ETV Bharat / state

ಕನ್ನಡ ಭಾಷೆ ಅಭಿವೃದ್ಧಿ ಮಾಡುವ ಕೆಲಸ ಆಗಬೇಕು, ಹಿಂದಿ, ಇಂಗ್ಲಿಷ್ ನೂ ಕಲಿಯಬೇಕು: ಯು.ಟಿ.ಖಾದರ್ - ಈಟಿವಿ ಭಾರತ ಕನ್ನಡ

ಪ್ರತಿ ಭಾಷೆಗೂ ಅದರದೇ ಆದ ಪ್ರಮುಖ್ಯತೆ ಇದೆ. ಕನ್ನಡ ಭಾಷೆಯ ಅಭಿವೃದ್ಧಿಯ ಕೆಲಸ ಆಗಬೇಕು. ಜೊತೆಗೆ ಹಿಂದಿ, ಇಂಗ್ಲೀಷ್​ನ್ನು ಕಲಿಯಬೇಕು ಎಂದು ವಿಧಾನಸಭೆಯಲ್ಲಿ ಯುಟಿ ಖಾದರ್ ಹೇಳಿದರು.

kannada-language-development-will-be-done-hindi-and-english-should-also-be-learned-says-ut-khader
ಕನ್ನಡ ಭಾಷೆ ಅಭಿವೃದ್ಧಿ ಮಾಡುವ ಕೆಲಸ ಆಗಬೇಕು, ಹಿಂದಿ, ಇಂಗ್ಲಿಷ್ ನೂ ಕಲಿಯಬೇಕು: ಯು.ಟಿ.ಖಾದರ್
author img

By

Published : Sep 14, 2022, 10:17 PM IST

ಬೆಂಗಳೂರು : ಕನ್ನಡ ಭಾಷೆ ಅಭಿವೃದ್ಧಿ ಮಾಡುವ ಕೆಲಸ ಆಗಬೇಕು. ಜೊತೆಗೆ ಹಿಂದಿ, ಇಂಗ್ಲಿಷ್ ಭಾಷೆಯನ್ನು ಕಲಿಯಬೇಕು ಎಂದು ಶಾಸಕ ಯುಟಿ ಖಾದರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಹಿಂದಿ ದಿವಸ್ ಆಚರಣೆ ವಿಚಾರವಾಗಿ ಮಾತನಾಡಿದ ಅವರು, ಪ್ರತಿಯೊಂದು ಭಾಷೆಗೂ ಅದರದೇ ಆದ ಪ್ರಾಮುಖ್ಯತೆ ಮತ್ತು ಮೌಲ್ಯ ಇದೆ. ಭಾಷೆ ಮಾತಾನಾಡುವುದಕ್ಕೆ ಮಾತ್ರ ಅಲ್ಲ. ಆಯಾ ಪ್ರದೇಶದ ಸಂಸ್ಕೃತಿ, ಆಚಾರ,ವಿಚಾರಗಳನ್ನು ಭಾಷೆ ಹೊಂದಿದೆ. ಇದನ್ನು ಉಳಿಸುವುದು ನಮ್ಮ ಆದ್ಯತೆ. ಅದೇ ರೀತಿ ಹಿಂದಿಗೂ ಪ್ರಾಮುಖ್ಯತೆ ಇದೆ‌ ಎಂದು ಹೇಳಿದರು.

ಹಿಂದಿ ನಮ್ಮ ರಾಷ್ಟ್ರೀಯ ಭಾಷೆ : ಹಿಂದಿ ನಮ್ಮ ರಾಷ್ಟ್ರೀಯ ಭಾಷೆ, ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆ. ಹಿಂದಿ ಹೆಚ್ಚು ಚಿರಪರಿಚಿತ. ಬೇರೆ ಭಾಷೆಗೂ ಮೌಲ್ಯ ನೀಡಿ, ನಮ್ಮ ಭಾಷೆಯನ್ನೂ ನಾವು ಹೆಚ್ಚು ಕಲಿಯಬೇಕು. ಹಿಂದಿ, ಇಂಗ್ಲಿಷ್ ಭಾಷೆ ನಮ್ಮ ಮಕ್ಕಳು ತಿಳಿದುಕೊಳ್ಳಬೇಕು. ಇದನ್ನು ಯಾಕೆ ವಿರೋಧ ಮಾಡುತ್ತಾರೆ ಗೊತ್ತಿಲ್ಲ. ನಾನು ನನ್ನ ಮಕ್ಕಳಿಗೆ ಯಾವ ಭಾಷೆ ಕಲಿಸುತ್ತೇನೆ ಅನ್ನೋದು ಮುಖ್ಯ. ಕನ್ನಡ ಭಾಷೆಗೆ ಆದ್ಯತೆ ನೀಡಿ,‌ ಅದನ್ನು ಬೆಳೆಸುವುದು ನಮ್ಮ ಸರ್ಕಾರದ ಕರ್ತವ್ಯ. ಇತರ ಭಾಷೆಗೂ ಗೌರವ ಕೊಡಬೇಕು ಎಂದು ಇದೇ ವೇಳೆ ಹೇಳಿದರು.

ನಾವು ಒಂದು ಭಾಷೆಯನ್ನು ದ್ವೇಷಿಸಿ, ನಮ್ಮ ಭಾಷೆಯನ್ನು ಗೌರವಿಸುವುದು ಸರಿಯಲ್ಲ. ನಾವು ಭಾರತೀಯರು ಎಲ್ಲಾ ಭಾಷೆಗೂ ಗೌರವ ನೀಡಬೇಕು. ನಾವು ಉತ್ತರ ಭಾರತದ ಕಡೆ ಹೋದಾಗ ಅಲ್ಲಿನ ಭಾಷೆ ಕಲಿಯಲೇಬೇಕು. ಹಾಗೆ ಬೇರೆ ದೇಶಕ್ಕೆ ಹೋದಾಗ ಇಂಗ್ಲಿಷ್ ಕಲಿಯಬೇಕು, ಅಲ್ಲಿ ಕೆಲಸ ಮಾಡಬೇಕು. ಆದರೆ ಇನ್ನೊಂದು ಭಾಷೆಯನ್ನು ಹೇರಬಾರದು ಎಂದು ತಿಳಿಸಿದರು.

ಇದನ್ನೂ ಓದಿ : ಸಿಎಂ ಭೇಟಿಯಾದ ಜಮೀರ್ ಅಹ್ಮದ್ ಖಾನ್​: ಮಹತ್ವದ ವಿಷಯಗಳ ಕುರಿತು ಚರ್ಚೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.