ETV Bharat / state

ಬೈ ಎಲೆಕ್ಷನ್​ನಲ್ಲಿ ಪಾಸ್ ಆದ BSY​ಗೆ ಮತ್ತೊಂದು ಸುತ್ತಿನ 'ಅಗ್ನಿ' ಪರೀಕ್ಷೆ..! - ಜೆಡಿಎಸ್​

ಎಲ್ಲ ಅನರ್ಹ ಶಾಸಕರು ಗೆದ್ದರೆ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಈ ಹಿಂದೆಯೇ ಹೇಳಿದ್ದರು.13 ಜನ ಅನರ್ಹ ಶಾಸಕರ ಪೈಕಿ 11 ಜನರು ಗೆದಿದ್ದಾರೆ. ಶಾಸಕರಿಂದ ರಾಜೀನಾಮೆ ಕೊಡಿಸುವಾಗ ಮಹತ್ವದ ಖಾತೆಗಳನ್ನು ನೀಡಿದ್ದ ಆಶ್ವಾಸನೆ ಈಡೇರಿಸಬೇಕಿದೆ. ಇದಕ್ಕಾಗಿ ಹಾಲಿ ಸಚಿವರ ಪ್ರಮುಖ ಖಾತೆಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಸಚಿವ ಸ್ಥಾನ ಸಿಗದೇ ಅತೃಪ್ತರಾಗಿರುವ ಪಕ್ಷದ ಹಿರಿಯರನ್ನು ಸಮಾಧಾನಿಸುವ ಸಂಕಷ್ಟದ ತಲೆ ನೋವು ಬಿಎಸ್​ವೈಗೆ ಶುರುವಾಗಲಿದೆ.

BSY
ಸಿಎಂ ಬಿಎಸ್​ವೈ
author img

By

Published : Dec 9, 2019, 3:14 PM IST

ಬೆಂಗಳೂರು: ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನೇತೃತ್ವದ ನಾಲ್ಕು ತಿಂಗಳ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸುವ 15 ಕ್ಷೇತ್ರಗಳ ಉಪಚುನಾವಣೆಯ ಮತದಾರರ ತೀರ್ಪು ಪ್ರಕಟವಾಗಿದೆ. ಆಡಳಿತಾರೂಢ ಬಿಜೆಪಿ ಸರ್ಕಾರ ಸುರಕ್ಷಿತವಾಗಿದ್ದು, ಚುನಾವಣಾ ಕಣದಲ್ಲಿದ್ದ 13 ಅನರ್ಹ ಶಾಸಕರ ಪೈಕಿ ಓರ್ವ ಸೋಲಿನ ಕಹಿ ಅನುಭವಿಸಿದ್ದಾರೆ.

'ಫಲಿತಾಂಶದ ದಿನ ಸಿಹಿಸುದ್ದಿ ಕೊಡುತ್ತೇವೆ. ಮತ್ತೆ ಕಾಂಗ್ರೆಸ್ ಸರ್ಕಾರ ಬರಲಿದೆ' ಎಂಬ ಭರವಸೆಯ ಮಾತನಾಡಿದ್ದ ಕಾಂಗ್ರೆಸ್ ನಾಯಕರು ಈಗ ಮೌನಕ್ಕೆ ಶರಣಾಗಿದ್ದಾರೆ. ಚುನಾವಣಾ ಫಲಿತಾಂಶ ವಿರೋಧ ಪಕ್ಷಗಳ ಎಲ್ಲ ಲೆಕ್ಕಾಚಾರ ಹಾಗೂ ತರ್ಕಗಳನ್ನು ತಲೆ ಕೆಳಗೆ ಮಾಡಿದೆ.

karnataka assembly strength
ಕರ್ನಾಟಕ ವಿಧಾನಸಭಾ ಸದಸ್ಯರ ಬಲ

ಎಲ್ಲ ಅನರ್ಹ ಶಾಸಕರು ಗೆದ್ದರೆ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಈ ಹಿಂದೆಯೇ ಹೇಳಿದ್ದರು. 13 ಜನ ಅನರ್ಹ ಶಾಸಕರ ಪೈಕಿ 11 ಜನರು ಗೆದಿದ್ದಾರೆ. ಶಾಸಕರಿಂದ ರಾಜೀನಾಮೆ ಕೊಡಿಸುವಾಗ ಮಹತ್ವದ ಖಾತೆಗಳನ್ನು ನೀಡಿದ್ದ ಆಶ್ವಾಸನೆ ಈಡೇರಿಸಬೇಕಿದೆ. ಇದಕ್ಕಾಗಿ ಹಾಲಿ ಸಚಿವರ ಪ್ರಮುಖ ಖಾತೆಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಸಚಿವ ಸ್ಥಾನ ಸಿಗದೇ ಅತೃಪ್ತರಾಗಿರುವ ಪಕ್ಷದ ಹಿರಿಯರನ್ನು ಸಮಾಧಾನಿಸುವ ಸಂಕಷ್ಟದ ತಲೆ ನೋವು ಬಿಎಸ್​ವೈಗೆ ಶುರುವಾಗಲಿದೆ.

105 ಸದಸ್ಯರ ಬಲದ ಬಿಜೆಪಿಯ ಬಲ 117ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್​​ ತನ್ನ ಬಲವನ್ನ 66ರಿಂದ 68ಕ್ಕೆ ಹೆಚ್ಚಿಸಿಕೊಂಡರೇ ಜೆಡಿಎಸ್​ ಈ ಹಿಂದಿನಂತೆ 34 ಸ್ಥಾನಗಳನ್ನು ಹೊಂದಿದೆ. ಪಕ್ಷೇತರರು ಮೂವರು ಇದ್ದರೇ ಪ್ರಸ್ತುತ ವಿಧಾನಸಭಾ ಸದಸ್ಯರ ಬಲ 222ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ರಾಯಚೂರಿನ ಮಸ್ಕಿ ಕ್ಷೇತ್ರಗಳ ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಈ ಕ್ಷೇತ್ರಗಳಿಗೆ ಚುನಾವಣೆ ನಡೆದಿಲ್ಲ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.