ಬೆಂಗಳೂರು: ರವೀಂದ್ರ ಕಲಾಕ್ಷೇತ್ರ ಸಭಾಂಗಣದಲ್ಲಿಂದು ನ್ಯೂಸ್ ಪೇಪರ್ ಆಫ್ ಕರ್ನಾಟಕ ವತಿಯಿಂದ ಕನ್ನಡ ರಾಜ್ಯೋತ್ಸವ-2022ರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ -2022 ಪ್ರಶಸ್ತಿಯನ್ನು 67 ಸಾಧಕರಿಗೆ ನೀಡಿ ಗೌರವಿಸಲಾಯಿತು.
ವಿನಾಯಕನ ಪ್ರತಿರೂಪ ಆನೆಯಿಂದ ಧ್ವಜಾರೋಹಣ ಮಾಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಗೌರಿಗದ್ದೆ ಮಠದ ಅವಧೂತ ವಿನಯ್ ಗುರೂಜಿ, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು, ನಟ ಅಭಿಜಿತ್, ನ್ಯೂಸ್ ಪೇಪರ್ ಆಫ್ ಕರ್ನಾಟಕ ಅಧ್ಯಕ್ಷ ಶ್ರಾವಣ್ ಲಕ್ಷಣ್ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿದರು.
ಈ ವೇಳೆ ಅವಧೂತ ವಿನಯ್ ಗುರೂಜಿ ಮಾತನಾಡಿ, ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ವಿವಿಧ ಕಲಾ ಪ್ರಕಾರಗಳಿವೆ. ಇಂತಹ ಕಲೆಯನ್ನು ಮತ್ತು ಕಲಾವಿದರನ್ನು ಗುರುತಿಸುವ ಕಾರ್ಯ ಸರ್ಕಾರದ ಜೊತೆಯಲ್ಲಿ ಸ್ವಯಂ ಸೇವಾ ಸಂಘಟನೆಗಳು ಮಾಡಿದಾಗ ಮಾತ್ರ ಕಲೆ ಉಳಿಯಲು ಸಾಧ್ಯ ಎಂದು ಹೇಳಿದರು.
ಪ್ರಶಸ್ತಿಯನ್ನು ನಾವು ಹುಡಕಿಕೊಂಡು ಹೋಗಬಾರದು. ಬದಲಾಗಿ ಪ್ರಶಸ್ತಿಗಳೇ ನಮ್ಮನ್ನು ಅರಸಿ ಬರಬೇಕು. ಇಂದು ಸನ್ಮಾನಿತರಿಗೆ ಸಮಾಜದಲ್ಲಿ ಮಾಡಿದ ಸೇವೆಗಾಗಿ ಪ್ರಶಸ್ತಿಗಳು ಅವರನ್ನರಸಿ ಹೋಗಿವೆ. ಇದರಿಂದ ಅವರು ಇನ್ನೂ ಹೆಚ್ಚು ಸೇವೆ ಮಾಡುವಂತಾಗುತ್ತದೆ ಎಂದರು.
ಇದನ್ನೂ ಓದಿ:ಶ್ವಾನದ ಕೈಯಲ್ಲಿ ಪುಸ್ತಕ ಬಿಡುಗಡೆ ಮಾಡಿಸಿದ ಇನ್ಫೋಸಿಸ್ ಸುಧಾ ಮೂರ್ತಿ