ETV Bharat / state

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದಿನೇಶ್ ಕಲ್ಲಹಳ್ಳಿ ದೌಡು: ಕದ್ದು ಮುಚ್ಚಿ ಠಾಣೆಗೆ ಬಂದು ಇನ್ಸ್​ಪೆಕ್ಟರ್ ಭೇಟಿ

kallahalli-who-attended-the-cubbon-park-police-station-and-take-back-the-complaint
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಾಗಿ ದೂರು ವಾಪಸ್ ಪಡೆದ ಕಲ್ಲಳ್ಳಿ
author img

By

Published : Mar 9, 2021, 11:22 PM IST

Updated : Mar 10, 2021, 12:22 AM IST

23:19 March 09

ಇಂದು 8 ಗಂಟೆ ಸುಮಾರಿಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಾಗಿದ್ದ ಅವರು, ಇನ್ಸ್ ಪೆಕ್ಟರ್ ಮಾರುತಿ ಜತೆ ಚರ್ಚಿಸಿ ನಂತರ ದೂರು ವಾಪಸ್​ ಪಡೆದಿದ್ದಾರೆ.

ಬೆಂಗಳೂರು: ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಾಗಿ ದೂರು ವಾಪಸ್​ ಪಡೆಯುವ ಸಂಬಂಧ ದಿನೇಶ್ ಕಲ್ಲಹಳ್ಳಿ ಇನ್ಸ್​ಪೆಕ್ಟರ್ ಜೊತೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.  

ದೂರು ವಾಪಸ್ ಪಡೆಯುವುದಾಗಿ ಈ ಹಿಂದೆ ವಕೀಲರನ್ನು ದಿನೇಶ್ ಕಳಿಸಿದ್ದಕ್ಕೆ ದೂರುದಾರರೇ ಠಾಣೆಗೆ ಹಾಜರಾಗಬೇಕು ಎಂದು ಪೊಲೀಸರು ತಿಳಿಸಿದ್ದರು. ಈ ಹಿನ್ನೆಲೆ ನಿನ್ನೆ ಸಂಜೆ ಸುಮಾರು 8 ಗಂಟೆಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಾಗಿದ್ದ ದೂರುದಾರ ಕಲ್ಲಹಳ್ಳಿ, ಇನ್ಸ್​ಪೆಕ್ಟರ್ ಮಾರುತಿ ಜತೆ ಚರ್ಚಿಸಿದ್ದಾರೆ ಎನ್ನಲಾಗಿದೆ.  

ಠಾಣೆಗೆ ಹಾಜರಾಗಿ ದೂರು ವಾಪಸ್ ಪಡೆಯುವುದಾಗಿ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ತೀರ್ಮಾನಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.

ಈ ಸಂಬಂಧ ದಿನೇಶ್ ಕಲ್ಲಹಳ್ಳಿಯವರನ್ನು ಸಂಪರ್ಕಿಸಿದಾಗ ಮೊದಲು ಮಾಹಿತಿ ನೀಡಲು ನಿರಾಕರಿಸಿದರಾದರೂ, ಠಾಣೆಗೆ ಬಂದು ಹೋಗಿರುವ ವಿಷಯ ಖಚಿತ ಪಡಿಸಿದ್ದಾರೆ.

ದಿನೇಶ್ ವಿರುದ್ಧ ದೂರು ದಾಖಲು:  

ಪ್ರಕರಣ ಸಂಬಂಧ ದಿನೇಶ್ ಕಲ್ಲಳ್ಳಿ ವಿರುದ್ಧ ಮತ್ತೊಂದು ದೂರು ದಾಖಲಿಸಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ವತಿಯಿಂದ  ದೂರು ದಾಖಲಾಗಿದೆ.  

Last Updated : Mar 10, 2021, 12:22 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.