ETV Bharat / state

#ಅಸಹಾಯಕಡಿಕೆಶಿ, ಸಿದ್ದರಾಮಯ್ಯ ಕೈ ಮೇಲಾಯಿತೇ?: ಬಿಜೆಪಿ ಲೇವಡಿ

author img

By

Published : Oct 24, 2021, 4:02 PM IST

ಬಿಜೆಪಿ ಇಂದು #ಅಸಹಾಯಕಡಿಕೆಶಿ ಹ್ಯಾಶ್ ಟ್ಯಾಗ್​ನೊಂದಿಗೆ ಡಿ.ಕೆ.ಶಿವಕುಮಾರ್ ವಿರುದ್ಧ ಟ್ವೀಟ್ ಮಾಡಿದೆ. ಸಿದ್ದರಾಮಯ್ಯ ಅವರ ಮೊದಲ ದೆಹಲಿ ಭೇಟಿ ಡಿಕೆಶಿ ಮಾಡಿದ ಪದಾಧಿಕಾರಿಗಳ ಪಟ್ಟಿಯನ್ನು ನಿರ್ಲಕ್ಷ್ಯ ಮಾಡುವಂತೆ ಮಾಡಿತು. ಎರಡನೇ ಭೇಟಿ ಪದಾಧಿಕಾರಿಗಳ ಪಟ್ಟಿಯನ್ನೇ ತಿರಸ್ಕರಿಸುವಂತೆ ಮಾಡಿತು. ಸಿದ್ದರಾಮಯ್ಯ ಅವರ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ? ಡಿಕೆಶಿ ಎದುರು ಸಿದ್ದರಾಮಯ್ಯ ಕೈ ಮೇಲಾಯಿತೇ? ಎಂದು ಬಿಜೆಪಿ ಕಾಲೆಳೆದಿದೆ.

KPCC  President DK Shivakumar
ಟ್ವೀಟ್ ಮೂಲಕ ಕಾಲೆಳೆದ ಬಿಜೆಪಿ

ಬೆಂಗಳೂರು: ಬಹುಶಃ ಕೆಪಿಸಿಸಿ ಕಂಡ ಅತ್ಯಂತ ಅಸಹಾಯಕ ಅಧ್ಯಕ್ಷ ಎಂಬ ಪಟ್ಟ ಡಿಕೆ ಶಿವಕುಮಾರ್ ಅವರಿಗೆ ಒಲಿದು ಬರಬಹುದು. ತಮ್ಮ ವಿರುದ್ಧ ಸಂಚು ರೂಪಿಸಿದ ವ್ಯಕ್ತಿಯ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಕ್ಕೂ ಡಿಕೆಶಿ ಅಳುಕುತ್ತಿದ್ದಾರೆ. ಡಿಕೆಶಿ ಎದುರು ಸಿದ್ದರಾಮಯ್ಯ ಕೈ ಮೇಲಾಯಿತೇ? ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ಡಿಕೆಶಿ ಕಾಲೆಳೆದಿದೆ.

#ಅಸಹಾಯಕಡಿಕೆಶಿ ಹ್ಯಾಶ್​ ಟ್ಯಾಗ್​:

ಇಷ್ಟು ದಿನ ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡುತ್ತಿದ್ದ ಬಿಜೆಪಿ ಇಂದು #ಅಸಹಾಯಕಡಿಕೆಶಿ ಹ್ಯಾಶ್ ಟ್ಯಾಗ್​ನೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಟ್ವೀಟ್ ಮಾಡಿದೆ. ಪಿಸುಮಾತು ಪ್ರಕರಣ ಸಂಬಂಧ ಉಪಚುನಾವಣೆ ಮುಗಿದ ಬಳಿಕ ಉತ್ತರ ಕೊಡುತ್ತೇನೆ ಎಂದಿದ್ದ ಡಿ.ಕೆ.ಶಿವಕುಮಾರ್ ಈಗ ಮೆತ್ತಗಾಗಿ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಬಣದ ಉಗ್ರಪ್ಪ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡರೆ ಎಲ್ಲಿ ಅಧ್ಯಕ್ಷ ಪಟ್ಟ ಕೈ ತಪ್ಪುತ್ತದೆಯೆಂಬ ಭಯವೇ? ಸಿದ್ದರಾಮಯ್ಯ ದಿಲ್ಲಿ ಪ್ರವಾಸದಿಂದ ಡಿಕೆಶಿ ಕುಗ್ಗಿ ಹೋಗಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

  • ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗಿದೆಯಂತೆ.

    ಹಾಗಾದರೆ ಚುನಾವಣೆಯೂ ಇಲ್ಲ, ಸದಸ್ಯತ್ವ ನೋಂದಣಿಯೂ ನಡೆಯುವುದಿಲ್ಲ.

    ಏಕೆಂದರೆ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆಯೇ ಇಲ್ಲ.#ನಕಲಿಕಾಂಗ್ರೆಸ್‌ಸದಸ್ಯತ್ವ

    — BJP Karnataka (@BJP4Karnataka) October 24, 2021 " class="align-text-top noRightClick twitterSection" data=" ">

ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು?

ಸಿದ್ದರಾಮಯ್ಯ ಅವರ ಮೊದಲ ದೆಹಲಿ ಭೇಟಿ ಡಿಕೆಶಿ ಮಾಡಿದ ಪದಾಧಿಕಾರಿಗಳ ಪಟ್ಟಿಯನ್ನು ನಿರ್ಲಕ್ಷ್ಯ ಮಾಡುವಂತೆ ಮಾಡಿತು. ಎರಡನೇ ಭೇಟಿ ಪದಾಧಿಕಾರಿಗಳ ಪಟ್ಟಿಯನ್ನೇ ತಿರಸ್ಕರಿಸುವಂತೆ ಮಾಡಿತು. ಸಿದ್ದರಾಮಯ್ಯ ಅವರ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ? ಎಂದು ಕುಟುಕಿದ್ದಾರೆ.

  • ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ಇನ್ನಷ್ಟು ಮಾನದಂಡಗಳು

    √ ಮನೆಯ ಆಸ್ತಿಯನ್ನೇ ದೋಚುವ ಕಲೆ ಇರಬೇಕು.

    √ ದೇಶವನ್ನು ಲೂಟಿ ಮಾಡುವುದಕ್ಕೆ ಹೊಸ ಯೋಚನೆಗಳಿರಬೇಕು.

    √ ಸಾಧ್ಯವಾದರೆ ಬೋಸ್ಟನ್ ವಿಮಾನ ನಿಲ್ದಾಣದಲ್ಲಿ ಡ್ರಗ್ಸ್ ಸಮೇತ ಸಿಕ್ಕಿ ಬೀಳಬೇಕು.

    √ ಗಾಂಧಿ ಹೆಸರನ್ನು ಕದಿಯುವ ಕಲೆ ಹೊಂದಿರಬೇಕು.#ನಕಲಿಕಾಂಗ್ರೆಸ್‌ಸದಸ್ಯತ್ವ

ಕಾಂಗ್ರೆಸ್ ಸದಸ್ಯತ್ವ ಬೇಕಿದ್ದರೆ ಹಲವು ಷರತ್ತುಗಳಂತೆ!:

ಕಾಂಗ್ರೆಸ್ ಸದಸ್ಯತ್ವ ಬೇಕಿದ್ದರೆ ಹಲವು ಷರತ್ತುಗಳಂತೆ!!! ಕುಡಿತ, ಡ್ರಗ್ಸ್ ಚಟ ಹೊಂದಿರಬಾರದು ಎಂಬ ಷರತ್ತು ವಿಧಿಸಿದೆ. ವಿದೇಶಿ ವಿಮಾನ ನಿಲ್ದಾಣದಲ್ಲಿ ಯಾರೂ ಸಿಕ್ಕಿಬೀಳಬಾರದು ಎಂಬ ಕಾಳಜಿಯಿಂದ ಈ‌ ನಿಯಮ ರೂಪಿಸಿರಬಹುದೇ? ಎಂದು ಟ್ವೀಟ್​ ಮಾಡಿದ್ದಾರೆ.

ನಕಲಿ ಗಾಂಧಿಗಳ ಸದಸ್ಯತ್ವ ರದ್ದತಿಗೆ ಏನಾದರೂ ಯೋಜನೆ ರೂಪಿಸಿದ್ದೀರಾ?

ಕಾಂಗ್ರೆಸ್ ಸದಸ್ಯತ್ವ ಬೇಕಿದ್ದರೆ ಕಾನೂನು ಮೀರಿ ಹೆಚ್ಚಿನ ಆಸ್ತಿ ಸಂಪಾದಿಸಿರಬಾರದಂತೆ. ಅಕ್ರಮ ಸಂಪತ್ತಿನ ಮೂಲಕ ಕುಬೇರರಾದ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ, ಕೆಜೆ ಜಾರ್ಜ್, ಜಮೀರ್ ಅಹ್ಮದ್ ಖಾನ್ ಹಾಗೂ ನಕಲಿ ಗಾಂಧಿಗಳ ಸದಸ್ಯತ್ವ ರದ್ದತಿಗೆ ಏನಾದರೂ ಯೋಜನೆ ರೂಪಿಸಿದ್ದೀರಾ?

  • ಪಿಸುಮಾತು ಪ್ರಕರಣ ಸಂಬಂಧ ಉಪಚುನಾವಣೆ ಮುಗಿದ ಬಳಿಕ ಉತ್ತರ ಕೊಡುತ್ತೇನೆ ಎಂದಿದ್ದ @DKShivakumar ಈಗ ಮೆತ್ತಗಾಗಿ ಬಿಟ್ಟಿದ್ದಾರೆ

    ಸಿದ್ದರಾಮಯ್ಯ ಬಣದ ಉಗ್ರಪ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡರೆ ಎಲ್ಲಿ ಅಧ್ಯಕ್ಷ ಪಟ್ಟ ಕೈ ತಪ್ಪುತ್ತದೆಯೆಂಬ ಭಯವೇ?

    ಸಿದ್ದರಾಮಯ್ಯ ದಿಲ್ಲಿ ಪ್ರವಾಸದಿಂದ ಡಿಕೆಶಿ ಕುಗ್ಗಿ ಹೋಗಿದ್ದಾರೆಯೇ?#ಅಸಹಾಯಕಡಿಕೆಶಿ

ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ಮಾನದಂಡಗಳು:

ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ಇನ್ನಷ್ಟು ಮಾನದಂಡಗಳು: ಮನೆಯ ಆಸ್ತಿಯನ್ನೇ ದೋಚುವ ಕಲೆ ಇರಬೇಕು. ದೇಶವನ್ನು ಲೂಟಿ ಮಾಡುವುದಕ್ಕೆ ಹೊಸ ಯೋಚನೆಗಳಿರಬೇಕು. ಸಾಧ್ಯವಾದರೆ ಬೋಸ್ಟನ್ ವಿಮಾನ ನಿಲ್ದಾಣದಲ್ಲಿ ಡ್ರಗ್ಸ್ ಸಮೇತ ಸಿಕ್ಕಿ ಬೀಳಬೇಕು. ಗಾಂಧಿ ಹೆಸರನ್ನು ಕದಿಯುವ ಕಲೆ ಹೊಂದಿರಬೇಕು. ಊರಿನ ಕಟ್ಟೆ, ಕೊಳಾಯಿಗೆ ಒಂದು‌ ಕುಟುಂಬದ ಹೆಸರಿಡಬೇಕು. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗುವ ಛಲ ಬೇಕು. ಹಿರಿಯ ನಾಯಕರನ್ನು ಅವಮಾನಿಸುವ ಗುಣವಿರಬೇಕು. ಕಾಂಗ್ರೆಸ್ ಮುಕ್ತ ಭಾರತಕ್ಕೆ ಅವಿರತ ಪ್ರಯತ್ನಿಸಬೇಕು ಎಂದು ಬಿಜೆಪಿ ಕಾಲೆಳೆದಿದೆ.

ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆಯೇ ಇಲ್ಲ:

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗಿದೆಯಂತೆ. ಹಾಗಾದರೆ ಚುನಾವಣೆಯೂ ಇಲ್ಲ, ಸದಸ್ಯತ್ವ ನೋಂದಣಿಯೂ ನಡೆಯುವುದಿಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆಯೇ ಇಲ್ಲ ಎಂದು ಅಸಮಾಧಾನ ಹೊರಹಾಕಿದೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.