ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸತ್ಗೆ ಆಗಮಿಸಿ ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು. ಹೈಕಮಾಂಡ್ ಬುಲಾವ್ ಮೇರೆಗೆ ದಿಲ್ಲಿಯಲ್ಲಿರುವ ಸಿಎಂ ರಾಜ್ಯಕ್ಕೆ ಬರಬೇಕಿರುವ ಅನುದಾನ ಬಗ್ಗೆ ಚರ್ಚಿಸಲು ಮೋದಿ ಅವರ ಭೇಟಿಗೆ ಅವಕಾಶ ಕೋರಿದ್ದರು. ಹೀಗಾಗಿ ಇಂದು ಬೆಳಗ್ಗೆ ಮೋದಿ ಅವರ ಭೇಟಿಗೆ ಸಮಯ ಸಿಕ್ಕಿದ್ದು, ಸಂಸತ್ತಿನಲ್ಲಿನ ಪ್ರಧಾನಿ ಕಚೇರಿಯಲ್ಲಿ ಮೋದಿ ಅವರನ್ನು ಭೇಟಿಯಾಗಿ ಸಮಾಲೋಚಿಸಿದರು. ಸಭೆ ಬಳಿಕ ಟ್ವೀಟ್ ಮಾಡಿರುವ ಸಿಎಂ ಕಚೇರಿ, ಈ ಸಭೆಯು ಸೌಹಾರ್ದಯುತವಾಗಿತ್ತು ಎಂದು ತಿಳಿಸಿದೆ.
-
ಮುಖ್ಯಮಂತ್ರಿ @siddaramaiah ಅವರು ಸಂಸತ್ ಭವನದಲ್ಲಿ ಇಂದು ಪ್ರಧಾನಿ @narendramodi ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. pic.twitter.com/ZSiQsDUFkH
— CM of Karnataka (@CMofKarnataka) August 3, 2023 " class="align-text-top noRightClick twitterSection" data="
">ಮುಖ್ಯಮಂತ್ರಿ @siddaramaiah ಅವರು ಸಂಸತ್ ಭವನದಲ್ಲಿ ಇಂದು ಪ್ರಧಾನಿ @narendramodi ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. pic.twitter.com/ZSiQsDUFkH
— CM of Karnataka (@CMofKarnataka) August 3, 2023ಮುಖ್ಯಮಂತ್ರಿ @siddaramaiah ಅವರು ಸಂಸತ್ ಭವನದಲ್ಲಿ ಇಂದು ಪ್ರಧಾನಿ @narendramodi ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. pic.twitter.com/ZSiQsDUFkH
— CM of Karnataka (@CMofKarnataka) August 3, 2023
ಸಿದ್ದರಾಮಯ್ಯ ಅವರು ಪ್ರಧಾನಿಗೆ ಶ್ರೀಗಂಧದ ಮರದಿಂದ ಮಾಡಿದ ಮಾಲೆ ಮತ್ತು ಕಲಾಕೃತಿಯ ಜೊತೆಗೆ ಸಾಂಪ್ರದಾಯಿಕ ಮೈಸೂರು ಪೇಟಾ (ಶಿರಸ್ತ್ರಾಣ) ವನ್ನು ನೀಡಿ ಗೌರಿವಿಸಿದರು. ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಸರ್ಕಾರವು ಜಾರಿಗೊಳಿಸಿದ ಉಚಿತ ಖಾತರಿ ಯೋಜನೆಗಳ ಕುರಿತು ಮೋದಿಯವರು ಇತ್ತೀಚೆಗಷ್ಟೇ ಟೀಕಿಸಿದ್ದರು. ಈ ಟೀಕೆ ಬಗ್ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ ಒಂದು ದಿನದ ಬಳಿಕ ಭೇಟಿ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿತ್ತು.
ಅನುದಾನ ಬಿಡುಗಡೆಗೆ ಮನವಿ: ವಿವಿಧ ಯೋಜನೆಗಳಡಿ ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಾಗಿರುವ ಬಾಕಿ ಅನುದಾನವನ್ನು ಬಿಡುಗಡೆ ಮಾಡಲು ಪ್ರಧಾನಿ ಬಳಿ ಸಿಎಂ ಸಿದ್ದರಾಮಯ್ಯ ಚರ್ಚಿಸಿದರು ಎಂದು ತಿಳಿದು ಬಂದಿದೆ. ಎರಡನೇ ಅವಧಿಗೆ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಭೇಟಿಯಾಗಿರುವುದು ವಿಶೇಷ.
ಮೂಲಗಳ ಪ್ರಕಾರ, ಕರ್ನಾಟಕ ಸರ್ಕಾರವು ಬಿಪಿಎಲ್ ಕುಟುಂಬದ ಎಲ್ಲ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವ ಅಭಾಗ್ಯಕ್ಕಾಗಿ ಕೇಂದ್ರೀಯ ಸಂಸ್ಥೆಗಳಿಂದ ಅಕ್ಕಿ ಪೂರೈಸುವಂತೆ ಮೋದಿ ಅವರಿಗೆ ಮನವಿ ಮಾಡಿರುವ ಸಾಧ್ಯತೆ ಇದೆ. ಇದಲ್ಲದೇ, ನೀರಾವರಿ ಯೋಜನೆಗಳು, ಜಲ ಜೀವನ್ ಮಿಷನ್, ಎಂಜಿಎನ್‌ಆರ್‌ಇಜಿಎ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಹಣ ನೀಡುವಂತೆ ಮನವಿ ಮಾಡಿಕೊಂಡರು ಎನ್ನಲಾಗಿದೆ.
-
Delhi | Karnataka CM Siddaramaiah calls on Defence Minister Rajnath Singh in Parliament House pic.twitter.com/I2rVhDjaod
— ANI (@ANI) August 3, 2023 " class="align-text-top noRightClick twitterSection" data="
">Delhi | Karnataka CM Siddaramaiah calls on Defence Minister Rajnath Singh in Parliament House pic.twitter.com/I2rVhDjaod
— ANI (@ANI) August 3, 2023Delhi | Karnataka CM Siddaramaiah calls on Defence Minister Rajnath Singh in Parliament House pic.twitter.com/I2rVhDjaod
— ANI (@ANI) August 3, 2023
ಪಿಎಂ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು. ರಕ್ಷಣಾ ಇಲಾಖೆಗೆ ಸಂಬಂಧಿಸಿದ ರಾಜ್ಯದ ಯೋಜನೆಗಳು ಹಾಗೂ ಇತರ ವಿಷಯಗಳ ಬಗ್ಗೆ ಭೇಟಿ ವೇಳೆ ಚರ್ಚಿಸಿದರು.
ಹಲವು ಕೇಂದ್ರ ಸಚಿವರನ್ನು ಭೇಟಿ ಮಾಡಲಿರುವ ಸಿದ್ದರಾಮಯ್ಯ: ಇದರ ಜೊತೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನೂ ಇದೇ ವೇಳೆ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಜಿಎಸ್ಟಿ ಅನುದಾನದ ಬಿಡುಗಡೆಗೆ ನಿರ್ಮಲಾ ಸೀತಾರಾಮನ್ ಅವರ ಜೊತೆ, ರಾಜ್ಯದಲ್ಲಿನ ಹೆದ್ದಾರಿಗಳ ಅಭಿವೃದ್ಧಿ, ಹೊಸ ರಸ್ತೆಗಳ ಬಗ್ಗೆ ಗಡ್ಕರಿ ಅವರ ಬಳಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
-
#WATCH | Karnataka CM & Congress leader Siddaramaiah in Parliament, "All are well in Karnataka...There are no differences between me and DK Shivakumar, we are together". pic.twitter.com/qDq0PlXjw3
— ANI (@ANI) August 3, 2023 " class="align-text-top noRightClick twitterSection" data="
">#WATCH | Karnataka CM & Congress leader Siddaramaiah in Parliament, "All are well in Karnataka...There are no differences between me and DK Shivakumar, we are together". pic.twitter.com/qDq0PlXjw3
— ANI (@ANI) August 3, 2023#WATCH | Karnataka CM & Congress leader Siddaramaiah in Parliament, "All are well in Karnataka...There are no differences between me and DK Shivakumar, we are together". pic.twitter.com/qDq0PlXjw3
— ANI (@ANI) August 3, 2023
ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದ ಸಿದ್ದರಾಮಯ್ಯ: ಪ್ರಧಾನಿ ಭೇಟಿಗೆ ತೆರಳುತ್ತಿದ್ದ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಕರ್ನಾಟಕದಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ನನ್ನ ಮತ್ತು ಡಿಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ನಾವು ಒಟ್ಟಿಗೆ ಇದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ. ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವಣ ಸರಿಯಿಲ್ಲ ಎಂಬ ಊಹಾಪೋಹಗಳನ್ನು ಸಿಎಂ ಸಿದ್ದರಾಮಯ್ಯ ತಳ್ಳಿ ಹಾಕಿದರು.
ಇದನ್ನೂ ಓದಿ: ಕೇಂದ್ರದ ಯೋಜನೆ ಬಿಜೆಪಿಯೇತರ ರಾಜ್ಯಗಳಿಗೂ ತಲುಪಿಸಬೇಕು : ಪ್ರಧಾನಿ ಮೋದಿ