ETV Bharat / state

ಚಳಿಗಾಲದ ಅಧಿವೇಶನ : ಗೋಹತ್ಯೆ ನಿಷೇಧ ಬಿಲ್​ ಖಚಿತ, ಲವ್ ಜಿಹಾದ್ ಮಸೂದೆ ಮಂಡನೆ ಡೌಟ್​

author img

By

Published : Dec 6, 2020, 5:29 PM IST

Updated : Dec 6, 2020, 5:43 PM IST

ನಾಳೆಯಿಂದ ಪ್ರಾರಂಭವಾಗುವ ವಿಧಾನ ಮಂಡಲ ಚಳಿಗಾಲದ ಅಧಿವೇಶನದಲ್ಲಿ ವಿವಾದಿತ ಗೋಹತ್ಯೆ ನಿಷೇಧ, ಲವ್ ಜಿಹಾದ್ ತಡೆ ಮಸೂದೆಗಳು ಮಂಡನೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಈ ಕುರಿತು ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ, ಬಿಲ್ ಮಂಡನೆ ಸಾಧ್ಯತೆಯಿಲ್ಲ ಎನ್ನಲಾಗ್ತಿದೆ.

Karnataka Assembly winter Session update
ಚಳಿಗಾಲದ ಅಧಿವೇಶನ -2020

ಬೆಂಗಳೂರು : ನಾಳೆಯಿಂದ ಏಳು ದಿನಗಳ‌ ಕಾಲ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಈ ಬಾರಿಯ ಅಧಿವೇಶನದಲ್ಲಿ ಸರ್ಕಾರ ವಿವಾದಿತ ಲವ್ ಜಿಹಾದ್ ತಡೆ ಮಸೂದೆ ಹಾಗೂ ಗೋ ಹತ್ಯೆ ನಿಷೇಧ ಮಸೂದೆ ಮಂಡಿಸುತ್ತಾ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಏಳು ದಿನಗಳ ಕಾಲ ನಡೆಯಲಿರುವ ಅಧಿವೇಶನ ಡಿ.15ಕ್ಕೆ ಮುಕ್ತಾಯವಾಗಲಿದೆ. ಈ ಬಾರಿಯ ಅಧಿವೇಶನದ ಕೊನೆಯ ಎರಡು ದಿನ, ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದ ಮೇಲೆ ಚರ್ಚೆ ನಡೆಯಲಿದೆ. ಮೊದಲ ವಾರದ ಕಲಾಪದಲ್ಲಿ ಸರ್ಕಾರ ಒಟ್ಟು 10 ಮಸೂದೆಗಳನ್ನು ಮಂಡಿಸಲಿದೆ. ಅದರಲ್ಲಿ ಪ್ರಮುಖವಾಗಿ ಭೂ ಸುಧಾರಣೆ ತಿದ್ದುಪಡಿ ವಿಧೇಯಕ, ಎಪಿಎಂಸಿ ತಿದ್ದುಪಡಿ ವಿಧೇಯಕ, ಬಿಬಿಎಂಪಿ ವಿಧೇಯಕ ಸೇರಿವೆ.

ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಭೂ ಸುಧಾರಣೆ ತಿದ್ದುಪಡಿ ವಿಧೇಯಕ, ಎಪಿಎಂಸಿ ತಿದ್ದುಪಡಿ ವಿಧೇಯಕಗಳನ್ನು ಅಂಗೀಕರಿಸಲಾಗಿತ್ತು. ಆದರೆ ವಿಧಾನಪರಿಷತ್​ನಲ್ಲಿ ಈ ಮಸೂದೆಗಳು ಇನ್ನೂ ಅಂಗೀಕಾರಗೊಂಡಿಲ್ಲ. ಕಾರ್ಮಿಕ ತಿದ್ದುಪಡಿ ಕಾಯ್ದೆ ಪರಿಷತ್​ನಲ್ಲಿ ಸೋಲನುಭವಿಸಿತ್ತು. ಪರಿಷತ್​ನಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಹೀಗಾಗಿ ಈ ವಿವಾದಿತ ವಿಧೇಯಕ ಜಾರಿಗೊಳಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಇದೀಗ ಅಧಿವೇಶನದಲ್ಲಿ ಈ ವಿಧೇಯಕಗಳಿಗೆ ಸರ್ಕಾರ ಅಂಗೀಕಾರ ಪಡೆಯುವ ಕಾತರದಲ್ಲಿದೆ.

ವಿವಾದಿತ ಗೋಹತ್ಯೆ ನಿಷೇಧ, ಲವ್ ಜಿಹಾದ್ ತಡೆ ಬಿಲ್ ಮಂಡನೆ..? :

ಈ ಅಧಿವೇಶನದಲ್ಲಿ ಎಲ್ಲರ ಕುತೂಹಲ ಕೆರಳಿಸಿರುವುದು ವಿವಾದಿತ ಗೋ ಹತ್ಯೆ ನಿಷೇಧ ಹಾಗೂ ಲವ್ ಜಿಹಾದ್ ತಡೆ ವಿಧೇಯಕಗಳ ಮಂಡನೆ. ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಈ ಎರಡೂ ವಿವಾದಿತ ಮಸೂದೆಗಳನ್ನು ಮಂಡಿಸುತ್ತೋ, ಇಲ್ಲವೋ ಎಂಬ ಕುತೂಹಲ ಮೂಡಿದೆ.

ಬೆಳಗಾವಿಯಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಲವ್ ಜಿಹಾದ್ ತಡೆ ವಿಧೇಯಕ ಮಂಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಅದರ ಜೊತೆಗೆ ಗೋ ಹತ್ಯೆ ನಿಷೇಧ ವಿಧೇಯಕವನ್ನೂ ಮಂಡಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹೀಗಾಗಿ, ಸರ್ಕಾರ ಈ ಅಧಿವೇಶನದಲ್ಲೇ ಎರಡು ವಿವಾದಿತ ವಿಧೇಯಕಗಳನ್ನು ಮಂಡಿಸಬಹುದು ಎನ್ನಲಾಗ್ತಿದೆ. ಆದರೆ, ಈವರೆಗೆ ಸಂಸದೀಯ ವ್ಯವಹಾರಗಳ ಇಲಾಖೆಗಾಗಲಿ, ವಿಧಾನಸಭೆ ಕಾರ್ಯದರ್ಶಿ ಕಚೇರಿಗಾಗಲಿ ಈ ಎರಡೂ ವಿಧೇಯಕ ಮಂಡನೆ ಸಂಬಂಧ ಯಾವುದೇ ಪ್ರಸ್ತಾಪ ಸಲ್ಲಿಕೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ನಾಳೆಯಿಂದ ಅಧಿವೇಶನ: ಸಿದ್ದರಾಮಯ್ಯ ನಿವಾಸದಲ್ಲಿ ಉಭಯ ಸದನಗಳ ಕಾಂಗ್ರೆಸ್​ ನಾಯಕರ ಸಭೆ

ಗೋ ಹತ್ಯೆ ನಿಷೇಧ ಮಸೂದೆಯನ್ನು ಇದೇ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈಗಾಗಲೇ ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಉತ್ತರ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಕಾಯ್ದೆಯ ಅಧ್ಯಯನ ನಡೆಸಿದ್ದಾರೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಗೋ ಹತ್ಯೆ ನಿಷೇಧ ವಿಧೇಯಕ ಮಂಡಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಇದೇ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಲವ್ ಜಿಹಾದ್ ಬಿಲ್ ಮಂಡನೆ ಅನುಮಾನ :

ಇತ್ತ ವಿವಾದಿತ ಲವ್ ಜಿಹಾದ್ ಬಿಲ್ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಉತ್ತರ ಪ್ರದೇಶ ಮಾದರಿಯಲ್ಲೇ ಲವ್ ಜಿಹಾದ್ ತಡೆ ಕಾನೂನು ತರುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಬಿಜೆಪಿ ಸಚಿವರುಗಳೂ ಈ ಬಗ್ಗೆ ತಮ್ಮ ಒಲವು ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಈ ಅಧಿವೇಶನದಲ್ಲೇ ಸರ್ಕಾರ ಲವ್ ಜಿಹಾದ್ ತಡೆ ವಿಧೇಯಕವನ್ನು ಮಂಡಿಸುತ್ತಾ ಎಂಬ ಕುತೂಹಲ ಮೂಡಿದೆ. ಆದರೆ, ಈವರೆಗೆ ಸಂಸದೀಯ ವ್ಯವಹಾರಗಳ ಇಲಾಖೆಗೆ ಈ ಸಂಬಂಧ ಗೃಹ ಇಲಾಖೆಯಿಂದ ಯಾವುದೇ ಪ್ರಸ್ತಾಪ ಸಲ್ಲಿಕೆಯಾಗಿಲ್ಲ. ಕಾನೂನು ಸಚಿವ ಮಾಧುಸ್ವಾಮಿ ರಾಜ್ಯದಲಿ ಲವ್ ಜಿಹಾದ್ ತಡೆ ಕಾನೂನಿನ ಅಗತ್ಯ ಇಲ್ಲ ಎಂದಿದ್ದರೆ, ಸಿಎಂ ಲವ್ ಜಿಹಾದ್ ತಡೆ ಕಾನೂನು ತರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಅಧಿವೇಶನದಲ್ಲೇ ವಿವಾದಿತ ಲವ್ ಜಿಹಾದ್ ತಡೆ ವಿಧೇಯಕ ಮಂಡನೆಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

ಈಗಾಗಲೇ ವಿವಾಹ ಸಂಬಂಧ ಅಲಹಬಾದ್ ಹೈಕೋರ್ಟ್ ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡುವಲ್ಲಿ ವಯಸ್ಕರು ಸ್ವತಂತ್ರರಾಗಿದ್ದಾರೆ ಎಂದು ಸ್ಪಷ್ಟ ತೀರ್ಪನ್ನು ನೀಡಿದೆ. ಹೀಗಾಗಿ ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು, ಕೂಲಂಕಷ ಅಧ್ಯಯನ ನಡೆಸಿದ ಬಳಿಕವಷ್ಟೇ ವಿಧೇಯಕ ಮಂಡಿಸಲು ಸರ್ಕಾರ ಮುಂದಾಗಿದೆ. ತರಾತುರಿಯಲ್ಲಿ ವಿಧೇಯಕ ಮಂಡಿಸಿದರೆ, ಬಳಿಕ ಕಾನೂನು ತೊಡಕು ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕವೂ ಸರ್ಕಾರಕ್ಕಿದೆ. ಹೀಗಾಗಿ ಕೂಲಂಕಷ ಅಧ್ಯಯನ ನಡೆಸಿ ಬಳಿಕ ವಿಧೇಯಕ ಮಂಡಿಸುವ ಸಾಧ್ಯತೆ ಇರುವುದರಿಂದ, ಈ ಅಧಿವೇಶನದಲ್ಲಿ ವಿಧೇಯಕ ಮಂಡನೆ‌ ಬಹುತೇಕ ಅನುಮಾನ ಎಂದು ಮೂಲಗಳು ತಿಳಿಸಿವೆ.

Last Updated : Dec 6, 2020, 5:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.