ETV Bharat / state

ಕರ್ನಾಟಕ ಬಂದ್​​​ಗೆ ನೀರಸ ಪ್ರತಿಕ್ರಿಯೆ: ಅಲ್ಲಲ್ಲಿ ತುಸು ಕಿರಿಕಿರಿ... ಇನ್ನುಳಿದಂತೆ ನೋ ವರಿ - ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್​

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್​, Karnataka bandh demanding implementation of Sarojini Mahishi Report
ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್​
author img

By

Published : Feb 13, 2020, 5:55 AM IST

Updated : Feb 13, 2020, 12:00 PM IST

10:49 February 13

ಮುಂಜಾನೆಯೇ ಹೆದ್ದಾರಿಯಲ್ಲಿ ಟೈರ್​​​ಗೆ ಬೆಂಕಿ ಹಚ್ಚಿ ಪ್ರತಿಭಟನೆ

ಮುಂಜಾನೆಯೇ ಹೆದ್ದಾರಿಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ

ಆನೇಕಲ್​ನಲ್ಲಿ ಮುಂಜಾನೆ ಕರ್ನಾಟಕ ಬಂದ್​ಗೆ ಬಿಸಿ ತಟ್ಟಿದ್ದು, ನಸುಕಿನಲ್ಲಿಯೇ ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ-7ರ ಸೂರ್ಯನಗರ ವ್ಯಾಪ್ತಿಯ ತಿರುಮಗೊಂಡನಹಳ್ಳಿ ಬಳಿ ಟೈರಿಗೆ ಬೆಂಕಿ ಹಚ್ಚಿ ಬಂದ್ ಯಶಸ್ವಿಯಾಗಬೇಕೆಂದು ಹೋರಾಟಕ್ಕೆ ಚಾಲನೆ ನೀಡಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಆನೇಕಲ್ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

10:44 February 13

ಕರ್ನಾಟಕ ಬಂದ್​ಗೆ ರಾಜ್ಯದ ಹಲವೆಡೆ ದೊರೆಯದ ಬೆಂಬಲ

ಚಿತ್ರದುರ್ಗ, ರಾಮನಗರ, ಗಂಗಾವತಿ ಸೇರಿದಂತೆ ರಾಜ್ಯದ ಹಲವೆಡೆ ಕರ್ನಾಟಕ ಬಂದ್​ಗೆ ಬೆಂಬಲ ದೊರೆತಿಲ್ಲ. ಚಿತ್ರದುರ್ಗದಲ್ಲಿ ಬಂದ್ ಮಾಡಲು ಕನ್ನಡ ಪರ ಸಂಘಟನೆಗಳು ಮುಂದೆ ಬಾರದೇ ಇರುವುದರಿಂದ ಬಂದ್​ಗೆ ಬೆಂಬಲ ಇಲ್ಲ ಎಂಬ ಸಂದೇಶ ರವಾನಿಸಲಾಗಿದೆ. ರಾಮನಗರದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಯಥಾಸ್ಥಿತಿ ಇದ್ದು, ಸಂಚಾರ ಸುಗಮವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಾದ್ಯಂತ ಭದ್ರತೆ ವಹಿಸಲಾಗಿದೆ. 

10:31 February 13

ಬೆಳಗಾವಿ ಜಿಲ್ಲೆಗೆ ತಟ್ಟದ ಕರ್ನಾಟಕ ಬಂದ್ ಬಿಸಿ: ಯಥಾಸ್ಥಿತಿಯಲ್ಲಿ ಕುಂದಾನಗರಿ!

ಬೆಳಗಾವಿ ಜಿಲ್ಲೆಗೆ ತಟ್ಟದ ಕರ್ನಾಟಕ ಬಂದ್ ಬಿಸಿ

ಕರ್ನಾಟಕ ಬಂದ್ ಕರೆಗೆ ಕುಂದಾನಗರಿ ಬೆಳಗಾವಿ ಜಿಲ್ಲಾದ್ಯಂತ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಬೆಳಗಾವಿ ಬಸ್‌ ನಿಲ್ದಾಣದಲ್ಲಿ ಎಂದಿನಂತೆ ಸರ್ಕಾರಿ,‌‌ ಖಾಸಗಿ ಬಸ್‌ಗಳು ಆಟೋಗಳ ಸಂಚಾರ ಮಾಡುತ್ತಿವೆ. ಕರ್ನಾಟಕ ಬಂದ್‌ನಿಂದ ಬೆಳಗಾವಿಯ ವಿವಿಧ ಸಂಘಟನೆಗಳೂ ದೂರ ಉಳಿದಿವೆ. ಅಥಣಿ ತಾಲೂಕಿನಲ್ಲೂ ಯಾವುದೇ ಸಂಘಟನೆಗಳು ಇದುವರೆಗೂ ಬಂದ್​ಗೆ ಬೆಂಬಲ ನೀಡಿಲ್ಲ. ಈಗಾಗಲೇ ಚಿಕ್ಕೋಡಿ ಉಪವಿಭಾಗದಲ್ಲಿ ಉತ್ತರ ಕರ್ನಾಟಕದ ದೊಡ್ಡ ಜಾತ್ರೆಗಳಾದ  ಸವದತ್ತಿ ಯಲ್ಲಮ್ಮ ಹಾಗೂ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕ ದೇವಿ ಜಾತ್ರಾ ಮಹೋತ್ಸವಕ್ಕೆ ಪಕ್ಕದ ಮಹಾರಾಷ್ಟ್ರ, ಗೋವಾ, ಹೈದರಾಬಾದ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಯಾತ್ರಾರ್ಥಿಗಳು ಬಂದ್​ ಬಿಸಿಯಿಲ್ಲದೇ ಜಾತ್ರೆಗೆ ಆಗಮಿಸುತ್ತಿದ್ದಾರೆ.

10:08 February 13

ಬೀದರ್​ನಲ್ಲಿ ಬಂದ್​ಗೆ ನೀರಸ ಪ್ರತಿಕ್ರಿಯೆ: ಬಸ್​ಗಳ ಓಡಾಟದಲ್ಲಿ ವ್ಯತ್ಯಯ..!

ಜಿಲ್ಲೆಯಲ್ಲಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಾರಿಗೆ ಸಂಸ್ಥೆ ಬಸ್​ಗಳ ಓಡಾಟ ಕಡಿತಗೊಳಿಸಿದಕ್ಕೆ ಪ್ರಯಾಣಿಕರ ಪರದಾಟ ಕಂಡು ಬಂದಿದೆ. ಬಂದ್ ಹಿನ್ನೆಲೆಯಲ್ಲಿ ಲಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಜನ ಜೀವನ ಸಾಮಾನ್ಯವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಸಾರಿಗೆ ಸಂಸ್ಥೆ ಬಸ್​ಗಳ ಓಡಾಟದಲ್ಲಿ ಕಡಿತಗೊಳಿಸಿದ್ದರಿಂದಾಗಿ ಬೆಳಗ್ಗಿನ ಜಾವ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಪರದಾಡುವಂತಾಯಿತು.

10:07 February 13

ಕರ್ನಾಟಕ ಬಂದ್: ಚಾಮರಾಜನಗರ, ಬಾಗಲಕೋಟೆ ಎಂದಿನಂತೆ ಸಂಚಾರ- ಜನಜೀವನ ಸಾಮಾನ್ಯ

ಕರ್ನಾಟಕ ಬಂದ್​ಗೆ ಈ ಮೂರು ಜಿಲ್ಲೆಗಳಲ್ಲಿ ಕೆಲವು ಕನ್ನಡಪರ ಸಂಘಟನೆಗಳು ಬೆಂಬಲ ನೀಡದಿರುವುದರಿಂದ ಜನಜೀವನ ಎಂದಿನಂತಿದೆ‌. ಬಸ್ ಹಾಗೂ ಆಟೋ‌ ಸಂಚಾರ ಆರಂಭಗೊಂಡಿದ್ದು, ದಿನನಿತ್ಯದ ವಹಿವಾಟಿಗೆ ವರ್ತಕರು ಅಣಿಯಾಗುತ್ತಿದ್ದಾರೆ‌.‌ ಎಪಿಎಂಸಿ ಮಾರುಕಟ್ಟೆಗೆ ಎಂದಿನಂತೆ ರೈತರು ಬಂದಿದ್ದು ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

09:31 February 13

ಕಲಬುರಗಿ, ಮಡಿಕೇರಿಗೆ ತಟ್ಟದ ಕರ್ನಾಟಕ ಬಂದ್ ಬಿಸಿ

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್​

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡ ಪರ ಸಂಘಟನೆಗಳು ನೀಡಿದ ಕರ್ನಾಟಕ ಬಂದ್‌ನ ಬಿಸಿ ಮಡಿಕೇರಿ ಹಾಗೂ ಕಲಬುರಗಿಗೆ ತಟ್ಟಿಲ್ಲ. ಮುಂಜಾನೆಯಿಂದಲೇ ನಗರದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು, ಖಾಸಗಿ ಬಸ್‌ಗಳು ಹಾಗೂ ಆಟೋ ಸಂಚಾರ ಯಥಾಸ್ಥಿತಿಯಲ್ಲಿದೆ.  

09:27 February 13

ಬೆಣ್ಣೆನಗರಿ, ವಿಜಯಪುರ, ಗದಗದಲ್ಲೂ ಬಂದ್ ಇಲ್ಲ

Karnataka Bund
ಬೆಣ್ಣೆನಗರಿ, ವಿಜಯಪುರ, ಗದಗದಲ್ಲೂ ಬಂದ್ ಇಲ್ಲ

ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್​ಗೆ ಬೆಣ್ಣೆನಗರಿ ದಾವಣಗೆರೆ, ಗುಮ್ಮಟನಗರಿ ವಿಜಯಪುರ, ಗದಗದಲ್ಲಿಯು ಸಹ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಜೀವನ ಎಂದಿನಂತೆ ಇದ್ದು, ಈ ಜಿಲ್ಲೆಗಳಲ್ಲಿ ಬಂದ್​ಗೆ ಯಾವ ಸಂಘಟನೆಗಳು ಕರೆ ನೀಡಿಲ್ಲ. ‌ಸರ್ಕಾರಿ ಕಚೇರಿಗಳು, ಬ್ಯಾಂಕ್​ಗಳು, ಹೋಟೆಲ್​ಗಳು, ಪೆಟ್ರೋಲ್ ಬಂಕ್, ಔಷಧ ಮಳಿಗೆಗಳು, ಪ್ರವಾಸಿ ವಾಹನಗಳ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.

09:19 February 13

ಕರ್ನಾಟಕ ಬಂದ್​ಗೆ ಹಾಸನದಲ್ಲಿ ಮಿಶ್ರ ಪ್ರತಿಕ್ರಿಯೆ

ಕರ್ನಾಟಕ ಬಂದ್​ಗೆ ಹಾಸನದಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ಎಂದಿನಂತೆ ಸಾರಿಗೆ ಬಸ್​ಗಳು ಬೆಳಗ್ಗೆಯಿಂದಲೆ ರಸ್ತೆಗಿಳಿದಿದ್ದು, ಪ್ರಯಾಣಿಕರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸುತ್ತೇವೆ. ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ,  ಪ್ರಜಾಶಕ್ತಿ ಸಮಿತಿ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ, ಲಾರಿ ಮಾಲೀಕರ ಸಂಘ, ಆಟೋ ಮಾಲೀಕರು ಹಾಗೂ ಚಾಲಕರ ಕ್ಷೇಮಾಭಿವೃದ್ಧಿ ಸಂಘ, ಕಾರು ಮಾಲೀಕರ ಸಂಘದ ನೇತೃತ್ವದಲ್ಲಿ ಇಂದು ಹಾಸನದಲ್ಲಿ ಬಂದ್​ಗೆ ಕರೆ ನೀಡಲಾಗಿದೆ.  

08:20 February 13

ಅವಳಿ ನಗರದಲ್ಲಿ ತಟ್ಟದ ಬಂದ್ ಬಿಸಿ

ಅವಳಿ ನಗರದಲ್ಲಿ ತಟ್ಟದ ಬಂದ್ ಬಿಸಿ

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್ ಕರೆ‌ ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ- ಧಾರವಾಡದಲ್ಲಿ ಯಾವುದೇ ಬೆಂಬಲ‌ ವ್ಯಕ್ತವಾಗಿಲ್ಲ. ಎಂದಿನಂತೆ ವಾಹನ ಸಂಚಾರ, ಜನಜೀವನ ಯಥಾಸ್ಥಿತಿಯಲ್ಲಿ ನಡೆದಿದೆ.ಆದರೆ, ಕರ್ನಾಟಕ ಸಂಗ್ರಾಮ ಸೇನೆ ಸಂಘಟನೆ‌ ಒಂದೇ ಬಂದ್​ಗೆ ಬೆಂಬಲ ನೀಡಿದ್ದು, ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಿದ್ದಾರೆ.‌

08:20 February 13

ಕರ್ನಾಟಕ ಬಂದ್: ಸಿಲಿಕಾನ್​ ಸಿಟಿಯಲ್ಲಿ ಎಂದಿನಂತೆ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್ ಸಂಚಾರ..

ಸಿಲಿಕಾನ್​ ಸಿಟಿಯಲ್ಲಿ ಎಂದಿನಂತೆ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್ ಸಂಚಾರ

ಕರ್ನಾಟಕ ಬಂದ್ ಹಿನ್ನೆಲೆ ಯಥಾಸ್ಥಿತಿಯಲ್ಲಿ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್ಸುಗಳು ಸಂಚಾರ ಆರಂಭಿಸಿವೆ. ರೈಲ್ವೆ ಹಾಗೂ ಮೆಟ್ರೊ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ.

08:19 February 13

ಸಾಂಸ್ಕೃತಿಕ ನಗರಿ ಸಾಂಕೇತಿಕ ಪ್ರತಿಭಟನೆ

ಸಾಂಸ್ಕೃತಿಕ ನಗರಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಂದ್ ಸಾಂಕೇತಿಕ ಪ್ರತಿಭಟನೆಗೆ ಮಾತ್ರ ಸೀಮಿತವಾಗಿದೆ. ನಗರದಲ್ಲಿ ಬಂದ್‌ಗೆ ಪೂರ್ಣ ಬೆಂಬಲ ಇಲ್ಲ. ಪ್ರವಾಸಿಗರಿಗೆ ತೊಂದರೆಯಾಗುವ ಹಿನ್ನೆಲೆ ಹೋಟೆಲ್ ಮುಚ್ಚುವುದಿಲ್ಲ. ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ.

07:42 February 13

ಕಾರವಾರ ಹಾಗೂ ಶಿವಮೊಗ್ಗದಲ್ಲಿ ಬಂದ್​ಗೆ ನೀರಸ ಪ್ರತಿಕ್ರಿಯೆ

ಸರೋಜಿನಿ‌ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳಿಂದ ಕರ್ನಾಟಕ ಬಂದ್​ಗೆ ಕಾರವಾರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ‌. ಜೊತೆಗೆ ಶಿವಮೊಗ್ಗದಲ್ಲು ಅಂಗಡಿ‌ ಮುಗ್ಗಟ್ಟುಗಳು ಎಂದಿನಂತೆ ತೆರೆದಿವೆ. ರಸ್ತೆಯಲ್ಲಿ ವಾಹನ ಸಂಚಾರ ಸಹಜವಾಗಿಯೇ ಇದೆ. ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕನ್ನಡಪರ ಸಂಘಟನೆಯಾಗಲಿ, ಇತರೆ ಸಂಸ್ಥೆಗಳಾಗಲಿ ಬಂದ್​ಗೆ ಬೆಂಬಲ ಸೂಚಿಸಿಲ್ಲ.‌

07:36 February 13

ಸಹಜ ಸ್ಥಿತಿಯಲ್ಲಿ ಹಾವೇರಿ

ಕರ್ನಾಟಕ ಬಂದ್​ಗೆ ಹಾವೇರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಾದ್ಯಂತ ಎಂದಿನಂತೆ ಬಸ್, ಆಟೋ ಹಾಗೂ ಖಾಸಗಿ ವಾಹನಗಳ ಸಂಚರಿಸುತ್ತಿವೆ. ಎಂದಿನಂತೆ ಜನ ಜೀವನ ಸಾಗಿದ್ದು, ಅಂಗಡಿ ಮುಂಗಟ್ಟುಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಹಾಗೆ ಜಿಲ್ಲೆಯಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುವ ಕುರಿತಂತೆ ಯಾವುದೇ ಮಾಹಿತಿ ನೀಡಿಲ್ಲ.

07:12 February 13

ಕರ್ನಾಟಕ ಬಂದ್​ಗೆ ಕೋಲಾರದಲ್ಲಿ ದೊರೆಯದ ಬೆಂಬಲ

ಸರೋಜಿನಿ‌ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳಿಂದ ಕರ್ನಾಟಕ ಬಂದ್​ಗೆ ಕರೆ ಹಿನ್ನೆಲೆ, ಕೋಲಾರದಲ್ಲಿ ಬಂದ್​ಗೆ ಯಾವುದೇ ಬೆಂಬಲ ದೊರೆತಿಲ್ಲ. ಎಂದಿನಂತೆ ಶಾಲಾ ಕಾಲೇಜು, ಸಂಚಾರ ವ್ಯವಸ್ಥೆ ಹಾಗೂ ಅಂಗಡಿ ಕಾರ್ಯ ನಿರ್ವಹಿಸುತ್ತಿದ್ದು, ‌ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

04:19 February 13

ಕರ್ನಾಟಕ ಬಂದ್​ಗೆ ಮಂಗಳೂರಲ್ಲಿ ಮಿಶ್ರ ಪ್ರತಿಕ್ರಿಯೆ: ಬಂಟ್ವಾಳದಲ್ಲಿ ಬಸ್ ಮೇಲೆ ಕಲ್ಲು ತೂರಾಟ

ಬಂಟ್ವಾಳದಲ್ಲಿ ಬಸ್ ಮೇಲೆ ಕಲ್ಲು ತೂರಾಟ

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ  ಆಗಿದ್ದ ವೇಳೆ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ರಾಜ್ಯದ ಮೊದಲ ಮಹಿಳಾ ಸಂಸದೆ, ಸಚಿವೆ ಹಾಗೂ ಮಹಿಳಾ ಹೋರಾಟಗಾರ್ತಿ ಸರೋಜಿನಿ ಮಹಿಷಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದ್ದರು. ಮೂರು ವರ್ಷ ಈ ಕುರಿತು ಪರಿಶೀಲನೆ ನಡೆಸಿದ್ದ ಸಮಿತಿ 1986ರಲ್ಲಿ ಸರ್ಕಾರಕ್ಕೆ 53 ಅಂಶಗಳ ಒಂದು ವರದಿಯನ್ನು ಸಲ್ಲಿಸಿತ್ತು. ಅದೇ ಸರೋಜಿನಿ ಮಹಿಷಿ ವರದಿ. ಈ ವರದಿಯನ್ನು ಜಾರಿಗೆ ತಂದು ಕನ್ನಡಿಗರಿಗೆ ಉದ್ಯೋಗ ನೀಡಿ ನಿರುದ್ಯೋಗ ನಿರ್ಮೂಲನೆ ಮಾಡಬೇಕು ಎಂಬುದು ಕನ್ನಡಿಗರ ಹೋರಾಟವಾಗಿದೆ. ಈ ಹಿನ್ನೆಲೆ ಇಂದು ಕರ್ನಾಟಕ ಬಂದ್​ ಮಾಡಲಾಗಿದ್ದು, ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

ಕರ್ನಾಟಕ ಬಂದ್ ಕರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ಓಡಾಟ ಜನಜೀವನ‌ ಸಹಜ ಸ್ಥಿತಿಯಲ್ಲಿ ಇದೆ. ಆದರೆ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಬಸ್​ಗೆ ಕಲ್ಲು ತೂರಾಟ ನಡೆಸಲಾಗಿದೆ. ತಿರುಪತಿಯಿಂದ ಮಂಗಳೂರಿಗೆ ಬರುತ್ತಿದ್ದ ಆಂಧ್ರಪ್ರದೇಶದ ಸರ್ಕಾರಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಡಿದ್ದಾರೆ. ಬಸ್​ಗೆ ಕಲ್ಲು ಬಿಸಾಡಿದ ಹಿನ್ನೆಲೆಯಲ್ಲಿ ಬಸ್​ನ ಕಿಟಕಿ ಗಾಜು ಪುಡಿಯಾಗಿದೆ. ಬಸ್​ನಲ್ಲಿ 30 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. 

Last Updated : Feb 13, 2020, 12:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.