ಬೆಂಗಳೂರು/ ರಾಯಚೋಟಿ : ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ರಾಯಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಾಳೆ ನಡೆಯಬೇಕಿದ್ದ ಗುಗ್ಗಳ ಸೇರಿದಂತೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಇಂದು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮಕ್ಕೆ ನೆರೆ ರಾಜ್ಯಗಳ ಸಾವಿರಾರು ಭಕ್ತರು ಆಗಮಿಸಿದ್ದರು.
ಗೌರಿ ಹುಣ್ಣಿಮೆ ಮಂಗಳವಾರದಂದು ಆಂಧ್ರ ಪ್ರದೇಶದ ರಾಯಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆಯಬೇಕಾಗಿದ್ದ ಕಲ್ಯಾಣೋತ್ಸವ, ಗುಗ್ಗುಳ ಮಹೋತ್ಸವ, ಕಾರ್ತಿಕ ದೀಪೋತ್ಸವ ಮತ್ತು ಅಗ್ನಿ ತೋರಣ ಕಾರ್ಯಕ್ರಮಗಳು ನಾಳೆ ಚಂದ್ರ ಗ್ರಹಣ ಇದ್ದ ಕಾರಣ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕದಿಂದ, ನೆರೆ ರಾಜ್ಯಗಳಾದ ತೆಲಂಗಾಣ, ಮಹಾರಾಷ್ಟ್ರದಿಂದಲೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ಇದನ್ನೂ ಓದಿ : ಪ್ರಕೃತಿಯ ವಿಸ್ಮಯ: ಮೂಡಿಗೆರೆಯಲ್ಲಿ ಅಲುಗಾಡಿತಾ 400 ವರ್ಷದ ಇತಿಹಾಸವಿರುವ ಹುತ್ತ!?