ETV Bharat / state

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ: ಗೃಹಿಣಿ ಶಕ್ತಿ ಯೋಜನೆ 500 ಸಹಾಯಧನ - ಕೋಳಿ ಸಾಕಾಣಿಕೆ ಪ್ರೋತ್ಸಾಹ

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ - ಸಹಾಯಧನ 1000 ರೂ. ನಿಂದ 1500 ರೂ.ಗೆ ಏರಿಕೆ - ವಿದ್ಯಾರ್ಥಿನಿಯರಿಗೆ ಉಚಿತ ಪಾಸ್ ಘೋಷಣೆ

Karnatakabudget 2023  women budget
ಗೃಹಿಣಿ ಶಕ್ತಿ ಯೋಜನೆ ಶೀಘ್ರದಲ್ಲೇ ಜಾರಿ
author img

By

Published : Feb 17, 2023, 11:16 AM IST

Updated : Feb 17, 2023, 12:48 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಮ್ಮ ಎರಡನೇ ಆರ್ಥಿಕ ಮುಂಗಡ ಪತ್ರ ಮಂಡನೆ ಮಾಡುತ್ತಿದ್ದು, ಮಹಿಳಾ ಸಬಲೀಕರಣದ ಉದ್ದೇಶದಿಂದ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಶೂನ್ಯ ಬಡ್ಡಿದರದಲ್ಲಿ ಮಹಿಳೆಯರಿಗೆ ಸಾಲ ಸೌಲಭ್ಯ ಯೋಜನೆ ಘೋಷಣೆ ಮಾಡಲಾಗಿದೆ.

ಗೃಹಿಣಿ ಶಕ್ತಿ ಯೋಜನೆ: "ಗೃಹಿಣಿ ಶಕ್ತಿ ಯೋಜನೆ"ಯಲ್ಲಿ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಮಾಸಿಕ 500 ರೂ.ಸಹಾಯಧನ ನೀಡುವ ಬಗ್ಗೆ ತಿಳಿಸಲಾಗಿದೆ. ಈ ಹಿಂದೆ ಚುನಾವಣಾ ಪ್ರಚಾರದ ವೇಳೆ ಈ ಬಗ್ಗೆ ರಾಜ್ಯ ಸರ್ಕಾರ ಆಶ್ವಾಸನೆ ನೀಡಿತ್ತು. ಆ‍್ಯಸಿಡ್‌ ದಾಳಿ ಸಂತ್ರಸ್ಥರಿಗೆ ಮಾಶಾಸನ 10,000ಕ್ಕೆ ಏರಿಕೆ ಮಾಡಲಾಗಿದೆ.

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ: ಸಹಾಧನದ ಹೆಚ್ಚಿನ ಬೇಕು ಎಂದು ಹೋರಾಟ ಮಾಡುತ್ತಿದ್ದ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ ನೀಡಿದ್ದು, ಸಹಾಯಧನ 1000 ರೂ. ನಿಂದ 1500 ರೂ.ಗೆ ಏರಿಕೆ ಮಾಡಲಾಗಿದೆ.

She Toilet: ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ ‘She Toilet’ ನಿರ್ಮಾಣ. ಶೌಚಾಲಯಗಳು, ಫೀಡಿಂಗ್ ರೂಂಗಳು, ಮೊಬೈಲ್ ಚಾರ್ಜಿಂಗ್, ತುರ್ತು SOS ಸೌಲಭ್ಯಗಳು ಇತ್ಯಾದಿಯನ್ನು ಆಧುನಿಕ ವಿನ್ಯಾಸದೊಂದಿಗೆ 50 ಕೋಟಿ ರೂ. ಗಳಲ್ಲಿ ನಿರ್ಮಾಣಕ್ಕೆ 2023- 24 ಬಜೆಟ್​ನಲ್ಲಿ ಘೊಷಿಸಲಾಗಿದೆ.

ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್​: ಅಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್​ ಯೋಜನೆ ಘೋಷಿಸಿದ್ದು ಇದಕ್ಕೆನ 1000 ಕೋಟಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಬಜೆಟ್​ನಲ್ಲಿ ತಿಳಿಸಲಾಗಿದೆ.

ಮಹಿಳೆಯರ ಅಪೌಷ್ಟಿಕತೆ ನಿವಾರಣೆಗೆ 100 ಕೋಟಿ: 45 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿಗೆ 1800 ಕೋಟಿ ರೂ. ಸಾಲ ಸೌಲಭ್ಯ ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಮಹಿಳೆಯರ ಅಪೌಷ್ಟಿಕತೆ ನಿವಾರಣೆಗೆ 100 ಕೋಟಿ ರೂ. ಮಕ್ಕಳ ಆರೋಗ್ಯ ತಪಾಸಣೆಗಾಗಿ ವಾತ್ಸಲ್ಯ ಯೋಜನೆ ಘೋಷಿಸಲಾಗಿದೆ. ಬಾಣಂತಿ, ನವಜಾತ ಮಗುವನ್ನು ಆಸ್ಪತ್ರೆಯಿಂದ ಮನೆಗೆ ತಲುಪಿಸಲು ನಗು ಮಗು ವಾಹನ ವ್ಯವಸ್ಥೆ, 12.5 ಕೋಟಿ ಅನುದಾನ ನೀಡಲಾಗಿದೆ.

ಶೂನ್ಯ ಬಡ್ಡಿದರದಲ್ಲಿ ಮಹಿಳೆಯರಿಗೆ ಸಾಲ ಸೌಲಭ್ಯ: ಗೃಹಿಣಿಯ ಹೆಸರಿನಲ್ಲಿ ಸಾಲ ಸೌಲಭ್ಯ ಪಡೆಯವವರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಯೋಜನೆಯನ್ನು ಮಂಡಿಸಲಾಗಿದೆ.

ಕೋಳಿ ಸಾಕಾಣಿಕೆ ಪ್ರೋತ್ಸಾಹ: ರೈತ ಮಹಿಳೆಯಲ್ಲಿ ಕೋಳಿ ಸಾಕಾಣಿಕೆ ಪ್ರೋತ್ಸಾಹಿಸಲು 2022 23ನೇ ಸಾಲಿನಲ್ಲಿ 16,642 ಫಲಾನುಭವಿಗಳಿಗೆ 3.33 ಲಕ್ಷ ಕೋಳಿ ಮರಿ ವಿತರಣೆ ಮಾಡಲಾಗುವುದು.

ವಿದ್ಯಾರ್ಥಿನಿಯರಿಗೆ ಉಚಿತ ಪಾಸ್​: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ವಿದ್ಯಾರ್ಥಿನಿಯರಿಗೆ ಸಂಚಾರಕ್ಕೆ ಸಹಕಾರಿಯಾಗಲು ಬಸ್​ ಪಾಸ್​ ಉಚಿತವಾಗಿ ನೀಡುವ ಬಗ್ಗೆ ಘೋಷಿಸಲಾಗಿದ್ದು, 350 ಕೋಟಿ ರೂಪಾಯಿ ವೆಚ್ಚ ಇದಕ್ಕಾಗಿ ಮೀಸಲಿಡಲಾಗಿದೆ. 1 ಲಕ್ಷ ಮಹಿಳೆಯರಿಗೆ ಉಚಿತ ಕೌಶಲ್ಯ ಅಭಿವೃದ್ಧಿ ಮಾಡುವುದಾಗಿ ತಿಳಿಸಲಾಗಿದೆ.

ಇದನ್ನೂ ಓದಿ: Karnataka Budget 2023: ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ: ಸಚಿವ ಸಂಪುಟ ಸಭೆ ಪ್ರಾರಂಭ

Last Updated : Feb 17, 2023, 12:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.