ETV Bharat / state

ಕಾಂತರಾಜ್ ವರದಿ ಜಾರಿಗೆ ರಾಜ್ಯ ಹಿಂದುಳಿದ ವರ್ಗ, ದಲಿತ ಅಲ್ಪಸಂಖ್ಯಾತರ ಸಂಘ ಒತ್ತಾಯ - etv bharat kannada

ಕಾಂತರಾಜ್ ವರದಿಯನ್ನು ಸ್ವೀಕರಿಸಿ ಜಾರಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ದಲಿತ ಅಲ್ಪಸಂಖ್ಯಾತರ ಸಂಘ ಒತ್ತಾಯಿಸಿತು.

Kantharaj report should be implemented backward class organization
ಕಾಂತರಾಜ್ ವರದಿ ಅನುಮೋದನೆಗೆ ರಾಜ್ಯ ಹಿಂದುಳಿದ ವರ್ಗ, ದಲಿತ ಅಲ್ಪಸಂಖ್ಯಾತರ ಸಂಘದಿಂದ ಒತ್ತಾಯ
author img

By ETV Bharat Karnataka Team

Published : Dec 7, 2023, 10:50 PM IST

ಬೆಂಗಳೂರು: ಕಾಂತರಾಜ್ ವರದಿಯನ್ನು ಅನುಮೋದಿಸಲು ಸಾಮಾಜಿಕ ನ್ಯಾಯದ ಬಗ್ಗೆ ಇಚ್ಛೆಯುಳ್ಳ ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲವಾಗಿ ನಿಲ್ಲಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ದಲಿತ ಅಲ್ಪಸಂಖ್ಯಾತರ ಸಂಘ ಆಗ್ರಹಿಸಿತು.

ಈ ಕುರಿತು ಗುರುವಾರ ಪ್ರೆಸ್ ಕ್ಲಬ್​ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ದಲಿತ ಅಲ್ಪಸಂಖ್ಯಾತರ ಸಂಘದ ಅಧ್ಯಕ್ಷ ಉದಯ ಶಂಕರ್, "ಜಾತಿಗಳು, ಗಣತಿ ಮೊದಲು ಜಾರಿಗೆ ತಂದವರು ಬ್ರಿಟಿಷರು. 1872, 1874ರಲ್ಲಿ ಅಂದಿನ ಮೈಸೂರು ಸಂಸ್ಥಾನದ ರಾಜರು ವಿಶೇಷವಾಗಿ ನಾಲ್ಮಡಿ ಕೃಷ್ಣರಾಜ ಒಡೆಯರ್, ತದನಂತರ ನಮ್ಮ ದೇಶದ ಸಂವಿಧಾನ, ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್, ಸಾಮಾಜಿಕ ನ್ಯಾಯ ಆರ್ಥಿಕ ನ್ಯಾಯ, ರಾಜಕೀಯ ನ್ಯಾಯ ಇದು ನಮ್ಮ ಸಂವಿಧಾನದಲ್ಲಿದೆ. ಪ್ರಪಂಚಕ್ಕೆ ಮೊಟ್ಟ ಮೊದಲಿಗೆ ಕರ್ನಾಟಕದಲ್ಲಿ ಜಾರಿಯಾಗಿರುವ ಪರಿಕಲ್ಪನೆ ನಮ್ಮದಾಗಿದೆ" ಎಂದು ಹೇಳಿದರು.

"ಪ್ರತಿಯೊಂದು ಮತ, ಪ್ರತಿ ಜಾತಿ ಪ್ರತಿ ಕೋಮಿನ ಜನಗಣತಿಯಾದರೆ, ಆಗ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಅರ್ಥವಿದೆ. ಆದರೆ ಪ್ರಬಲ ಕೋಮಿನ ಮುಖಂಡರು ಸಿದ್ದರಾಮಯ್ಯ ಸರಕಾರಕ್ಕೆ ಬೇಡವೆಂದು ಹೇಳುತ್ತಿವೆ. ಏಕೆಂದರೆ ಎಲ್ಲರಿಗೂ ಸಮಾನ ಅವಕಾಶಗಳು ಒದಗುತ್ತವೆ. ನಮಗೆ ಕಡಿಮೆಯಾಗುತ್ತವೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ" ಎಂದು ಕಿಡಿಕಾರಿದರು.

"ದಿವಂಗತ ದೇವರಾಜ್ ಅರಸು ಅವರ ಹಾವನೂರ್ ಕಮಿಷನ್, ಮುಂದುವರೆದ ದಿನಗಳಲ್ಲಿ ಚಿನ್ನಪ್ಪ ರೆಡ್ಡಿ ಕಮಿಷನ್ ವರದಿಗಳನ್ನು ವಿಧಾನಸೌಧದಲ್ಲಿ ಸುಟ್ಟಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಸ್ವತಂತ್ರ ಬಂದು 75 ವರ್ಷಗಳು ಕಳೆದು ಹೋಗಿದೆ. ಈಗಲೂ ವಂಚಿತರಿಗೆ ಅವಕಾಶಗಳು ಬೇಡವೇ" ಎಂದು ಪ್ರಶ್ನಿಸಿದರು.

"ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದಿನ ಸರಕಾರದಲ್ಲಿ 160 ಕೋಟಿ ರೂ. ವೆಚ್ಚ ಬರಿಸಿ ಕಾಂತರಾಜ್ ವರದಿಯನ್ನು ತಯಾರಿಸುವಷ್ಟರಲ್ಲಿ ಸರ್ಕಾರದ ಅವಧಿ ಮುಗಿದು ಹೋಯಿತು. ತದನಂತರ ಬಂದ ಸರ್ಕಾರಗಳು ಈ ವರದಿಯನ್ನು ಜಾರಿ ಮಾಡಲಿಲ್ಲ. ಈಗ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅವಕಾಶ ಲಭಿಸಿದೆ. ಕಾಂತರಾಜ್ ವರದಿಯನ್ನು ಸ್ವೀಕರಿಸಿ ಜಾರಿ ಮಾಡಬೇಕು" ಎಂದು ಒತ್ತಾಯಿಸಿದರು.

"ಇತ್ತೀಚೆಗೆ ರಾಹುಲ್ ಗಾಂಧಿಯವರು, ಜಾತಿಗಣತಿ ಆಗಲೇಬೇಕೆಂದು ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜಾತಿ ವರದಿ ಚರ್ಚೆಗೆ ಬರಲಿ ತದನಂತರ ಸಿದ್ದರಾಮಯ್ಯ ಸರ್ಕಾರ ಅದನ್ನು ಜಾರಿ ಮಾಡಬೇಕೆಂದು ನಮ್ಮಗಳ ಆಶಯ. ಒಂದು ವೇಳೆ ಅವರ ಸರಕಾರ ತೊಂದರೆಗೆ ಸಿಲುಕಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇತಿಹಾಸ ಪುಟಗಳಲ್ಲಿ ದಾಖಲಾಗುತ್ತಾರೆ" ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿಭಾಗದ ಕಾರ್ಯಧ್ಯಕ್ಷ ಕೆ.ವಿ.ಶಿವರಾಂ, ಸಂಚಾಲಕ ರವಿಚಂದ್ರ ಉಪಸ್ಥಿತರಿದ್ದರು.

ಇದನ್ನೂ ಓದಿ: ಮೆಕ್ಕೆಜೋಳ ಘಟಕದಲ್ಲಿ ಮೃತಪಟ್ಟ ಕಾರ್ಮಿಕರಿಗೆ ಪರಿಹಾರ ಹೆಚ್ಚಿಸುವ ಕುರಿತು ಸಿಎಂ ಜೊತೆ ಚರ್ಚೆ: ಸಂತೋಷ್ ಲಾಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.