ಬೆಂಗಳೂರು: ಎಂಇಎಸ್ ಶಿವಸೇನೆಯ ಪುಂಡಾಟಿಕೆಯ ವಿರುದ್ಧ ಕನ್ನಡಪರ ಸಂಘಟನೆಗಳು ಗುಡುಗಿದ್ದು, ಇದೇ ಡಿಸೆಂಬರ್ 31 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತಾನಾಡಿರುವ ವಾಟಾಳ್ ನಾಗರಾಜ್, ಬೆಳಗಾವಿ ರಾಜಕಾರಣಿಗಳು ಮರಾಠಿಗರ ಏಜೆಂಟ್ಗಳಾಗಿದ್ದು ಗುಲಾಮರಾಗಿದ್ದಾರೆ. ಬೆಳಗಾವಿ ಅಷ್ಟೇ ಅಲ್ಲ ಕರ್ನಾಟಕದ ಯಾವ ಮೂಲೆಯಲ್ಲೂ ಇವರು ಇರಲು ಅಧಿಕಾರ ಇಲ್ಲ. ಅಧಿಕಾರ ಪಡೆಯುವ ಎಲ್ಲ ಸರ್ಕಾರಗಳು ಇವರನ್ನು ಪೋಷಿಸತ್ತಾ ಬೆಳೆಸುತ್ತಾ ಬಂದಿದ್ದಾರೆ ಅಂತ ಕಿಡಿಕಾರಿದರು.
ಉದ್ದವ್ ಠಾಕ್ರೆ ಬಾಲ ಬಿಚ್ಚಬಾರದು, ಏನಿದ್ರೂ ಮಹಾರಾಷ್ಟ್ರದಲ್ಲಿ ಅಷ್ಟೇ ಅದನ್ನು ಇಟ್ಟುಕೊಳ್ಳಬೇಕು. ಇವತ್ತು ನಮ್ಮವರನ್ನ ಹೊಡೆದಿದ್ದು, ಬಾವುಟಕ್ಕೆ ಬೆಂಕಿ ಇಟ್ಟಿದ್ದಾರೆ. ಇದನ್ನ ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಗಲಭೆ ಎಬ್ಬಿಸುವವರನ್ನ ಸರ್ಕಾರ ವಜಾ ಮಾಡಬೇಕು ಎಂದು ಆಗ್ರಹ ಮಾಡಿದರು.
ಬೊಮ್ಮಯಿಯವರೇ ಇನ್ನೊಂದು ವಾರದ ತನಕ ಗಡುವು..
ಎಂಇಎಸ್ ಬ್ಯಾನ್ ಮಾಡಿದರೆ ಕರ್ನಾಟಕ ಬಂದ್ ವಾಪಸ್ ಪಡೆದುಕೊಳ್ಳುತ್ತೇವೆ. ನಿಮಗೆ ಇನ್ನೊಂದು ವಾರದ ಗಡವು ಕೊಡುತ್ತೇವೆ. ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದೀರಿ, ನಿಮ್ಮ ಮೇಲೆ ಗೌರವ ಹಾಗೂ ನಂಬಿಕೆ ಇದ್ದು ತೀರ್ಮಾನ ತೆಗೆದುಕೊಳ್ಳಿ. ನಿಮ್ಮನ್ನ ಸಿಎಂ ಸ್ಥಾನದಿಂದ ತೆಗೆಯಲು ಪ್ರಯತ್ನ ನಡಿತಿದೆ.
ಅಧಿಕಾರಕ್ಕೆ ಯತ್ನಾಳ್, ನಿರಾಣಿ ಇವ್ರಿಬ್ಬರು ಬಂದು ಬಿಟ್ಟರೆ ಒಬ್ಬರು ವಿಧಾನಸೌಧ ಮಾರಿ ಸಕ್ಕರೆ ಕಾರ್ಖಾನೆ ಮಾಡಿ ಬಿಡ್ತಾರೆ. ಯತ್ನಾಳ್ ಗೆ ಹುಚ್ಚು ಹಿಡಿದಿದೆಯೋ ಏನೋ ಗೊತ್ತಿಲ್ಲ, ಕಳೆದ ವರ್ಷವೇ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಬೆಕಲು ಅಂತ ಹೇಳಿದ್ದವು. ಮುಖ್ಯಮಂತ್ರಿ ಬದಲಾವಣೆ ಮಾಡಬೇಕಂತೆ ಇವರೇನು ಹುಡುಗಾಟ ಆಡ್ತಿದ್ದಾರಾ? ಅಂತ ಕಿಡಿಕಾರಿದರು.
ಬೆಳಗ್ಗೆ 6 ರಿಂದ ಸಂಜೆ 6 ತನಕ ಬಂದ್
ಇನ್ನು ರಾಜ್ಯಾದ್ಯಂತ ಎಲ್ಲ ಚಟುವಟಿಕೆಗಳು ಬಂದ್ ಆಗಬೇಕು. ಇದಕ್ಕಾಗಿ ಎಲ್ಲರೂ ಸಂಪೂರ್ಣ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಆಸ್ಪತ್ರೆ, ತುರ್ತುಸೇವೆ ಹಾಗೂ ಅಗತ್ಯ ಸೇವೆ ಹೊರತು ಪಡಿಸಿ ಮಿಕ್ಕೆಲ್ಲ ಸೇವೆಗಳು ಬಂದ್ ಆಗಲಿದೆ ಅಂತ ವಾಟಾಳ್ ತಿಳಿಸಿದರು.
ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ತನಕ ಕರ್ನಾಟಕ ಬಂದ್ ಆಗಲಿದ್ದು, ಟೌನ್ ಹಾಲ್ ನಿಂದ ಬೃಹತ್ ಮೆರವಣಿಗೆ ನಡೆಸಲಿದ್ದೇವೆ. ಈ ಮೂಲಕ ಕನ್ನಡಿಗರ ಶಕ್ತಿ ಪ್ರದರ್ಶನ ತೋರಿಸಲಿದ್ದೇವೆ. ನಮಗೆ ಯಾವ ಸಂಘಟನೆಗಳ ನೈತಿಕ ಬೆಂಬಲ ಬೇಡ, ಬದಲಿಗೆ ನೇರ ಬೆಂಬಲ ನೀಡಿ ಸರ್ಕಾರದ ಗಮನ ಸೆಳೆಯಬೇಕಿದೆ ಅಂದರು.
ಕರ್ನಾಟಕ ಬಂದ್ ಗೆ ಯಾರೆಲ್ಲ ಬೆಂಬಲ?
ಈಗಾಗಲೇ ಕೋವಿಡ್ ನಿಂದ ಆರ್ಥಿಕ ಸಂಕಷ್ಟಕ್ಕೆ ವ್ಯಾಪಾರಿಗಳು ಸಿಲುಕಿದ್ದಾರೆ. ಹೊಸ ವರ್ಷಾಚರಣೆ ಬರುತ್ತಿರುವುದರಿಂದ ಇದು ವ್ಯಾಪಾರ-ವಹಿವಾಟಿಗೂ ತೊಂದರೆಯಾಗಲಿದೆ ಅನ್ನೋ ಅಭಿಪ್ರಾಯ ಕೇಳಿ ಬಂದಿದೆ. ಹೀಗಾಗಿ ದಿನಾಂಕ ಬದಲಿಗೆ ಹಲವರು ಒತ್ತಾಯಿಸಿದ್ದಾರೆ. ಆದರೆ, ಈ ಮಧ್ಯೆ ಹಲವು ಸಂಘ ಸಂಸ್ಥೆಗಳು ಬೆಂಬಲ ನೀಡಿವೆ.
ಬೆಂಬಲ ನೀಡಿ ಬಂದ್ ಆಗುವ ಚಟುವಟಿಕೆಗಳು:
- - ಆಟೋ ಓಡಾಟ ಇರೋದಿಲ್ಲ
- - ಓಲಾ ಉಬರ್ ಬಂದ್
- - ಬೀದಿ ಬದಿ ವ್ಯಾಪಾರ ಬಂದ್
- - ಪಾದಚಾರಿ ವ್ಯಾಪಾರ ಬಂದ್
- - ಕೈಗಾರಿಕಾ ಒಕ್ಕೂಟದ ಬೆಂಬಲ
- - ಸಿನಿಮಾ ಮಾಲೀಕರ ಬೆಂಬಲ
- - ಗಾರ್ಮೆಂಟ್ಸ್ ನೌಕರರು
- - ವಕೀಲರ ಸಂಘ
- - ಸರ್ಕಾರಿ ನೌಕರರ ಸಂಘ
- - ಅಖಿಲಭಾರತ ಚಾಲಕರ ವೃತ್ತಿ ಸಂಘ
- - ದಲಿತ ಸಂಘರ್ಷ ಸಮಿತಿ
ಯಾವುದು ಬಂದ್ ಇಲ್ಲ:
- ಕೆಎಸ್ ಆರ್ ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ ಓಡಾಟ ಎಂದಿನಂತೆ ಇರಲಿದೆ.
- ಹೋಟೆಲ್ ಮಾಲೀಕರ ನೈತಿಕ ಬೆಂಬಲ ಇರಲಿದ್ದು, ಹೋಟೆಲ್ ಬಂದ್ ಇರುವುದಿಲ್ಲ
- ಲಾರಿ ಮಾಲೀಕರ ಸಂಘದ ನೈತಿಕ ಬೆಂಬಲ