ಬೆಂಗಳೂರು: ನುಡಿದಂತೆ ನಡೆಯುತ್ತಿದ್ದೇವೆ ಎಂಬ ಭರವಸೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 14ನೇ ಬಜೆಟ್ ಮಂಡಿಸಿದ್ದಾರೆ. ಮುಂದಿನ ಎಂಟು ತಿಂಗಳ ಅವಧಿಗೆ 2023-24ರ ಆಯವ್ಯಯ ಮಂಡಿಸಿದ ಅವರು, ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವುದು ನಮ್ಮ ಗುರಿ ಎಂದರು.
ಬ್ರ್ಯಾಂಡ್ ಬೆಂಗಳೂರು ಕಲ್ಪನೆಗೆ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಲಾಗಿದೆ. ನಗರದ ಪ್ರಮುಖ ಒಂಭತ್ತು ಸಮಸ್ಯೆಗಳ ನಿವಾರಣೆಗೆ ಮುತುವರ್ಜಿ ವಹಿಸಲಾಗಿದೆ. ಪ್ರಮುಖವಾಗಿ ಘನತ್ಯಾಜ್ಯ ನಿರ್ವಹಣೆ, ಸಂಚಾರ ವ್ಯವಸ್ಥೆ, ನೀರಿನ ಭದ್ರತೆ, ಪ್ರವಾಹ ನಿರ್ವಹಣೆಗೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಗರದ ನಿವಾಸಿಗಳಿಗೆ ಸುರಕ್ಷತೆ ಮತ್ತು ಅನುಕೂಲಕತೆ ಕಲ್ಪಿಸುವುದಕ್ಕೆ ಸರ್ಕಾರ ವಿಶೇಷ ಗಮನ ನೀಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 20 ತ್ಯಾಜ್ಯ ನೀರು ಸಂಸ್ಕರತಾಣಾ ಘಟನೆ ಮೇಲ್ದರ್ಜೆಗೇರಿಸುವುದು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸ್ವಂತ ಸಂಪನ್ಮೂಲದಿಂದ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಈ ಯೋಜನೆಯನ್ನು 2026ಕ್ಕೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ವೈಟ್ ಟ್ಯಾಪಿಂಗ್: 2016ರಿಂದ 2018ರವರೆಗೆ ನಡೆದ ವೈಟ್ಟಾಪಿಂಗ್ ಅನ್ನು ಹಿಂದಿನ ಸರ್ಕಾರ ಕೈಗೊಂಡಿಲ್ಲ. ಈ ಯೋಜನೆಯನ್ನು 2023- 24ರ ಆಯವ್ಯಯದಲ್ಲಿ ಮತ್ತೆ ಪುನಾರಾಂಭಿಸಲಾಗುವುದು. 100 ಕಿ.ಮೀ ಉದ್ದದ ವೈಟ್ ಟಾಪಿಂಗ್ ರಸ್ತೆಗೆ 800 ಕೋಟಿ ರೂ ಮೀಸಲಿಡಲಾಗಿದೆ. ಹೆಚ್ಚಿನ ಸಂಚಾರ ದಟ್ಟಣೆಯ 192 ಕಿ.ಮೀ ಉದ್ದದ ಮತ್ತು 12 ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ಧಿಗೆ 273 ಕೋಟಿ ರೂ ಮೀಸಲಿರಿಸಲಾಗಿದೆ.
ಬೆಂಗಳೂರು ನಗರದಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ನೆನೆಗುದಿಗೆ ಬಿದ್ದಿರುವ ಬೆಂಗಳೂರು ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಸರ್ವೋಚ್ಛ ನ್ಯಾಯಾಲಯ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಮತ್ತೆ ಜಾರಿಗೆಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜಕಾಲುವೆ ಸಮಸ್ಯೆ ನಿವಾರಣೆ: ಬೆಂಗಳೂರಿನಲ್ಲಿ ಮಳೆ ಬಂದಾದ ಉಂಟಾಗುವ ಪ್ರವಾಹ ಮತ್ತು ಹಾನಿ ತಡೆಯಲು ಕಂದಾಯ ಇಲಾಖೆ ಗುರುತಿಸಿರುವ ಒತ್ತುವರಿ ತೆರುವು. ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಕ್ರಮ ಇದಕ್ಕಾಗಿ 256 ಎಕರೆ ಭೂಮಿಯನ್ನು ಉದ್ಯಾನವನಗಳಾಗಿ ಪರಿವರ್ತಿಸಲಾಗುವುದು.
ಮೆಟ್ರೋ : 2024ರ ವೇಳೆಗೆ ಬೈಯಪ್ಪನಹಳ್ಳಿಯಿಂದ ಕೆಆರ್ಪುರಂನಿಂದ ಚಲ್ಲಘಟ್ಟದವರೆಗೆ, ನಾಗಸಂದ್ರದಿಂದ ಮಾದಾವರದವರೆಗೆ, ಆರ್ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 27 ಕಿ.ಮೀ ಉದ್ದದ ನೂತನ ಮಾರ್ಗ ಪ್ರಾರಂಭವಾಗಲಿದೆ. 2026ರ ವೇಳೇ ಏರ್ಪೋರ್ಟ್ ಲೈನ್ ಕಾಮಕಾರಿ ಪೂರ್ಣಗೊಳಿಸುವ ಗುರಿ. ಮೆಟ್ರೋ ಮೂರನೇ ಹಂತದ ಯೋಜನೆಗೆ 16.328 ಕೋಟಿರೂ ವೆಚ್ಚದಲ್ಲಿ ಕೆಂಪಾಪುರದಿಂದ ಜೆಪಿ ನಗರದಿಂದ 4ನೇ ಹಂತದವರೆಗೆ ಸಂಚಾರಕ್ಕೆ ಅನುಮೋದನೆ ಸಲ್ಲಿಸಲಾಗುತ್ತದೆ.
ಇಂದಿರಾ ಕ್ಯಾಂಟೀನ್ಗೆ ಚಾಲನೆ: ಎಲ್ಲ ಬಿಬಿಎಂಪಿ ಮತ್ತು ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಇಂದಿರಾ ಕ್ಯಾಂಟಿನ್ ಯೋಜನೆ ಆರಂಭ. ಎರಡನೇ ಹಂತದಲ್ಲಿ ಬಿಬಿಎಂಪಿಯ ಹೊಸ ವರ್ಡ್ನಲ್ಲಿ ಈ ಯೋಜನೆ ವಿಸ್ತರಣೆ. ಪ್ರಸಕ್ತ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್ ದುರಸ್ತಿ, ನವೀಕರಣ, ನಿರ್ವಹಣೆಗೆ 100 ಕೋಟಿ ರೂ ಒದಗಿಸಲಾಗುತ್ತದೆ. ಬೆಂಗಳೂರು ಘನತ್ಯಾಜ ನಿರ್ವಹಣಾ ಸಂಸ್ಥೆಯ ಪರಿಣಾಮಕಾರಿ ಕಾರ್ಯಾಚರಣೆಗೆ 100 ಕೋಟಿ ರೂ ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ: Karnataka Budget: ಸಿಎಂ ಸಿದ್ದರಾಮಯ್ಯರಿಂದ 14ನೇ ಬಜೆಟ್ ಮಂಡನೆ- LIVE