ಬೆಂಗಳೂರು: ರಾಜ್ಯದಲ್ಲಿ ನಡೆದ ಪ್ರಥಮ ಪಿಯು ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಳ್ಳಲಿದ್ದು, ವಿವಿಧ ವೆಬ್ಸೈಟ್ಗಳಲ್ಲಿ ರಿಸಲ್ಟ್ ಪ್ರಕಟ ಮಾಡಲಾಗುತ್ತಿದೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳು ಫಲಿತಾಂಶ ನೋಡಬೇಕು ಎಂದು ಮಂಡಳಿ ಮನವಿ ಮಾಡಿದೆ.
ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿರುವ ಮೊಬೈಲ್ ನಂಬರ್ ಹಾಗೂ ಇ-ಮೇಲ್ಗೆ ಫಲಿತಾಂಶ ಬರಲಿದ್ದು, ಇದರ ಮಧ್ಯೆ ವೆಬ್ ಸೈಟ್ನಲ್ಲೂ ಫಲಿತಾಂಶ ಪ್ರಕಟಗೊಳ್ಳಲಿದ್ದು, ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಫಲಿತಾಂಶ ತಿಳಿದುಕೊಳ್ಳಬಹುದಾಗಿದೆ.
ಮೇ 5ರಂದು ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಇಲಾಖೆಯಿಂದ ಎಚ್ಚರಿಕೆ
ವೆಬ್ಸೈಟ್ ಲಿಂಕ್ ಇಂತಿವೆ
- result.dkpucpa.com
- ಫಲಿತಾಂಶ ನೋಡುವುದು ಹೇಗೆ!?
- result.dkpucpa.com ಲಿಂಕ್ ಮೇಲೆ ಕ್ಲಿಕ್ ಮಾಡಿ, ಹೋಮ್ ಪೇಜ್ನಲ್ಲಿ Karnataka PUC Result 2020 ಮೇಲೆ ಕ್ಲಿಕ್ ಮಾಡಿ
- ನಿಮ್ಮ ರೂಲ್ ನಂಬರ್ ಹಾಕಿ submit ಮಾಡಿ, ಸ್ಕ್ರಿನ್ ಮೇಲೆ ಫಲಿತಾಂಶ ಬರಲಿದೆ.
ದೇಶಾದ್ಯಂತ ಕೊರೋನಾ ವೈರಸ್ ಅಬ್ಬರ ಜೋರಾಗಿರುವ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗುತ್ತಿದೆ.