ETV Bharat / state

ಸಾರ್ವಜನಿಕ ವಾಹನಗಳಿಗೆ ಟ್ರ್ಯಾಕಿಂಗ್ ಉಪಕರಣ ಕಡ್ಡಾಯ: 21.22 ಕೋಟಿ ವೆಚ್ಚದ ಯೋಜನೆಗೆ ಸಂಪುಟ ಒಪ್ಪಿಗೆ - ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಉಪಕರಣ

ರಾಜ್ಯದ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಸಾರಿಗೆ ವರ್ಗದ ಭಾರಿ ಪ್ರಯಾಣಿಕ ವಾಹನಗಳು ಅತಿ ವೇಗದಿಂದ ಸಂಚರಿಸಿ ಸಂಭವಿಸುವ ಅಪಘಾತಗಳನ್ನು ನಿಯಂತ್ರಿಸಲು ವಿಎಲ್‌ಟಿಎಸ್ ಆಧಾರಿತ ಜಿಪಿಆರ್‌ಎಸ್ ವ್ಯವಸ್ಥೆಯ ಉಪಕರಣವನ್ನು ವಾಹನಗಳಲ್ಲಿ ಅಳವಡಿಸಲಾಗುವುದು‌ ಎಂದು ಸಚಿವ ಜೆಸಿ ಮಾಧುಸ್ವಾಮಿ ತಿಳಿಸಿದರು.

karnataka-cabinet-approves-vehicle-location-tracking-equipment-project
ಸಾರ್ವಜನಿಕ ವಾಹನಗಳಿಗೆ ಟ್ರ್ಯಾಕಿಂಗ್ ಉಪಕರಣ ಕಡ್ಡಾಯ: 21.22 ಕೋಟಿ ವೆಚ್ಚದ ಯೋಜನೆಗೆ ಸಂಪುಟ ಒಪ್ಪಿಗೆ
author img

By

Published : Nov 3, 2022, 8:30 PM IST

ಬೆಂಗಳೂರು: ಸಾರ್ವಜನಿಕ ವಾಹನಗಳಿಗೆ ಮತ್ತು ಟ್ಯಾಕ್ಸಿಗಳಲ್ಲಿ ಪ್ರಯಾಣಿಕರ ಸುರಕ್ಷತೆ, ಮುಖ್ಯವಾಗಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಕಡ್ಡಾಯವಾಗಿ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಉಪಕರಣ ಹಾಗೂ ತುರ್ತು ಆಪತ್ಕಾಲಿನ ಬಟನ್ ಅಳವಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 21.22 ಕೋಟಿ ರೂ.ವೆಚ್ಚದಲ್ಲಿ ಯೋಜನೆ ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ, ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ 60:40ರ ಅನುಪಾತದಲ್ಲಿ ಅನುದಾನ ಒದಗಿಸಲಿದೆ. ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಅಂದಾಜು 20.35 ಕೋಟಿ ರೂ.ಯೋಜನಾ ವೆಚ್ಚ ನಿಗದಿಪಡಿಸಿದೆ ಎಂದರು.

ರಾಜ್ಯದ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಸಾರಿಗೆ ವರ್ಗದ ಭಾರಿ ಪ್ರಯಾಣಿಕ ವಾಹನಗಳು ಅತಿ ವೇಗದಿಂದ ಸಂಚರಿಸಿ ರಸ್ತೆ, ಅಪಘಾತಗಳಿಗೆ ಕಾರಣವಾಗುತ್ತವೆ. ಇದನ್ನು ನಿಯಂತ್ರಿಸಲು ವಿಎಲ್‌ಟಿಎಸ್ ಆಧಾರಿತ ಜಿಪಿಆರ್‌ಎಸ್ ವ್ಯವಸ್ಥೆಯ ಉಪಕರಣವನ್ನು ವಾಹನಗಳಲ್ಲಿ ಅಳವಡಿಸಲಾಗುವುದು‌. ಇದರಿಂದ ವಾಹನಗಳು ಸಂಚರಿಸುವ ವೇಗ, ನಿಗದಿಪಡಿಸಿದ ಸ್ಥಳಗಳಲ್ಲಿ ನಿಲುಗಡೆ ಮಾಡಲಾಗುತ್ತಿದೆಯೇ ಎಂಬುವುದನ್ನು ಪತ್ತೆ ಹಚ್ಚಬಹುದಾಗಿದೆ ಎಂದು ವಿವರಿಸಿದರು.

ವಾಹನಗಳು ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳ ತಲುಪಿ ಅನವಶ್ಯಕ ವಿಳಂಬ ತಡೆಯಬಹುದು. ಅನಧಿಕೃತವಾಗಿ ಸಂಚರಿಸುವ ವಾಹನಗಳ ಮೇಲೆ ನಿಗಾ ವಹಿಸಲು ಅನುಕೂಲವಾಗುತ್ತದೆ. ವಾಹನ ಚಾಲಕರು ನಿಯಮಬಾಹಿರವಾಗಿ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ತೊಂದರೆಯಾಗುವಂತೆ ಬೇರೆ ಮಾರ್ಗಗಳಲ್ಲಿ ಸಂಚರಿಸುವುದನ್ನು ತಪ್ಪಿಸಬಹುದಾಗಿದೆ ಎಂದ ತಿಳಿಸಿದರು.

ಖಾಸಗಿ ವಲಯದ ಸಾರ್ವಜನಿಕ ಸಾರಿಗೆ ವಾಹನಗಳಾದ ಮಜಲು ವಾಹನಗಳು ಮತ್ತು ಪ್ರವಾಸಿ ವಾಹನಗಳಲ್ಲಿ ಕಡ್ಡಾಯವಾಗಿ ವಿಎಲ್‌ಟಿಎಸ್ ಅಳವಡಿಸುವುದರಿಂದ ವಾಹನಗಳು ವೇಳಾಪಟ್ಟಿಯ ಅನುಸಾರ ಸಂಚಾರ ನಡೆಸುತ್ತಿರುವ ಚಲನವಲನಗಳನ್ನು ಗುರುತಿಸಿ ಅನಾರೋಗ್ಯಕರ ಪೈಪೋಟಿಯನ್ನು ತಪ್ಪಿಸಬಹುದಾಗಿದೆ ಎಂದರು.

ವಾಹನಗಳ ವಿವರ: ರಾಜ್ಯದಲ್ಲಿ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌ಗಳು, ಮೋಟಾರ್ ಕ್ಯಾಬ್​ಗಳು ಸೇರಿ ಒಟ್ಟು 4,51,520 ವಾಹನಗಳಿವೆ. ಅಲ್ಲದೇ, ಶಾಲಾ ವಾಹನಗಳು - 16,432, ಖಾಸಗಿ ಮಜಲು ವಾಹನಗಳು - 23,077, ಕೆಎಸ್​ಆರ್​ಟಿಸಿಮಜಲು ವಾಹನಗಳು - 34,701, ಒಪ್ಪಂದ ವಾಹನಗಳು -5,138, ಅಖಿಲ ಭಾರತ ಪ್ರವಾಸಿ ವಾಹನಗಳು - 1,900 ಸೇರಿ ಒಟ್ಟಾರೆ 71,248 ಪ್ರಯಾಣಿಕರ ವಾಹನಗಳಿವೆ. ರಾಷ್ಟ್ರೀಯ ರಹದಾರಿ ಹೊಂದಿದ ಒಟ್ಟು ಸರಕು ಸಾಗಾಣಿಕೆ ವಾಹಗಳು 85,949 ಇವೆ.

ಜಿಎಸ್​ಟಿ ಒಳಗೊಂಡಂತೆ ಬಂಡವಾಳ ವೆಚ್ಚ 9.23 ಕೋಟಿ ಮತ್ತು ಎರಡು ವರ್ಷಗಳ ನಿರ್ವಹಣಾ ವೆಚ್ಚ ಒಳಗೊಂಡಂತೆ 6.21 ಕೋಟಿ ಮತ್ತು ಕ್ಲೌಡ್ ಸರ್ವೀಸ್ ಶುಲ್ಕ 4.97 ಕೋಟಿ, ಒಟ್ಟು ಯೋಜನಾ ವೆಚ್ಚ 20.41 ಕೋಟಿರೂ.ಗಳಾಗುತ್ತದೆ. ಡಿಪಿಆರ್ ಸಿದ್ಧಪಡಿಸಲು ಭರಿಸಲಾದ 81 ಲಕ್ಷ ರೂ. ಒಳಗೊಂಡಂತೆ ಈ ಯೋಜನೆಯ ಒಟ್ಟು ವೆಚ್ಚ 21.22 ಕೋಟಿ ರೂ.ಗಳಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: 21 ಸಬ್ ರಿಜಿಸ್ಟ್ರಾರ್ ಕಚೇರಿಗಳ‌ ಮೇಲೆ ಲೋಕಾಯುಕ್ತ ಪೊಲೀಸರಿಂದ ದಾಳಿ.. 8 ಮಂದಿ ಮಧ್ಯವರ್ತಿಗಳು ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.