL_DETAINED_7203310

KN_BLY_2a_FOREST_DEPT_CAMEL_DETAINED_7203310

KN_BLY_2b_FOREST_DEPT_CAMEL_DETAINED_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.