ಸಿಎಂ ಸಿದ್ದರಾಮಯ್ಯ ಅವರು ಎರಡೂವರೆ ಗಂಟೆಗಳ ಕಾಲ ಸುದೀರ್ಘ ಬಜೆಟ್ ಭಾಷಣ ಮಂಡಿಸಿದರು. ಬಜೆಟ್ ಆರಂಭದಲ್ಲಿ ಯಯಾತಿ ನಾಟಕ ಸಾಲುಗಳನ್ನು ಹೇಳುವ ಮೂಲಕ ಅವರು ಮುಂಗಡಪತ್ರ ಭಾಷಣ ಆರಂಭಿಸಿದರು. ಅಲ್ಲದೇ, ಕುವೆಂಪು, ಡಿವಿಜಿ, ಚನ್ನವೀರ ಕಣವಿ, ಇಂದಿರಾಗಾಂಧಿ, ಸರ್ವಜ್ಞ, ಡಾ. ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ಹಲವು ಸಾಹಿತಿ, ಗಣ್ಯರ ಹೇಳಿಕೆಗಳನ್ನು ಪ್ರಸ್ತಾಪಿಸುತ್ತಾ ಬಜೆಟ್ ಓದಿದರು.
ಪ್ರಮುಖ 3 ಇಲಾಖೆಗಳಿಂದ 1,62,000 ಕೋಟಿ ತೆರಿಗೆ ಹಣ ಸಂಗ್ರಹದ ಗುರಿ ಹೊಂದಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯಿಂದ 1,01,000 ಲಕ್ಷ ಕೋಟಿ, ಅಬಕಾರಿ ಇಲಾಖೆಯಿಂದ 36,000 ಕೋಟಿ, ನೋಂದಣಿ & ಮುದ್ರಾಂಕ ಇಲಾಖೆಯಿಂದ 25,000 ಕೋಟಿ ಸೇರಿ ಒಟ್ಟು 1,62,000 ಕೋಟಿ ತೆರಿಗೆ ಸಂಗ್ರಹದ ಗುರಿಯನ್ನು ಸರ್ಕಾರ ಹೊಂದಿದೆ.
ಇದಲ್ಲದೇ, ಸಾಲ ಪಡೆಯಲೂ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಕೇಂದ್ರ ಸರ್ಕಾರದಿಂದ ಶೇಕಡಾ 4ರಷ್ಟು ಅನುದಾನದ ನಿರೀಕ್ಷೆಯಿದ್ದು, ಶೇಕಡ 50ರಷ್ಟು ತೆರಿಗೆ ಆದಾಯದಿಂದ ಹಣ ಹೊಂದಿಸಲು ನಿರ್ಧರಿಸಲಾಗಿದೆ.