ETV Bharat / state

ಜಿಎಸ್​ಟಿ ಹೆಚ್ಚಳದಿಂದ ಜನರು ಚಿಟ್ ಫಂಡ್​ಗಳಿಗೆ ಹಣ ಕಟ್ಟಲು ಹಿಂಜರಿಯುವಂತಾಗಿದೆ: ಬಸವಲಿಂಗಪ್ಪ - ಜಿಎಸ್​ಟಿ ಹೆಚ್ಚಳದ ಬಗ್ಗೆ ಚಿಟ್ ಸ್ಟರ್ ಅಸೋಸಿಯೇಷನ್​ ಅಧ್ಯಕ್ಷ ಎಸ್ ಬಸವಲಿಂಗಪ್ಪ ಪ್ರತಿಕ್ರಿಯೆ

ಸರ್ಕಾರ ಶೇ. 12 ಇದ್ದ ಜಿಎಸ್​​​ಟಿ ಅನ್ನು ಶೇ.18 ಕ್ಕೆ ಹೆಚ್ಚಿಸಿದೆ ಎಂದು ರಾಜ್ಯ ಚಿಟ್ ಸ್ಟರ್ ಅಸೋಸಿಯೇಷನ್​ ಅಧ್ಯಕ್ಷ ಎಸ್. ಬಸವಲಿಂಗಪ್ಪ ತಿಳಿಸಿದರು.

ರಾಜ್ಯ ಚಿಟ್ ಸ್ಟರ್ ಅಸೋಸಿಯೇಷನ್​ ಅಧ್ಯಕ್ಷ ಎಸ್. ಬಸವಲಿಂಗಪ್ಪ

author img

By

Published : Jul 18, 2022, 9:16 PM IST

ಬೆಂಗಳೂರು: ಜಿ.ಎಸ್.ಟಿ ಹೆಚ್ಚಳದಿಂದ ಅನೇಕ ತೊಂದರೆಗಳಾಗುತ್ತಿದ್ದು, ಗ್ರಾಹಕರು ಕೂಡ ಇದರಿಂದ ಬೇಸತ್ತು ಚಿಟ್ ಫಂಡ್​ಗಳಿಗೆ ಹಣ ಕಟ್ಟಲು ಹಿಂಜರಿಯುತ್ತಿದ್ದಾರೆ ಎಂದು ರಾಜ್ಯ ಚಿಟ್ ಸ್ಟರ್ ಅಸೋಸಿಯೇಷನ್​ ಅಧ್ಯಕ್ಷ ಎಸ್. ಬಸವಲಿಂಗಪ್ಪ ಹೇಳಿದರು.

ಸೋಮವಾರ ಪ್ರೆಸ್​ಕ್ಲಬ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಶೇ. 12 ಇದ್ದ ಜಿಎಸ್​​ಟಿಯನ್ನು ಶೇ.18 ಕ್ಕೆ ಹೆಚ್ಚಿಸಿದೆ. ಇದರಿಂದ ನಮ್ಮ ರಾಜ್ಯದಲ್ಲಿಯೇ 10 ಸಾವಿರಕ್ಕೂ ಹೆಚ್ಚು ಮಂದಿ ಈ ಕೆಲಸವನ್ನು ನಂಬಿಕೊಂಡಿದ್ದಾರೆ. ರಾಜ್ಯದಲ್ಲಿ 1500 ನೋಂದಣಿಯಾದ ಕಂಪನಿಗಳಿವೆ. ವರ್ಷಕ್ಕೆ 8.5 ಕೋಟಿ ರೂ. ವ್ಯವಹಾರ ಆಗುತ್ತಿದ್ದು, ಜಿಎಸ್​ಟಿ ಹೆಚ್ಚಳದಿಂದ ತೊಂದರೆ ಆಗುತ್ತದೆ. ಈ ಕ್ರಮವನ್ನು ವಿರೋಧಿಸಿ ಜುಲೈ 25 ರಂದು ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಸಂಬಂಧಪಟ್ಟ ಅಧಿಕಾರಿಗಳು ಚಿಟ್ ಫಂಡ್ ಮೇಲಿನ ಜಿಎಸ್​ಟಿಯನ್ನು ಸಂಪೂರ್ಣವಾಗಿ ತೆಗೆಯಬೇಕು ಅಥವಾ ಕನಿಷ್ಠ ಶೇ. 5ಕ್ಕೆ ಇಳಿಸಬೇಕು ಎಂದು ಮನವಿ ಮಾಡಲಿದ್ದೇವೆ. ಅದರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ನಮ್ಮ ತೊಂದರೆಗಳ ಕುರಿತು ವಿವರಿಸಲಿದ್ದೇವೆ ಎಂದು ತಿಳಿಸಿದರು.

ಓದಿ: ಸಿಎಂ ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ಪರಿಷತ್ ಸ್ಥಾನಕ್ಕೆ ಉಪಚುನಾವಣೆ ದಿನಾಂಕ ಪ್ರಕಟ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.