ETV Bharat / state

ನಿಮ್ಮ ಕಾಲದಲ್ಲಿ ಕೆಂಪಯ್ಯರನ್ನು ಸೂಪರ್ ಹೋಂ ಮಿನಿಸ್ಟರ್ ಅಂತಿದ್ರು: ಕಾಂಗ್ರೆಸ್​ಗೆ ಗೃಹ ಸಚಿವರ ತಿರುಗೇಟು

ಕೆ.ಜೆ.ಜಾರ್ಜ್, ಡಾ‌.ಪರಮೇಶ್ವರ್ ಕಾಲದಲ್ಲಿ ಕೆಂಪಯ್ಯರನ್ನು ಸೂಪರ್ ಹೋಂ ಮಿನಿಸ್ಟರ್ ಅಂತ ಕರೆಯಲಾಗಿತ್ತು.‌ ಆಗ ಆ ಪರಿಸ್ಥಿತಿ ಇತ್ತು. ಸಿದ್ದರಾಮಯ್ಯ ಅವರು ವರ್ಣರಂಜಿತವಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಮಾತನಾಡಿದ್ದಾರೆ. ರಾಜಕೀಯ ವಿಡಂಬನೆ ಮಾಡುವಾಗ ನಾಲ್ಕು ಬೆರಳುಗಳು ನಿಮ್ಮ ಕಡೆನೇ ತೋರಿಸುತ್ತವೆ ಎಂದು ಗೃಹಸಚಿವರು ಸಿದ್ದರಾಮಯ್ಯ ವಿರುದ್ದ ಹರಿಹಾಯ್ದರು.

ಕಾಂಗ್ರೆಸ್​ಗೆ ಗೃಹ ಸಚಿವರ ತಿರುಗೇಟು
ಕಾಂಗ್ರೆಸ್​ಗೆ ಗೃಹ ಸಚಿವರ ತಿರುಗೇಟು
author img

By

Published : Mar 24, 2022, 8:22 PM IST

Updated : Mar 24, 2022, 9:13 PM IST

ಬೆಂಗಳೂರು: ನಿಮ್ಮ ಕಾಲದಲ್ಲಿ ನಿವೃತ್ತ ಐಪಿಎಸ್​ ಅಧಿಕಾರಿ ಕೆಂಪಯ್ಯ ಅವರೇ ಸೂಪರ್ ಹೋಂ ಮಿನಿಸ್ಟರ್ ಅಂತ ಆರೋಪ ಇತ್ತು. ಹೋಂ ಮಿನಿಸ್ಟರ್ ಡಮ್ಮಿ ಅಂತ ಕರೆಯಲಾಗುತ್ತಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ನಿಯಮ 69ರಲ್ಲಿ ಕಾನೂನು ಸುವ್ಯವಸ್ಥೆ ಮೇಲಿನ ಚರ್ಚೆಗೆ ಈ ರೀತಿ ಉತ್ತರ ನೀಡಿದ್ದಾರೆ. ಕೆ.ಜೆ.ಜಾರ್ಜ್, ಡಾ‌.ಪರಮೇಶ್ವರ್ ಕಾಲದಲ್ಲಿ ಕೆಂಪಯ್ಯರನ್ನು ಸೂಪರ್ ಹೋಂ ಮಿನಿಸ್ಟರ್ ಅಂತ ಕರೆಯುವ ಪರಿಸ್ಥಿತಿ ಆಗ ಇತ್ತು ಎಂದರು.

ಸಿದ್ದರಾಮಯ್ಯ ಅವರು ವರ್ಣರಂಜಿತವಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಮಾತನಾಡಿದ್ದಾರೆ. ರಾಜಕೀಯ ವಿಡಂಬನೆ ಮಾಡುವಾಗ ನಾಲ್ಕು ಬೆರಳುಗಳು ನಿಮ್ಮ ಕಡೆನೇ ತೋರಿಸುತ್ತವೆ. ಕೊಡಗಿನಲ್ಲಿ ಕುಟ್ಟಪ್ಪ ಹತ್ಯೆಯಾಯಿತು. ದಕ್ಷಿಣ ಕನ್ನಡದಲ್ಲಿ ಪ್ರಶಾಂತ್​ ಪೂಜಾರಿ ಹತ್ಯೆಯಾಯಿತು. ಶಿವಮೊಗ್ಗದಲ್ಲಿ ವಿಶ್ವನಾಥ್ ಕೊಲೆ ಆಯಿತು. ಆವಾಗ ಪಿಎಫ್ ಐ ಗೆ ಮೆರವಣಿಗೆ ಮಾಡಲು ನಿವೇ ಅವಕಾಶ ಕೊಟ್ಟಿದ್ದೀರ. ಡಿಸಿ ಆವಾಗ ಒಪ್ಪಿಲ್ಲ. ಆದರೆ, ಜಿಲ್ಲಾಧಿಕಾರಿಗೆ ನೀವು ಪಿಎಫ್ ಐಗೆ ಸಮಾವೇಶ ಮಾಡಲು ಅವಕಾಶ ನೀಡಿದಿರಿ. ಹಿಜಾಬ್ ಹಿಂದೆ ಯಾವ ಶಕ್ತಿ ಇದೆ ಎಂದು ನಿಮಗೂ ಗೊತ್ತಿದೆ ಎಂದು ತಿಳಿಸಿದರು.

ನಿಮ್ಮ ಕಾಲದಲ್ಲಿ ಕೆಂಪಯ್ಯರನ್ನು ಸೂಪರ್ ಹೋಂ ಮಿನಿಸ್ಟರ್ ಅಂತಿದ್ರು: ಕಾಂಗ್ರೆಸ್​ಗೆ ಗೃಹ ಸಚಿವರ ತಿರುಗೇಟು

ಉಡುಪಿ, ಶಿವಮೊಗ್ಗದ ಗಲಾಟೆಯಲ್ಲಿ ಕಾಣದ ಕೈಗಳು ಇವೆ ಎಂದು ಹೈಕೋರ್ಟ್ ಹೇಳಿದೆ. ಈ ಕಾಣದ ಕೈಗಳು ಯಾವಾಗಿಂದ ಜೀವ ಪಡೆದುಕೊಂಡವು ಎಂಬುದನ್ನು ನಾನು ಹೇಳುತ್ತೇನೆ. ಆವತ್ತು ಶಿವಮೊಗ್ಗದಲ್ಲಿ ವಿಶ್ವಾನಾಥ್ ಶೆಟ್ಟಿಯನ್ನು ಕೊಚ್ಚಿ ಕೊಲೆ ಮಾಡಿದ್ದರು. ಆ ವೇಳೆ ಹಿಂದೂ ಹುಡುಗರ ಮೇಲೆ ಕೇಸ್ ಹಾಕಿದ್ದೀರ. ಪಿಎಫ್ ಐ ಮೇಲೆ ಅವತ್ತು ಯಾವ ರೀತಿ ಕೇಸ್ ಹಾಕಿದ್ದೀರಿ?. ಪಿಎಫ್​ಐ ಇಡೀ ರಾಜ್ಯದಲ್ಲಿ ಅಶಾಂತಿ ಉಂಟು ಮಾಡುತ್ತಿದೆ. ಪರಿಣಾಮ ರಾಜ್ಯದ ಶಾಂತಿ ಕದಡಲಾಗುತ್ತಿದೆ ಎಂದು ಹರಿಹಾಯ್ದರು.

ಇದನ್ನೂ ಓದಿ: ಮೂರು ವರ್ಷದ ಬಾಲಕಿ ಮೇಲೆ ದೊಡ್ಡಪ್ಪನಿಂದ ಅತ್ಯಾಚಾರ: ಪೈಶಾಚಿಕ ಕೃತ್ಯಕ್ಕೆ ಮಗು ಬಲಿ

ಮಹಾದಾಯಿ ನೀರಿಗಾಗಿ ಹೋರಾಟ ಮಾಡುತ್ತಿರುವವರ ಮೇಲೆ ದಬ್ಬಾಳಿಕೆ ಮಾಡಲಾಯಿತು. 480 ಜನರ ಮೇಲೆ ತೀವ್ರ ದೌರ್ಜನ್ಯ ನಡೆಯಿತು. 2015ರಲ್ಲಿ 80 ಕೋಮು ಗಲಭೆ ಆಗಿದ್ದವು. 2020ರಲ್ಲಿ 41 ಕೋಮು ಗಲಭೆ ಪ್ರಕರಣ ಆಗಿದೆ. 2015ರಲ್ಲಿ ಆಸ್ತಿ ಹಾನಿ ಪ್ರಕರಣಗಳು 47 ನಡೆದಿದ್ದವು. ನಮ್ಮ ಕಾಲದಲ್ಲಿ 30 ನಡೆದಿವೆ. ಆರ್​ಎಸ್ಎಸ್, ಬಜರಂಗದಳ ಯಾರನ್ನೂ ಬಿಟ್ಟಿಲ್ಲ. ಕಾಯ್ದೆಗಳು ಎಲ್ಲರಿಗೂ ಒಂದೇ. ಅದು ಕ್ರಿಶ್ಚಿಯನ್, ಹಿಂದೂ, ಮುಸ್ಲಿಂಗೆ ಅಂತ ಬೇರೆ ಬೇರೆ ಇಲ್ಲ. ನಾವು ಬಿಗಿಯಾದ ಕ್ರಮ‌ ತೆಗೆದುಕೊಂಡಿದ್ದೇವೆ. ಆಳಂದ ಘಟನೆ ಪೂರ್ವ ಯೋಜಿತ ಘಟನೆ ಆಗಿದೆ. ರಾಜಕಾರಣ ಒಂದಷ್ಟು ಮಂದಿಯನ್ನು ಬಡಿದೆಬ್ಬಿಸಿದೆ. ನಾನು ಏನು ಮಾಡಿದರೂ ನನಗೆ ಏನು ಆಗಲ್ಲ ಎಂಬ ಭಾವನೆ ಬಂದಿದೆ. ಹಾಗೆ ಆಗಬಾರದು.‌ ಈಗ ಎಲ್ಲಾ ಕಾರಣಗಳಿಂದ ಅಶಾಂತಿ ತೋಟವನ್ನು ಮಾಡುತ್ತಿದ್ದೇವೆ. ಹಿಜಾಬ್ ವಿಚಾರದಲ್ಲೂ ಅದೇ ಆಗಿದೆ ಎಂದು ಕಾಂಗ್ರೆಸ್​ ಪ್ರಮುಖರ ವಿರುದ್ಧ ಕಿಡಿಕಾರಿದರು.

Last Updated : Mar 24, 2022, 9:13 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.