ETV Bharat / state

ಇಸ್ರೋ ಅಧ್ಯಕ್ಷ ಸೋಮನಾಥ್, ನಟರಾದ ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ದನ ಸೇರಿ 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ - kannada rajyotsava award

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿನ 68 ಮಂದಿ ಸಾಧಕರು ಆಯ್ಕೆ ಆಗಿದ್ದಾರೆ. ಇವರ ಜೊತೆಗೆ 10 ಸಂಘ ಸಂಸ್ಥೆಗಳನ್ನು ಕೂಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Etv Bharatಇಸ್ರೋ ಅಧ್ಯಕ್ಷ ಸೋಮನಾಥ್, ನಟರಾದ ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ದನ
ಇಸ್ರೋ ಅಧ್ಯಕ್ಷ ಸೋಮನಾಥ್, ನಟರಾದ ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ದನ
author img

By ETV Bharat Karnataka Team

Published : Oct 31, 2023, 3:31 PM IST

Updated : Oct 31, 2023, 9:38 PM IST

ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ.

ಬೆಂಗಳೂರು: ಇಸ್ರೋ ಅಧ್ಯಕ್ಷ ಸೋಮನಾಥ್, ಶಾಲೆಗೆ ಭೂಮಿ ನೀಡಿದ ಹುಚ್ಚಮ್ಮ ಬಸಪ್ಪ ಚೌದ್ರಿ, ಹಿರಿಯ ನಟರಾದ ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ಧನ ಸೇರಿದಂತೆ ಕಲೆ, ಜಾನಪದ, ಸಮಾಜಸೇವೆ, ಆಡಳಿತ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 68 ಮಂದಿ ಸಾಧಕರಿಗೆ ಹಾಗೂ 10 ಸಂಘ-ಸಂಸ್ಥೆಗಳಿಗೆ 2023-2024 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ವಿಕಾಸಸೌಧದಲ್ಲಿ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಸುದ್ದಿಗೋಷ್ಠಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಧಕರ ಹೆಸರುಗಳನ್ನು ಪ್ರಕಟಿಸಿದರು. 2023ನೇ ಸಾಲಿನಲ್ಲಿ 68 ಜನರಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರತಿನಿತ್ಯ ನೀಡಲಾಗಿದೆ. ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

100 ವರ್ಷ ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದ್ದು, ಒಬ್ಬರು ದಾವಣಗೆರೆ ಹಾಗೂ ಒಬ್ಬರು ಉತ್ತರ ಕನ್ನಡ ಜಿಲ್ಲೆಯವರು. 13 ಮಹಿಳೆಯರು ಮತ್ತು 54 ಪುರುಷರು ಹಾಗೂ ಮತ್ತು ಒಬ್ಬರು ಮಂಗಳ ಮುಖಿ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು 5 ಲಕ್ಷ ರೂ. ನಗದು, 25 ಗ್ರಾಂ ಚಿನ್ನದ ಪದಕ, ಶಾಲು, ಫಲಕ ಒಳಗೊಂಡಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಲೀಲಾವತಿ ಅವರು ಯಕ್ಷಗಾನ ಭಾಗವತಿಕೆಯ ಮೊದಲ ಮಹಿಳೆ. ಮೂಲತಃ ಕಾಸರಗೋಡಿನವರಾಗಿದ್ದಾರೆ. ಅದೇ ರೀತಿ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರನ್ನೂ ರಾಜ್ಯೋತ್ಸವ ಪ್ರಶಸ್ತಿಗಾಗಿ ಪರಿಗಣಿಸಿ ಗೌರವಿಸಲಾಗಿದೆ. ಮಾಧ್ಯಮ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಪತ್ರಿಕಾ ವಿತರಕಾ ಸಮುದಾಯದಿಂದ ಜವರಪ್ಪ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಇಡಿ ವಿತರಕ ಸಮುದಾಯವನ್ನು, ಈ ಸಮುದಾಯದ ಕಾರ್ಯಕ್ಷಮತೆ ಮತ್ತು ಶ್ರಮವನ್ನು ರಾಜ್ಯ ಸರ್ಕಾರ ಮತ್ತು ಆಯ್ಕೆ ಸಮಿತಿ ಗುರುತಿಸಿದೆ, ಗೌರವಿಸಿದೆ ಎಂದರು.

ಹೋರಾಟಗಾರರ ಮೇಲೆ ಕೇಸ್ ವಾಪಸ್ ಸಮಿತಿ: ಕನ್ನಡಪರ ಹೋರಾಟಗಾರರ ಮೇಲೆ ಕೇಸ್ ವಾಪಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದಕ್ಕಾಗಿ ಒಂದು ಸಮಿತಿ ರಚನೆ ಮಾಡಿದ್ದೇವೆ. ಕನ್ನಡಪರ ಹೋರಾಟಗಾರರು ಆ ಸಮಿತಿಗೆ ಮನವಿ ಸಲ್ಲಿಸಿದರೆ, ಅದನ್ನು ಪರಿಶೀಲನೆ ನಡೆಸಿ ಕೇಸ್ ವಾಪಸ್ ಪಡೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಈ ಕೆಳಕಂಡಂತಿದೆ:

  • ಸಂಗೀತ/ ನೃತ್ಯ ಕ್ಷೇತ್ರ : ಡಾ.ನಯನ ಎಸ್ ಮೋರೆ-ಬೆಂಗಳೂರು, ನೀಲಾ ಎಂ ಕೊಡ್ಲಿ- ಧಾರವಾಡ, ಶಬ್ಬೀರ್ ಅಹಮದ್- ಬೆಂಗಳೂರು, ಡಾ.ಎಸ್.ಬಾಳೇಶ ಭಜಂತ್ರಿ- ಬೆಳಗಾವಿ.
  • ಚಲನಚಿತ್ರ ರಂಗ : ಡಿಂಗ್ರಿ ನಾಗರಾಜ- ಬೆಂಗಳೂರು, ಬಿ.ಜನಾರ್ಧನ (ಬ್ಯಾಂಕ್ ಜನಾರ್ಧನ).
  • ರಂಗಭೂಮಿ : ಎ.ಜಿ. ಚಿದಂಬರ ರಾವ್ ಜಂಬೆ- ಶಿವಮೊಗ್ಗ, ಪಿ ಗಂಗಾಧರಸ್ವಾಮಿ- ಮೈಸೂರು, ಹೆಚ್.ಬಿ.ಸರೋಜಮ್ಮ-ಧಾರವಾಡ, ತಯ್ಯಬಖಾನ್ ಎಂ. ಇನಾಮದಾರ- ಬಾಗಲಕೋಟೆ, ಡಾ.ವಿಶ್ವನಾಥ್ ವಂಶಾಕೃತ ಮಠ- ಬಾಗಲಕೋಟೆ, ಪಿ.ತಿಪ್ಪೇಸ್ವಾಮಿ-ಚಿತ್ರದುರ್ಗ.
  • ಶಿಲ್ಪಕಲೆ/ಚಿತ್ರಕಲೆ/ಕರಕುಶಲ : ಟಿ.ಶಿವಶಂಕರ್-ದಾವಣಗೆರೆ, ಕಾಳಪ್ಪ ವಿಶ್ವಕರ್ಮ- ರಾಯಚೂರು, ಮಾರ್ಥಾ ಜಾಕಿಮೋವಿಚ್- ಬೆಂಗಳೂರು, ಪಿ. ಗೌರಯ್ಯ- ಮೈಸೂರು.
  • ಯಕ್ಷಗಾನ/ಬಯಲಾಟ : ಆರ್ಗೋಡು ಮೋಹನದಾಸ್ ಶೆಣೈ-ಉಡುಪಿ, ಕೆ.ಲೀಲಾವತಿ ಬೈಪಾಡಿತ್ತಾಯ- ದಕ್ಷಿಣ ಕನ್ನಡ, ಕೇಶಪ್ಪ ಶಿಳ್ಳಿಕ್ಯಾತರ- ಕೊಪ್ಪಳ, ದಳವಾಯಿ ಸಿದ್ದಪ್ಪ (ಹಂದಿಜೋಗಿ)- ವಿಜಯನಗರ.
  • ಜಾನಪದ ಕ್ಷೇತ್ರ : ಹುಸೇನಾಬಿ ಬುಡೆನ್ ಸಾಬ್ ಸಿದ್ದಿ-ಉತ್ತರಕನ್ನಡ, ಶಿವಂಗಿ ಶಣ್ಮರಿ-ದಾವಣಗೆರೆ, ಮಹದೇವು-ಮೈಸೂರು, ನರಸಪ್ಪಾ- ಬೀದರ್, ಶಕುಂತಲಾ ದೇವಲಾನಾಯಕ- ಕಲಬುರಗಿ, ಎಚ್‌.ಕೆ ಕಾರಮಂಚಪ್ಪ- ಬಳ್ಳಾರಿ, ಡಾ.ಶಂಭು ಬಳಿಗಾರ- ಗದಗ, ವಿಭೂತಿ ಗುಂಡಪ್ಪ-ಕೊಪ್ಪಳ, ಚೌಡಮ್ಮ- ಚಿಕ್ಕಮಗಳೂರು.
  • ಸಮಾಜಸೇವೆ : ಹುಚ್ಚಮ್ಮ ಬಸಪ್ಪ ಚೌದ್ರಿ- ಕೊಪ್ಪಳ, ಚಾರ್ಮಾಡಿ ಹಸನಬ್ಬ-ದಕ್ಷಿಣ ಕನ್ನಡ, ಕೆ.ರೂಪಾ ನಾಯಕ್- ದಾವಣಗೆರೆ, ಶ್ರೀ ಪೂಜ್ಯ ನಿಜಗುಣಾನಂದ ಸ್ವಾಮೀಜಿ, ನಿಷ್ಕಲ ಮಂಟಪ- ಬೆಳಗಾವಿ, ಜಿ.ನಾಗರಾಜು - ಬೆಂಗಳೂರು.
  • ಆಡಳಿತ ಕ್ಷೇತ್ರ : ಜಿ.ವಿ.ಬಲರಾಮ್ - ತುಮಕೂರು.
  • ವೈದ್ಯಕೀಯ ಕ್ಷೇತ್ರ : ಡಾ.ಸಿ.ರಾಮಚಂದ್ರ-ಬೆಂಗಳೂರು, ಡಾ. ಪ್ರಶಾಂತ್ ಶೆಟ್ಟಿ- ದಕ್ಷಿಣ ಕನ್ನಡ.
  • ಸಾಹಿತ್ಯ ಕ್ಷೇತ್ರ : ಪ್ರೊ. ಸಿ. ನಾಗಣ್ಣ- ಚಾಮರಾನಗರ, ಸುಬ್ಬು ಹೊಲೆಯಾರ್ (ಎಚ್ .ಕೆ.ಸುಬ್ಬಯ್ಯ)- ಹಾಸನ, ಸತೀಶ್ ಕುಲಕರ್ಣಿ- ಹಾವೇರಿ. ಲಕ್ಷ್ಮೀಪತಿ ಕೋಲಾರ- ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ದಾಪುರ-ವಿಜಯಪುರ, ಡಾ. ಕೆ.ಷರೀಫಾ- ಬೆಂಗಳೂರು.
  • ಶಿಕ್ಷಣ ಕ್ಷೇತ್ರ : ರಾಮಪ್ಪ (ರಾಮಣ್ಣ) ಹವಳೆ_ ರಾಯಚೂರು, ಕೆ. ಚಂದ್ರಶೇಖರ್_ ಕೋಲಾರ, ಕೆ.ಟಿ. ಚಂದ್ರು- ಮಂಡ್ಯ.
  • ಕ್ರೀಡಾ ಕ್ಷೇತ್ರ : ಟಿ.ಎಸ್. ದಿವ್ಯಾ- ಕೋಲಾರ, ಅದಿತಿ ಅಶೋಕ್- ಬೆಂಗಳೂರು, ಅಶೋಕ್ ಗದಿಗೆಪ್ಪ ಏಣಗಿ- ಧಾರವಾಡ.
  • ನ್ಯಾಯಾಂಗ ಕ್ಷೇತ್ರ : ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ- ಚಿಕ್ಕಬಳ್ಳಾಪುರ.
  • ಕೃಷಿ-ಪರಿಸರ ಕ್ಷೇತ್ರ : ಸೋಮನಾಥ ರೆಡ್ಡಿ ಪೂರ್ಮಾ- ಕಲಬುರಗಿ, ದ್ಯಾವನಗೌಡ ಟಿ ಪಾಟೀಲ- ಧಾರವಾಡ, ಶಿವರೆಡ್ಡಿ ಹನುಮರೆಡ್ಡಿ ವಾಸನ- ಬಾಗಲಕೋಟೆ.
  • ಸಂಕೀರ್ಣ ಕ್ಷೇತ್ರ : ಎ.ಎಂ. ಮದರಿ- ವಿಜಯಪುರ, ಹಾಜಿ ಅಬ್ದುಲ್ಲಾ, ಪರ್ಕಳ- ಉಡುಪಿ, ಮಿಮಿಕ್ರಿ ದಯಾನಂದ್- ಮೈಸೂರು, ಡಾ.ಕಬ್ಬಿನಾಳೆ ವಸಂತ ಭಾರದ್ವಾಜ್- ಮೈಸೂರು, ಲೆ.ಜ.ಕೊಡನ ಪೂವಯ್ಯ ಕಾರ್ಯಪ್ಪ- ಕೊಡಗು.
  • ಮಾಧ್ಯಮ ಕ್ಷೇತ್ರ : ದಿನೇಶ್ ಅಮೀನ್ ಮಟ್ಟು- ದಕ್ಷಿಣ ಕನ್ನಡ, ಜವರಪ್ಪ- ಮೈಸೂರು, ಮಾಯಾ ಶರ್ಮ- ಬೆಂಗಳೂರು, ರಫೀ ಭಂಡಾರಿ-ವಿಜಯಪುರ.
  • ವಿಜ್ಞಾನ ಮತ್ತು ತಂತ್ರಜ್ಞಾನ : ಎಸ್. ಸೋಮನಾಥನ್ ಶ್ರೀಧರ್ ಪನಿಕರ್- ಬೆಂಗಳೂರು, ಪ್ರೊ. ಗೋಪಾಲನ್ ಜಗದೀಶ್- ಚಾಮರಾಜನಗರ.
  • ಹೊರನಾಡು/ಹೊರದೇಶ : ಸೀತಾರಾಮ ಅಯ್ಯಂಗಾರ್- ಹೊರನಾಡು/ಹೊರದೇಶ, ದೀಪಕ್ ಶೆಟ್ಟಿ- ಹೊರನಾಡು/ಹೊರದೇಶ, ಶಶಿಕಿರಣ್ ಶೆಟ್ಟಿ- ಹೊರನಾಡು/ಹೊರದೇಶ.
  • ಸ್ವಾತಂತ್ರ್ಯ ಹೋರಾಟಗಾರ : ಪುಟ್ಟಸ್ವಾಮಿಗೌಡ- ರಾಮನಗರ.

ಪ್ರಶಸ್ತಿಗೆ ಆಯ್ಕೆ ಆದ ಸಂಘ ಸಂಸ್ಥೆಗಳು.. ಕರ್ನಾಟಕ ಸಂಭ್ರಮ-50 ರ ಹಿನ್ನೆಲೆಯಲ್ಲಿ ಹತ್ತು ಸಂಘ-ಸಂಸ್ಥೆಗಳಿಗೂ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದ್ದು, ಅವುಗಳ ಮಾಹಿತಿ ಇಂತಿದೆ..

* ಕರ್ನಾಟಕ ಸಂಘ-ಶಿವಮೊಗ್ಗ

* ಬಿ.ಎನ್. ಶ್ರೀರಾಮ ಪುಸ್ತಕ ಪ್ರಕಾಶನ- ಮೈಸೂರು

* ಮಿಥಿಕ್ ಸೊಸೈಟಿ- ಬೆಂಗಳೂರು

* ಕರ್ನಾಟಕ ಸಾಹಿತ್ಯ ಸಂಘ- ಯಾದಗಿರಿ

* ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ- ದಾವಣಗೆರೆ

* ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ – ದಕ್ಷಿಣ ಕನ್ನಡ

* ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ- ಬಾಗಲಕೋಟೆ

* ಚಿಣ್ಣರ ಬಿಂಬ- ಮುಂಬೈ

* ಮಾರುತಿ ಜನಸೇವಾ ಸಂಘ- ದಕ್ಷಿಣ ಕನ್ನಡ

* ವಿದ್ಯಾದಾನ ಸಮಿತಿ- ಗದಗ

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಸಂಭ್ರಮ: ಬೆಳಗಾವಿಯಲ್ಲಿ ಟೀಶರ್ಟ್ ಖರೀದಿ ಜೋರು.. ಕುಂದಾನಗರಿಯಿಂದ ಲಂಡನ್​ಗೂ ತಲುಪಿದ ಕನ್ನಡಾಭಿಮಾನ

Last Updated : Oct 31, 2023, 9:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.