ETV Bharat / state

ಬೊಮ್ಮಾಯಿ ಬಜೆಟ್‌: ಖಾಸಗಿ ವೈದ್ಯಕೀಯ ಕಾಲೇಜು ದುಬಾರಿ ಶುಲ್ಕಕ್ಕೆ ಅಂಕುಶ? - Budget on Sarvodaya and welfare sector

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್​ನಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳ ಶುಲ್ಕ ನಿಯಂತ್ರಣ ಪ್ರಸ್ತಾಪ ಮಾಡಿದ್ದಾರೆ. ಉಕ್ರೇನ್ ಘಟನೆ ನಂತರ ವೈದ್ಯಕೀಯ ಶಿಕ್ಷಣ ಸುಧಾರಣೆಗೆ ಮುಂದಾಗಿರುವ ಸಿಎಂ ಅಲ್ಪ ಸಮಯದಲ್ಲೇ ಈ ಕುರಿತು ಬಜೆಟ್​ನಲ್ಲೇ ಪ್ರಸ್ತಾಪ ಮಾಡಿದ್ದಾರೆ‌. ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಎ.ಬಿ.ಸಿ.ಡಿ ಎಂದು ವರ್ಗೀಕರಿಸಿ ಶುಲ್ಕ ನಿಯಂತ್ರಣ ಸಮಿತಿ ಮೂಲಕ ಶುಲ್ಕ ನಿಗದಿಪಡಿಸಲಾಗುತ್ತದೆ ಎನ್ನುವ ಘೋಷಣೆ ಮಾಡಿದ್ದಾರೆ‌.

cm Basavaraja Bommai
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Mar 4, 2022, 5:34 PM IST

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪರಿಚಯಿಸಿದ್ದ ವಲಯವಾರು ರೀತಿಯ ಬಜೆಟ್ ಹಂಚಿಕೆಯನ್ನೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಮುಂದುವರೆಸಿದ್ದು, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ 68,479 ಕೋಟಿ ಅನುದಾನ ಪ್ರಕಟಿಸಿದ್ದಾರೆ. ಕಳೆದ ಸಾಲಿಗಿಂತ ಈ ಬಾರಿ 6,329 ಕೋಟಿ ಹೆಚ್ಚು ಅನುದಾನ ನೀಡಿದ್ದಾರೆ.

ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರೆರೆದರೆ ಮೇಲೆ ಪಲ್ಲವಿಸಿತ್ತು ನೋಡಾ! ಎನ್ನುವ ಬಸವಣ್ಣನ ವಚನದ ಸಾಲುಗಳನ್ನು ಪ್ರಸ್ತಾಪಿಸಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ಬಜೆಟ್​ನಲ್ಲಿ ನೀಡಲಾದ ಅನುದಾನದ ವಿವರಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಒಬಿಸಿ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ, ವಸತಿ, ಕಾರ್ಮಿಕ, ಕೌಶಲ್ಯಾಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳನ್ನು ಒಳಗೊಂಡ ಇಲಾಖೆಗಳಿಗೆ ಈ ವಲಯ ಅನ್ವಯಿಸಲಿದೆ.

ಖಾಸಗಿ ವೈದ್ಯಕೀಯ ಕಾಲೇಜುಗಳ ದುಬಾರಿ ಶುಲ್ಕಕ್ಕೆ ಅಂಕುಶ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್​ನಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳ ಶುಲ್ಕ ನಿಯಂತ್ರಣ ಪ್ರಸ್ತಾಪ ಮಾಡಿದ್ದಾರೆ. ಉಕ್ರೇನ್ ಘಟನೆ ನಂತರ ವೈದ್ಯಕೀಯ ಶಿಕ್ಷಣ ಸುಧಾರಣೆಗೆ ಮುಂದಾಗಿರುವ ಸಿಎಂ ಅಲ್ಪ ಸಮಯದಲ್ಲೇ ಈ ಕುರಿತು ಬಜೆಟ್​ನಲ್ಲೇ ಪ್ರಸ್ತಾಪ ಮಾಡಿದ್ದಾರೆ‌. ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಎ.ಬಿ.ಸಿ.ಡಿ ಎಂದು ವರ್ಗೀಕರಿಸಿ ಶುಲ್ಕ ನಿಯಂತ್ರಣ ಸಮಿತಿ ಮೂಲಕ ಶುಲ್ಕ ನಿಗದಿಪಡಿಸಲಾಗುತ್ತದೆ ಎನ್ನುವ ಘೋಷಣೆ ಮಾಡಿದ್ದಾರೆ‌.

ಅನುದಾನದ ವಿವರ:

• 100 ತಾಲೂಕುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎರಡು ವರ್ಷದಲ್ಲಿ 25 ಹಾಸಿಗೆ ಮಾದರಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಸಾವಿರ ಕೋಟಿ ವೆಚ್ಚದಲ್ಲಿ ಉನ್ನತೀಕರಣ.

• ಎಸ್​ಟಿಪಿ /ಟಿಎಸ್​ಪಿ ಯೋಜನೆಯಡಿ ಎಸ್​ಸಿ/ಎಸ್​ಟಿ ವಿದ್ಯಾರ್ಥಿಗಳಿಗೆ 750 ಕೋಟಿ ವೆಚ್ಚದಲ್ಲಿ 100 ಅಂಬೇಡ್ಕರ್ ವಿದ್ಯಾರ್ಥಿನಿಲಯ, 10 ಕ್ರೈಸ್ ವಸತಿ ಶಾಲೆ ಕಟ್ಟಡ ನಿರ್ಮಾಣ.

• 165 ಕೋಟಿ ವೆಚ್ಚದಲ್ಲಿ 50 ಕನಕದಾಸ ವಿದ್ಯಾರ್ಥಿ ನಿಲಯಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ.

• ಅಪೌಷ್ಟಿಕತೆ ನಿವಾರಣೆಗೆ ಹೆಚ್ಚುವರಿಯಾಗಿ 37 ಪೌಷ್ಟಿಕ ಪುನರ್ವಸತಿ ಕೇಂದ್ರ ಸ್ಥಾಪನೆ.

• ಸ್ವಂತ ಕಟ್ಟಡ ಇಲ್ಲದ 1000 ಅಂಗನವಾಡಿಗಳಿಗೆ ನರೇಗಾ ಯೋಜನೆ ಅಡಿ ಕಟ್ಟಡ ನಿರ್ಮಾಣ.

• ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ ಅನುದಾನ.

• ರಾಷ್ಟ್ರೀಯ ಶಿಕ್ಷಣ ನೀತಿಯಾನುಸಾರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ರು ಮತ್ತು ವಯಸ್ಕರ ಶಿಕ್ಷಣಕ್ಕೆ ನೂತನ ಪಠ್ಯಕ್ರಮ ಜಾರಿ ಹಾಗು 20 ಸಾವಿರ ಅಂಗನವಾಡಿಗಳಲ್ಲಿ 30 ಕೋಟಿ ವೆಚ್ಚದ ಪಠ್ಯಕ್ರಮ.

• 2 ವರ್ಷದಲ್ಲಿ ಸಾವಿರ ಗ್ರಾಮ ಪಂಚಾಯತ್​ಗಳನ್ನು ಸಂಪೂರ್ಣ ಸಾಕ್ಷರ ಗ್ರಾಮ ಪಂಚಾಯತ್ ಆಗಿ ಮಾರ್ಪಾಡು.

• 15 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ, ನೇಮಕಾತಿವರೆಗೂ 27 ಸಾವಿರ ಅತಿಥಿ ಉಪನ್ಯಾಸಕರ ನೇಮಕ.

• ಕೆಪಿಎಸ್​ಸಿ, ಯುಪಿಎಸ್ಸಿ, ಎಸ್ಸೆಸ್ಸಿ, ಬ್ಯಾಂಕಿಂಗ್, ರೈಲ್ವೆ, ಸಿಡಿಎಸ್, ನೀಟ್, ಜೆಇಇ ತರಬೇತಿಗೆ ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ ಹೊಸ ಯೋಜನೆ ಜಾರಿ, ಆನ್​ಲೈನ್​ ಮೂಲಕ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ.

• ರಾಜ್ಯದ ಏಳು ಇಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ತಾಂತ್ರಿಕ ಸಂಸ್ಥೆಗಳಾಗಿ ಉನ್ನತೀಕರಿಸಿ ವಿದೇಶಿ ವಿವಿ ಜೊತೆ ಒಪ್ಪಂದ.

• ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ ವಿನೂತನ ಮಾದರಿಯ ಏಳು ವಿಶ್ವವಿದ್ಯಾಲಯಗಳ ಸ್ಥಾಪನೆ.

ಆರೋಗ್ಯ:

• ರಾಜ್ಯದ ಪ್ರಮುಖ ನಗರಗಳಲ್ಲಿ 438 ನಮ್ಮ ಕ್ಲಿನಿಕ್ ಸ್ಥಾಪನೆ. ಬೆಂಗಳೂರಿನ ಎಲ್ಲಾ ವಾರ್ಡ್​ಗೂ ವಿಸ್ತರಣೆ.

• ರಾಜ್ಯದ ಏಳು ತಾಲೂಕು ಆಸ್ಪತ್ರೆಗಳನ್ನು 100 ಹಾಸಿಗೆ ಆಸ್ಪತ್ರೆ ಆಗಿ ಮೇಲ್ದರ್ಜೆಗೇರಿಸುವುದು.

• ರಾಜ್ಯದ 75 ತಾಲೂಕು ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಸಹಯೋಗದಲ್ಲಿ ಹೃದಯ ಸಂಬಂಧಿ ಚಿಕಿತ್ಸೆ.

• 200 ಕ್ಕೂ ಹೆಚ್ಚು ಹಾಸಿಗೆ ಸಾಮರ್ಥ್ಯ ಇರುವ ಸರ್ಕಾರಿ ಆಸ್ಪತ್ರೆಗಳನ್ನು ಬೋಧನಾ ಆಸ್ಪತ್ರೆಗಳಾಗಿ ಪರಿವರ್ತನೆ.

• ದಕ್ಷಿಣ ಕನ್ನಡ, ಚಾಮರಾಜ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ವಿದ್ಯಾರ್ಥಿನಿಯರಿಗೆ ಮೆನ್ ಸ್ಟ್ರುಯಲ್ ಕಪ್ ವಿತರಣೆ.

• ಬೀದರ್, ಚಾಮರಾಜನಗರ, ಹಾವೇರಿ, ಚಿಕ್ಕಮಗಳೂರಿನಲ್ಲಿ ಮುಖ್ಯಮಂತ್ರಿ ಆರೋಗ್ಯ ವಾಹಿತಿ ಹೊಸ ಯೋಜನೆ ಜಾರಿ. 11 ಕೋಟಿ ವೆಚ್ಚದಲ್ಲಿ ಸಂಚಾರಿ ಕ್ಲಿನಿಕ್ ಆರಂಭ.

• ಖಾಸಗಿ ವಲಯದಲ್ಲಿ ಏರ್ ಆಂಬ್ಯುಲೆನ್ಸ್ ಸೇವೆ ಪ್ರಾರಂಭಕ್ಕೆ ಪ್ರೋತ್ಸಾಹ.

• ಶಿವಮೊಗ್ಗ ಆಯುಷ್ ವಿವಿ ಬಲವರ್ಧನೆ, ಹಾವೇರಿ ಜಿಲ್ಲೆ ಸವಣೂರು ತಾಲೂಕಿನಲ್ಲಿ ಹೊಸ ಆಯುರ್ವೇದ ಕಾಲೇಜು ಸ್ಥಾಪನೆ, ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಆಯಷ್ ವಿಭಾಗ ಆರಂಭ.

• ಆಶಾ ಕಾರ್ಯಕರ್ತೆಯರ ಗೌರವ ಧನ ಸಾವಿರ ರೂ. ಗಳಷ್ಟು ಹೆಚ್ಚಳ.

• 600 ಕೋಟಿ ವೆಚ್ಚದಲ್ಲಿ ರಾಮನಗರದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಕ್ಯಾಂಪಸ್ ಅಭಿವೃದ್ಧಿ.

• ಹುಬ್ಬಳ್ಳಿಯಲ್ಲಿ 250 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಪ್ರಾದೇಶಿಕ ಕೇಂದ್ರ ಸ್ಥಾಪನೆ.

• ಬೌರಿಂಗ್ ಆಸ್ಪತ್ರೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಹೊಸದಾಗಿ ಮೂರು ಹಂತದಲ್ಲಿ ಮಾಡ್ಯುಲಾರ್ ವಿಧಾನದಲ್ಲಿ ನಿರ್ಮಾಣ.

• ಬೆಳಗಾವಿಯಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ 50 ಕೋಟ ವೆಚ್ಚದಲ್ಲಿ ನಿರ್ಮಾಣ.

• ನಿಮ್ಹಾನ್ಸ್ ನಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಆರಂಭ.

• ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ.

• ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಬಡ ಮಕ್ಕಳಿಗೆ ನೀಟ್ ತರಬೇತಿ, ವೈದ್ಯಕೀಯ ವ್ಯಾಸಂಗ ಮಾಡಲು ಬ್ಯಾಂಕ್ ಗಳಿಂದ ಸಾಲಸೌಲಭ್ಯ, ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಎ.ಬಿ.ಸಿ.ಡಿ ಎಂದು ವರ್ಗೀಕರಿಸಿ ಶುಲ್ಕ ನಿಯಂತ್ರಣ ಸಮಿತಿ ಮೂಲಕ ಶುಲ್ಕ ನಿಗದಿ.

• ಬಾಲ್ಯ ವಿವಾಹ ತಡೆಗೆ ಸ್ಪೂರ್ತಿ ಯೋಜನೆ ರಾಜ್ಯಾದ್ಯಂತ ವಿಸ್ತರಣೆ.

• ಎನ್​ಪಿಎಸ್​ ಲೈಟ್ ಯೋಜನೆಯಿಂದ ವಂಚಿತರಾದ ಅಂಗನವಾಡಿ ಕಾರ್ಯಕರ್ತೆಯರಿಗೆ 50 ಸಾವಿರ, ಸಹಾಯಕಿಯರಿಗೆ 30 ಸಾವಿರ ಇಡಿಗಂಟು.

• ಮಕ್ಕಳ ಬಜೆಟ್​ಗೆ 40,944 ಕೋಟಿ ಅನುದಾನ.

• ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹಮ್ಮಿಕೊಂಡ ಯೋಜನೆಗಳಿಗೆ 43,188 ಕೋಟಿ ಅನುದಾನ.

• ಎಸ್ಸಿ/ ಟಿಎಸ್​ಪಿ ಅಡಿ 28,234 ಕೋಟಿ ಅನುದಾನ ಹಂಚಿಕೆ.

• ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ ವರ್ಗದ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹಕ್ಕೆ ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ಹೊಸ ಯೋಜನೆ ಜಾರಿ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರಿನಲ್ಲಿ 250 ಕೋಟಿ ವೆಚ್ಚದಲ್ಲಿ ತಲಾ ಸಾವಿರ ಆಸನ ಸಾಮರ್ಥ್ಯದ ಬಹಮಹಡಿ ವಿದ್ಯಾರ್ಥಿ ನಿಲಯ ಸಮುಚ್ಚಯ ನಿರ್ಮಾಣ.

• ಅಸ್ಪೃಶ್ಯತೆ ನಿವಾರಣೆಗೆ ವಿನಯ ಸಾಮರಸ್ಯ ಯೋಜನೆ ಜಾರಿ.

• ಗಂಗಾ ಕಲ್ಯಾಣ ಯೋಜನೆಗೆ 1115 ಕೋಟಿ ವಿನಿಯೋಗ.

• ಅಂಬೇಡ್ಕರ್ ಭೇಟಿ ನೀಡಿದ್ದ ರಾಜ್ಯದ ಸ್ಥಳಗಳ ಅಭಿವೃದ್ಧಿ.

• ಎಸ್ಸಿ-ಎಸ್ಟಿ ಮಠ, ಶಿಕ್ಷಣ ಸಂಸ್ಥೆಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗೆ ವಿಶೇಷ ನೆರವು.

• ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ತಲಾ ಒಂದು ನಾರಾಯಣಗುರು ವಸತಿ ಶಾಲೆ ಆರಂಭ.

• ಒಬಿಸಿ ನಿಗಮಗಳ ಮೂಲಕ 400 ಕೋಟಿ ಕಾರ್ಯಕ್ರಮ, ವೀರಶೈವ ಲಿಂಗಾಯತ ನಿಗಮದ ಮೂಲಕ 100 ಕೋಟಿ, ಮರಾಠ ಅಭಿವೃದ್ಧಿ ನಿಗಮ 50 ಕೋಟಿ ವೆಚ್ಚದ ಕಾರ್ಯಕ್ರಮ, ಕೊಡವ ಜನಾಂಗದ ಅಭಿವೃದ್ಧಿಗೆ 10 ಕೋಟಿ ವೆಚ್ಚದ ಕಾರ್ಯಕ್ರಮ.

• ಶಿವಶರಣೆ ನಲೂರು ನಿಂಬೆಕ್ಕ ಜನ್ಮಸ್ಥಳ, ಮಾಚಿದೇವರ ಕುರುಹುಗಳ ಅಭಿವೃದ್ಧಿ.

• ಒಬಿಸಿ ಇಲಾಖೆ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ಕೋರ್ಸ್.

• ಒಬಿಸಿ ವರ್ಗದ 25 ಸಾವಿರ ಜನರ ಕೌಶಲ್ಯ ವೃದ್ದಿಗೆ ಅಮೃತ ಮುನ್ನಡೆ ಹೊಸ ಯೋಜನೆ.

• ಬಹುವಿಧ ವಸತಿ ಶಾಲೆಗಳ ಒಂದುಗೂಡಿಸಿ ಕಲಾಂ ಹೆಸರು ಮರುನಾಮಕರಣ. ಸಿಬಿಎಸ್ಸಿ ಮಾನ್ಯತೆ ಪಡೆಯಲು ಕ್ರಮ. 25 ಕೋಟಿ ಅನುದಾನ ಹಂಚಿಕೆ.

• ಅಲ್ಪಸಂಖ್ಯಾತರ 100 ವಿದ್ಯಾರ್ಥಿ ನಿಲಯಗಳಲ್ಲಿ ದಾಖಲೆ ಸಂಖ್ಯೆ ಹೆಚ್ಚಳಕ್ಕೆ 10 ಕೋಟಿ ಅನುದಾನ.

• ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 50 ಕೋಟಿ.

• ಜೈನ್, ಸಿಖ್, ಬೌದ್ಧ ಸಮುದಾಯ ಅಭಿವೃದ್ಧಿಗೆ 50 ಕೋಟಿ.

• ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಡ್ರೋಣ್ ಮೂಲಕ ಸರ್ವೆ.

• ಮುಖ್ಯಮಂತ್ರಿಗಳ ಲಕ್ಷ ಬೆಂಗಳೂರು ಬಹುಮಹಡಿ ವಸತಿ ಯೋಜನೆಯಡಿ ವರ್ಷಾಂತ್ಯದೊಳಗೆ 20 ಸಾವಿರ ಮನೆ ಹಸ್ತಾಂತರ.

• ಅಮೃತ ಗ್ರಾಮೀಣ ವಸತಿ ಯೋಜನೆಯಡಿ 750 ಗ್ರಾಮ ಪಂಚಾಯತ್ ಗಳಲ್ಲಿ ಸೂರು ರಹಿತರಿಗೆ ವಸತಿ ಸೌಲಭ್ಯ.

• ಮನೆ, ಬಡಾವಣೆ ನಿರ್ಮಾಣಕ್ಕೆ ಅನುಮತಿ ಪಡೆಯುವ ವಿಧಾನ ಸರಳೀಕರಣ.

• ಕೊಳಚೆ ಪ್ರದೇಶದಲ್ಲಿ ವಾಸಿಸುವ 3.36 ಲಕ್ಷ ಕುಟುಂಬಕ್ಕೆ ಹಕ್ಕುಪತ್ರ ವಿತರಣೆ.

• ಪಡಿತರದಲ್ಲಿ ಒಂದು ಕೆಜಿ ರಾಗಿ ಅಥವಾ ಜೋಳ ಸೇರ್ಪಡೆ.

• ಕಟ್ಟಡ ಕಾರ್ಮಿಕರ ಸಾಂದ್ರತೆ ಹೆಚ್ಚಿರುವ ಕಡೆ 100 ಹೈಟೆಕ್ ಸಂಚಾರಿ ಕ್ಲಿನಿಕ್ ಆರಂಭ.

• ಹುಬ್ಬಳ್ಳಿ, ದಾವಣಗೆರೆಯಲ್ಲಿ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ ಹಾಸಿಗೆ ಸಾಮರ್ಥ್ಯ 50 ರಿಂದ 100 ಕ್ಕೆ ಹೆಚ್ಚಳ, ರಾಜ್ಯದ 19 ಕಡೆ ಹೊಸ ಚಿಕಿತ್ಸಾಲಯ ಪ್ರಾರಂಭ.

• ಗ್ರಾಮೀಣ ಜೀವನೋಪಾಯ ವರ್ಷದ ಆಚರಣೆ, 1100 ಕೋಟಿ ಕ್ರಿಯಾಯೋಜನೆ.

• ಅಸ್ಮಿತೆ ಹೆಸರಿನಲ್ಲಿ ಸ್ವಸಹಾಯ ಗುಂಪುಗಳ ಎಲ್ಲ ಉತ್ಪನ್ನ ಮಾರಾಟಕ್ಕೆ ವ್ಯವಸ್ಥೆ, ಹೋಬಳಿಯಿಂದ ರಾಜ್ಯ ಮಟ್ಟದವರೆಗೂ ಮಾರಾಟ ಮೇಳ ಆಯೋಜನೆ.

• ಮಹಿಳಾ ಸ್ವಸಹಾಯ ಗುಂಪು ಉತ್ತೇಜನಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಸರ್ಕಾರಿ ಕಚೇರಿ ಸಂಕೀರ್ಣದಲ್ಲಿ ಮಹಿಳಾ ಸ್ವಸಹಾಯ ಗುಂಪು ನಡೆಸುವ ಕ್ಯಾಂಟೀನ್, ಮಾರಾಟ ಮಳಿಗೆ ಆರಂಭ.

• ಚಿಕ್ಕಬಳ್ಳಾಪುರದಲ್ಲಿ ಚರ್ಮದ ಬೊಂಬೆ, ಧಾರವಾಡದಲ್ಲಿ ಕಸೂತಿ, ಕೊಪ್ಪಳದಲ್ಲಿ ಕೌದಿ ಮತ್ತು ಕಿನ್ಹಾಳ ಬೊಂಬೆ, ಮೈಸೂರಿನಲ್ಲಿ ಅಗರಬತ್ತಿ, ನವಲಗುಂದದಲ್ಲಿ ಜಮಖಾನ, ಚನ್ನಪಟ್ಟಣದಲ್ಲಿ ಆಟಿಕೆ, ಇಳಕಲ್-ಗುಳೇದಗುಡ್ಡ, ಬೆಳಗಾವಿ-ಶಹಾಪುರ, ಶಿಡ್ಲಘಟ್ಟ ಮತ್ತು ಮೊಳಕಾಲ್ಮೂರುಗಳಲ್ಲಿ ಸೀರೆ.

ಮೈಕ್ರೋ ಕ್ಲಸ್ಟರ್ ಅಭಿವೃದ್ಧಿ

• 30 ಸರ್ಕಾರಿ ಐಟಿಐ ಮತ್ತು ಆಯ್ದ ಪಾಲಿಟೆಕ್ನಿಕ್​​ಗಳನ್ನು ಪಿಪಿಪಿ ಮಾದರಿಯಲ್ಲಿ ಟಾಟಾ ಸಹಯೋಗದೊಂದಿಗೆ ಮೇಲ್ದರ್ಜೆಗೆ.

• ದೇವನಹಳ್ಳಿ, ಶಿಗ್ಗಾಂವಿ, ಮಾಗಡಿ ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ ವೈಮಾನಿಕ ತರಬೇತಿ ಕೇಂದ್ರ ಸ್ಥಾಪನೆ.

ಇದನ್ನೂ ಓದಿ: ದುಬಾರಿ ದುನಿಯಾದಲ್ಲಿ ಆಶಾ ಕಾರ್ಯಕರ್ತೆಯರಿಗೆ 1 ಸಾವಿರ ಗೌರವಧನ ಕಡಿಮೆ: ನಾಗಲಕ್ಷ್ಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.