ETV Bharat / state

Karnataka Budget: 2023-24ನೇ ಸಾಲಿನ ಬಜೆಟ್​ಗೆ ಸಿಎಂ ಸಿದ್ದರಾಮಯ್ಯ ಕಸರತ್ತು: 3 ಹೊರೆಗಳ ತಲೆನೋವು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಯ ಕುರಿತ ತಯಾರಿಯಲ್ಲಿದ್ದಾರೆ. ಸಿಎಂಗೆ ಒಂದಿಷ್ಟು ಹೊರೆಗಳು ಸವಾಲಾಗಿ ಪರಿಣಮಿಸಿವೆ. ಅವು ಯಾವುವು ನೋಡೋಣ.

Siddaramaiah
ಸಿಎಂ ಸಿದ್ದರಾಮಯ್ಯ
author img

By

Published : Jul 3, 2023, 6:48 AM IST

ಬೆಂಗಳೂರು: 2023-24ನೇ ಸಾಲಿನ ಬಜೆಟ್ (ಆಯವ್ಯಯ) ಮಂಡನೆಗೆ (ಜುಲೈ 7) ಸಿಎಂ ಸಿದ್ದರಾಮಯ್ಯ ಅಂತಿಮ ಸ್ಪರ್ಶ ಕೊಡುತ್ತಿದ್ದಾರೆ. ಮುಖ್ಯಮಂತ್ರಿಗಳು ಹಣಕಾಸು ವರ್ಷದ ಉಳಿದ ಒಂಬತ್ತು ತಿಂಗಳಿಗೆ ಮಂಡಿಸುವ ಈ ಬಜೆಟ್​ನಲ್ಲಿ ಒಂದಷ್ಟು ಹೊರೆಗಳು ಸವಾಲಾಗಿವೆ. ಈ ಬಾರಿಯ ಬಜೆಟ್​ನಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಕಡಿಮೆ. ಬೊಮ್ಮಾಯಿ ಸರ್ಕಾರ ಮಂಡಿಸಿದ್ದ ಲೇಖಾನುದಾನದಲ್ಲಿ ಮೀಸಲಿರಿಸಿದ ಅನುದಾನಗಳನ್ನೇ ಪೂರ್ಣಪ್ರಮಾಣದ ಬಜೆಟ್​ನಲ್ಲಿ ಮರು ಹಂಚಿಕೆ ಮಾಡುವ ಸಂಭವ ಹೆಚ್ಚು.

ಅಂದಾಜು 3.35 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಸಿದ್ಧತೆಯಲ್ಲಿದ್ದಾರೆ. ಮುಖ್ಯಮಂತ್ರಿಯವರೇ ಈ ಬಗ್ಗೆ ಇತ್ತೀಚೆಗೆ ಮುನ್ಸೂಚನೆ ನೀಡಿದ್ದರು. ಆದಾಯ ಸಂಗ್ರಹ ಹೆಚ್ಚಿಸುವ ಮೂಲಕ ಸುಮಾರು 25 ಸಾವಿರ ಕೋಟಿ ರೂ. ಅಧಿಕ ಗಾತ್ರದ ಬಜೆಟ್ ಮಂಡನೆಗೆ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಪ್ರಮುಖ ತೆರಿಗೆ ಇಲಾಖೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹದ ಗುರಿ ನೀಡಲಾಗಿದೆ.

ಪಂಚ ಗ್ಯಾರಂಟಿಗಳ ಹೊರೆ : 5 ಗ್ಯಾರಂಟಿಗಳಿಗೆ ಹಣ ಹೊಂದಿಸುವುದು ಸಿಎಂ ಸಿದ್ದರಾಮಯ್ಯಗೆ ದೊಡ್ಡ ತಲೆನೋವು. ಇದಕ್ಕಾಗಿ ವಾರ್ಷಿಕ ಅಂದಾಜು 60 ಸಾವಿರ ಕೋಟಿ ರೂ. ಮೀಸಲಿಡಬೇಕು. 2023-24ನೇ ಹಣಕಾಸು ವರ್ಷದಲ್ಲಿ ಅಂದಾಜು 40,000 ಕೋಟಿ ರೂ. ಹಣ ಬೇಕಾಗಿದೆ. ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ ಜೂನ್​ನಲ್ಲಿ ಆರಂಭವಾಗಿದೆ. ಜೂನ್ 11ಕ್ಕೆ ಜಾರಿಯಾಗಿರುವ ಈ ಯೋಜನೆಯಡಿ ಜೂನ್ 30ರ ವರೆಗೆ ಸುಮಾರು 250 ಕೋಟಿ ರೂ. ಉಚಿತ ಪ್ರಯಾಣದ ಟಿಕೆಟ್ ವೆಚ್ಚ ಆಗಿದೆ. ನಿರೀಕ್ಷೆಗೂ ಮೀರಿ ಮಹಿಳಾ ಪ್ರಯಾಣಿಕರಿಂದ ಸ್ಪಂದನೆ ಸಿಗುತ್ತಿರುವ ಕಾರಣ ಉಚಿತ ಪ್ರಯಾಣದ ಟಿಕೆಟ್ ಮೊತ್ತವೂ ಅಧಿಕವಾಗಿದೆ. ಇನ್ನು ಅನ್ನಭಾಗ್ಯ ಯೋಜನೆಗೆ ಅಕ್ಕಿ ಬದಲು ಹಣ ಪಾವತಿ ಜು.10ರಿಂದ ಆರಂಭಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಇದಕ್ಕಾಗಿ ತಿಂಗಳಿಗೆ ಅಂದಾಜು 750-800 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ ತಿಳಿಸಿದ್ದಾರೆ. ಹಾಗಾಗಿ, ಹಣ ಜಮೆಗಾಗಿ ಬಜೆಟ್​ನಲ್ಲಿ ಅನುದಾನ ಮೀಸಲಿಡುವುದು ಅನಿವಾರ್ಯ.

ಉಳಿದಂತೆ, ಗೃಹ ಜ್ಯೋತಿಯ ಹೊರೆ ಆಗಸ್ಟ್​ನಿಂದ ಆರಂಭವಾಗಲಿದ್ದು, ಗೃಹ ಲಕ್ಷ್ಮಿ ಯೋಜನೆಯ ಹೊರೆಯೂ ಆಗಸ್ಟ್ ಬಳಿಕ ಶುರುವಾಗಲಿದೆ. ಯುವನಿಧಿ ಯೋಜನೆಯ ಹೊರೆ ಬಹುತೇಕ ನವೆಂಬರ್ ಬಳಿಕವೇ ಆರಂಭ. ಹೀಗಾಗಿ, ಈ ಹಣಕಾಸು ವರ್ಷದ ಉಳಿದಿರುವ 9 ತಿಂಗಳಲ್ಲಿ ಪಂಚ ಗ್ಯಾರಂಟಿಗಳಿಗೆ ಅಂದಾಜು 30,000 - 40,000 ಕೋಟಿ ರೂ. ಬೇಕಾಗಬಹುದು ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

30,000 ಕೋಟಿ ಬಾಕಿ ಬಿಲ್​ಗಳ ತಲೆವರಿ : ಸಿಎಂ ಸಿದ್ದರಾಮಯ್ಯಗೆ ಈ ಬಾರಿಯ ಬಜೆಟ್ ಸಿದ್ಧತೆಯಲ್ಲಿ ಎದುರಾಗಿರುವ ಮತ್ತೊಂದು ತಲೆವರಿ ಬಾಕಿ ಬಿಲ್​ಗಳ ಸವಾಲು. ಗುತ್ತಿಗೆದಾರರಿಗೆ ಸಾವಿರಾರು ಕೋಟಿ ಹಣ ಪಾವತಿಸಬೇಕಾಗಿದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಹೊಂದಿಸುವುದು ಕೂಡಾ ಸರ್ಕಾರದ ನಿದ್ದೆಗೆಡಿಸಿದೆ.‌

ವಿವಿಧ ಇಲಾಖೆಗಳು ಗುತ್ತಿಗೆದಾರರಿಗೆ ಅಂದಾಜು ಸುಮಾರು 30,000 ಸಾವಿರ ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿವೆ.‌ ಅದರಲ್ಲಿ ಸುಮಾರು 15,000 ಕೋಟಿ ರೂ. ಗೂ ಅಧಿಕ ಬಾಕಿ ಬಿಲ್ ಜಲಸಂಪನ್ಮೂಲ ಇಲಾಖೆಯದ್ದು. ಈ ಸಂಬಂಧ ಸಿಎಂ ಅವರನ್ನು ಭೇಟಿಯಾಗಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಬಜೆಟ್​ನಲ್ಲಿ ಬಾಕಿ ಬಿಲ್ ಪಾವತಿಸಲು ಹಣ ನೀಡುವಂತೆ ಮನವಿ ಮಾಡಲಾಗಿದೆ. ಅಂದಾಜಿನ ಪ್ರಕಾರ, ಸುಮಾರು 25,000-30,000 ಕೋಟಿ ರೂ. ಬಿಲ್ ಬಾಕಿ ಉಳಿದುಕೊಂಡಿದೆ. ಆದರೆ, ಗ್ಯಾರಂಟಿ ಯೋಜನೆಗಳಿಂದ‌ ಬಿಲ್ ಪಾವತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಇದೆ ಎಂದು ಕೆಂಪಣ್ಣ ತಿಳಿಸಿದ್ದಾರೆ.‌

ಇದನ್ನೂ ಓದಿ : Congress Guarantee scheme: ಪೂರ್ಣ ಪ್ರಮಾಣದ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಎಲ್ಲಿಯೂ ಸಿಗುತ್ತಿಲ್ಲ: ಸಿಎಂ ಸಿದ್ದರಾಮಯ್ಯ

13,000 ಕೋಟಿ ರೂ ವೇತನ ಪರಿಷ್ಕರಣೆ : ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸುಮಾರು 13,000 ಕೋಟಿ ರೂ. ಹೊರೆ ಬೀಳಲಿದೆ. ಈಗಾಗಲೇ ಏಳನೇ ವೇತನ ಆಯೋಗದ ಅಂತಿಮ ವರದಿಗೆ ಅಂತಿಮ‌ ಸ್ಪರ್ಶ ನೀಡಲಾಗುತ್ತಿದೆ. 7ನೇ ವೇತನ ಆಯೋಗದ ವರದಿ ಸಲ್ಲಿಕೆಗೆ ನೀಡಲಾಗಿದ್ದ ಸಮಯಾವಕಾಶವನ್ನು ಮೇ 19, 2023ರಿಂದ ಆರು ತಿಂಗಳವರೆಗೆ ವಿಸ್ತರಿಸಲಾಗಿದೆ.

7ನೇ ವೇತನ ಆಯೋಗದ ನಿರೀಕ್ಷಿತ ಅಂತಿಮ ವರದಿ ಆಧರಿಸಿ ಒಟ್ಟಾರೆ ಶೇ.30 ರಿಂದ ಶೇ.35 ರಷ್ಟು ವೇತನ ಹಾಗೂ ಭತ್ಯೆಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಅದರಂತೆ ವಾರ್ಷಿಕ ಸುಮಾರು 13,000 ಕೋಟಿ ರೂ. ಹೆಚ್ಚವರಿ ಹೊರೆ ಬೀಳಲಿದೆ. ವರ್ಷಾಂತ್ಯಕ್ಕೆ ಅಂತಿಮ‌ ವರದಿ ಸಲ್ಲಿಕೆಯಾಗಲಿದ್ದು, ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪರಿಷ್ಕೃತ ವೇತನಕ್ಕೂ ಸುಮಾರು 13,000 ಕೋಟಿ ರೂ. ಮೀಸಲಿಡುವ ಅನಿವಾರ್ಯತೆ ಇದೆ.

ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಜಾರಿಗೊಳಿಸಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಒಯ್ಯಲಿದೆ:ಎಂ ಬಿ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.