ETV Bharat / state

ಪೊಲೀಸರ ಮೇಲಿನ ಸೇಡು, ಮೀಡಿಯಾ ಕವರೇಜ್​ಗಾಗಿ ಕನ್ನಡ ಬಾವುಟ ಸುಟ್ಟಿದ್ದ ಟೆಕ್ಕಿ..! - ಕರ್ನಾಟಕ ಬಾವುಟಕ್ಕೆ ಬೆಂಕಿ

ಕೋವಿಡ್​ ಸಮಯದಲ್ಲಿ ತನ್ನ ರಾಜ್ಯಕ್ಕೆ ತೆರಳಲು ಪೊಲೀಸರು ಬಿಟ್ಟಿಲ್ಲ ಎಂದು, ಖಾಕಿ ಮೇಲೆ ಸೇಡು ತೀರಿಸಿಕೊಳ್ಳಲು ಟೆಕ್ಕಿಯೊಬ್ಬ ಕನ್ನಡ ಬಾವುಟ ಸುಟ್ಟಿದ್ದಾನೆ.

kannada-flag-burning-it-employee
ಸಿ.ಕೆ.ಬಾಬಾ ಆಗ್ನೇಯ ವಿಭಾಗದ ಡಿಸಿಪಿ
author img

By

Published : Dec 7, 2022, 1:20 PM IST

ಬೆಂಗಳೂರು: ಹೆಚ್ಎಸ್ಆರ್ ಲೇಔಟ್​ನಲ್ಲಿ ಕನ್ನಡ ಬಾವುಟ ಸುಟ್ಟ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಬಂಧಿತ ಆರೋಪಿ ಅಮೃತೇಶ್ ಲಾಕ್​ಡೌನ್ ಸೇಡು ತೀರಿಸಿಕೊಳ್ಳಲು ಹೋಗಿ ಕನ್ನಡ ಬಾವುಟ ಸುಟ್ಟು ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಐಐಟಿಯಲ್ಲಿ ಓದಿದ್ದ ಈತ ಪೊಲೀಸರ ಮೇಲಿನ ರಿವೇಂಜ್​​​ಗೆ 2 ವರ್ಷದ ಬಳಿಕ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಗೊತ್ತಾಗಿದೆ.

ಬಂಧಿತ ಆರೋಪಿ ಅಮೃತೇಶ್ ಯುಪಿ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದ. 2019 ರ ಲಾಕ್​ಡೌನ್​ನಲ್ಲಿ ಈತ ಊರಿಗೆ ತೆರಳಬೇಕಾಗಿತ್ತು. ಆದರೆ, ಈ ಸಮಯದಲ್ಲಿ ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲಿದ್ದ ಕಾರಣ ಇದು ಸಾಧ್ಯವಾಗಿರಲಿಲ್ಲ.

ಮಿಡೀಯಾ ಕವರೇಜ್​ಗಾಗಿ ಕನ್ನಡ ಬಾವುಟ ಸುಟ್ಟಿದ್ದ ಟೆಕ್ಕಿ

ಈತ ಲಾಕ್​ಡೌನ್ ವೇಳೆ ಊರಿಗೆ ತೆರಳಲು ಯತ್ನಿಸಿದಾಗ ಪೊಲೀಸರ ಕೈಲಿ ಏಟು ತಿಂದು ರೂಮಿಗೆ ವಾಪಸ್​ ಆಗಿದ್ದ. ಹೀಗಾಗಿ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಅಮೃತೇಶ್ ದ್ವೇಷ ಬೆಳಸಿಕೊಂಡಿದ್ದ. ಎರಡೂವರೆ ವರ್ಷದ ಬಳಿಕ ರಿವೇಂಜ್ ಪ್ಲ್ಯಾನ್ ಮಾಡಿದ್ದ ಈತ, ಕನ್ನಡ ಬಾವುಟ ಸುಟ್ಟರೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತೆ.

ಮಾಧ್ಯಮದವರು ಕವರೇಜ್ ಮಾಡಿ ತನ್ನನ್ನು ಊರಿಗೆ ಹೋಗಲು ಬಿಡದ ಪೊಲೀಸರನ್ನು ಸಸ್ಪೆಂಡ್ ಮಾಡುತ್ತಾರೆ ಎಂದು ಭಾವಿಸಿದ್ದ. ಆದರೆ, ಕನ್ನಡದ ಅನ್ನ ತಿಂದು ಬಾವುಟ ಸುಟ್ಟಿದ್ದಕ್ಕಾಗಿ ಲಕ್ಷ ಲಕ್ಷ ದುಡಿಯ ಬೇಕಾದವನು ಸದ್ಯ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿದ್ದಾನೆ.

ಇದನ್ನೂ ಓದಿ: ಕನ್ನಡ ಬಾವುಟ ಸುಟ್ಟ ಪ್ರಕರಣದಲ್ಲಿ ಅಗತ್ಯ ಕ್ರಮ : ಸಚಿವ ಹೆಬ್ಬಾರ್ ಭರವಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.