ಬೆಂಗಳೂರು : ಬೈಕ್ನಲ್ಲಿ ತೆರಳುತ್ತಿದ್ದಾಗ ಟ್ಯಾಂಕರ್ಗೆ ಡಿಕ್ಕಿ ಹೊಡೆದು ಖಳನಟ, ನಿರ್ದೇಶಕ ಸೂರ್ಯೋದಯ ಅವರ ಪುತ್ರ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ನಗರದ ಬ್ಯಾಡರಹಳ್ಳಿಯ ನ್ಯೂ ಲಿಂಕ್ ರಸ್ತೆಯಲ್ಲಿ ಸಂಭವಿಸಿದೆ.
ಸೂರ್ಯೋದಯ ಅವರ ಮಗ ಪುತ್ರ ಮಯೂರ್ (20) ಮೃತ ಯುವಕ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಬಗ್ಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೂರ್ಯೋದಯ ಅವರು ಕೆಲ ಚಿತ್ರಗಳಲ್ಲಿ ಖಳನಟರಾಗಿ ಅಭಿನಯಿಸಿದ್ದು, ಕನ್ನಡ ಚಿತ್ರ 'ಸ್ಟಾಲ್' ಹಾಗೂ 'ದೇಯಿ ಬೈದತಿ' ಎಂಬ ತುಳು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: You Must Love Me.. ಸಿನಿಮಾ ಸ್ಟೈಲಲ್ಲಿ ಪ್ರೀತಿಸೋಕೆ ಡೆಡ್ಲೈನ್ ಕೊಟ್ಟಿದ್ದ ಪಾಗಲ್ ಪ್ರೇಮಿ ಅಂದರ್