ETV Bharat / state

ಹೊಸ ವರ್ಷಾಚರಣೆಗೆ ಪೊಲೀಸರಿಂದ 'No Man Zone' ಆದೇಶ: ನಿಯಮ ಮೀರಿದ್ರೆ ಕೇಸ್‌ ಹಾಕ್ತಾರೆ!

ಎಂ.ಜಿ ರೋಡ್, ಬಿಗ್ರೇಡ್ ರೋಡ್, ಚರ್ಚ್ ಸ್ಟ್ರೀಟ್​, ಕೋರಮಂಗಲ, ಇಂದಿರಾನಗರವನ್ನು 'No Man Zone' ಎಂದು ಘೋಷಣೆ ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

Kamal panth
ಕಮಲ್​ ಪಂಥ್​
author img

By

Published : Dec 31, 2020, 12:11 PM IST

ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಪೊಲೀಸರು‌ ಅಲರ್ಟ್ ಆಗಿದ್ದಾರೆ. ರೂಪಾಂತರ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಯಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ವರ್ಷ ಆಚರಣೆಗೆ ಕೆಲವು ಕಠಿಣ‌ ನಿರ್ಬಂಧಗಳನ್ನು‌ ವಿಧಿಸಿದ್ದಾರೆ.

  • ಸಾರ್ವಜನಿಕರ ಗಮನಕ್ಕೆ:

    -ಚಾಲ್ತಿಯಲ್ಲಿರುವ #COVID19 ಪರಿಸ್ಥಿತಿ ಮತ್ತು ರೂಪಾಂತರಗೊಂಡಿರುವ ಹೊಸ ವೈರಸ್ ವ್ಯಾಪಕವಾಗಿ ಹರಡುತ್ತಿರುವುದನ್ನು ಗಮನಿಸಿ, ಮುಂಬರುವ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

    (1/5)

    — Kamal Pant, IPS (@CPBlr) December 30, 2020 " class="align-text-top noRightClick twitterSection" data=" ">

ಸಿಲಿಕಾನ್ ಸಿಟಿಯ ಕೆಲವೊಂದು ಗುರುತರ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಜೋರಾಗಿ ನಡೆಯುತ್ತದೆ. ಹೀಗಾಗಿ ವಿಶೇಷವಾಗಿ ಎಂ.ಜಿ ರೋಡ್, ಬಿಗ್ರೇಡ್ ರೋಡ್, ಚರ್ಚ್ ಸ್ಟ್ರೀಟ್​, ಕೋರಮಂಗಲ, ಇಂದಿರಾನಗರವನ್ನು 'No Man Zone' ಎಂದು ಘೋಷಣೆ‌ ಮಾಡಿದ್ದಾರೆ.

  • -ಮನೆಗಳಲ್ಲಿ, ಪ್ರೈವೇಟ್ ಕ್ಲಬ್, ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ ಗಳಲ್ಲಿ ಸದಸ್ಯರು ಮಾತ್ರ ಆಚರಿಸಿಕೊಳ್ಳಬಹುದು.

    -ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರದಲ್ಲಿ 'ಸಂಚಾರ ನಿಷೇಧ' ವಲಯಗಳನ್ನು ಮಾಡಲಾಗುತ್ತದೆ.

    (3/5)

ನೋ ಮ್ಯಾನ್ ಝೋನ್ ಅಂದ್ರೆ ನಗರದ ಮೇಲ್ಕಂಡ ಐದು ಪ್ರದೇಶಗಳಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದ 144 ಸೆಕ್ಷನ್ ಜಾರಿ ಇದ್ದು ನಾಳೆ ಮುಂಜಾನೆ 6 ಗಂಟೆಯವರೆಗೆ ಮೇಲ್ಕಂಡ ಐದು ಪ್ರದೇಶದಲ್ಲಿ ಜನರು ಓಡಾಟ ಮಾಡುವ ಆಗಿಲ್ಲ.

  • -ಆದೇಶವನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವುದಲ್ಲದೆ, IPC ಸೆಕ್ಷನ್ 188, ಹಾಗೂ NDMA ಕಾಯಿದೆಯಡಿ ಪ್ರಕರಣ ದಾಖಲಿಸಲಾಗುವುದು.

    ಈ ಮೂಲಕ ಸಾರ್ವಜನಿಕರಲ್ಲಿ ಮಾರ್ಗಸೂಚಿಯನ್ನು ಪಾಲಿಸಬೇಕಾಗಿ ವಿನಂತಿ.

    (5/5)

ಈ ಐದು ಪ್ರದೇಶಗಳಲ್ಲಿರುವ ಪಬ್, ಬಾರ್, ಹೋಟೆಲ್ ರೆಸ್ಟೋರೆಂಟ್​ಗಳಲ್ಲಿ ಮುಂಗಡವಾಗಿ ಬುಕ್ಕಿಂಗ್ ಬುಕ್ ಮಾಡಿರುವ ಸದಸ್ಯರಿಗೆ ಮಾತ್ರ ಅವಕಾಶ ಇರುತ್ತದೆ. ಈ ಸ್ಥಳದಲ್ಲಿಅನವಶ್ಯಕವಾಗಿ ಬೈಕ್‌ನಲ್ಲಿ ಸುತ್ತಾಟ, ವ್ಹಿಲಿಂಗ್, ಜಾಲಿರೇಡ್ ನಿಷೇಧಿಸಲಾಗಿದೆ.

ಒಂದು ವೇಳೆ ಈ ಆದೇಶ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದಲ್ಲದೆ, ಪ್ರಕರಣ ದಾಖಲಿಸಲಾಗುವುದು ಎಂದು ಆಯುಕ್ತ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.