ETV Bharat / state

ವಿದ್ಯಾರ್ಥಿಗಳಿಗೆ 1 ವರ್ಷ ಅಧ್ಯಯನ ನಷ್ಟ: ಕಲಬುರಗಿಯ ನರ್ಸಿಂಗ್ ಕಾಲೇಜಿಗೆ 1 ಕೋಟಿ ರೂಪಾಯಿ ದಂಡ

ಕಲಬುರಗಿಯ ನರ್ಸಿಂಗ್​ ಕಾಲೇಜೊಂದು ಪ್ರವೇಶ ಪ್ರಕ್ರಿಯೆ ತಡಮಾಡಿ ವಿದ್ಯಾರ್ಥಿಗಳಿಗೆ ಒಂದು ವರ್ಷದ ಅಧ್ಯಯನ ನಷ್ಟ ಮಾಡಿದ್ದಕ್ಕೆ ಹೈಕೋರ್ಟ್​ ಭಾರಿ ದಂಡದ ಬರೆ ಎಳೆದಿದೆ.

ಹೈಕೋರ್ಟ್​
ಹೈಕೋರ್ಟ್​
author img

By

Published : Jul 4, 2023, 8:17 AM IST

ಬೆಂಗಳೂರು: ವಿಶ್ವವಿದ್ಯಾಲಯ ನಿಗದಿಪಡಿಸಿದ ಗಡುವಿನೊಳಗೆ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸದೆ ವಿದ್ಯಾರ್ಥಿಗಳಿಗೆ ಒಂದು ವರ್ಷದ ಅಧ್ಯಯನ ನಷ್ಟ ಮಾಡಿದ ಕಲಬುರಗಿಯ ಮದರ್ ಮೇರಿ ಕಾಲೇಜ್ ಆಫ್ ನರ್ಸಿಂಗ್‌ಗೆ ಹೈಕೋರ್ಟ್ ಒಂದು ಕೋಟಿ ರೂ.ಗಳ ದಂಡ ಹಾಕಿದೆ. ಮದರ್ ಮೇರಿ ಕಾಲೇಜ್ ಆಫ್ ನರ್ಸಿಂಗ್​ನ 10 ಮಂದಿ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯಪೀಠ ಮಹತ್ವದ ಆದೇಶ ಹೊರಹಾಕಿತು.

ನರ್ಸಿಂಗ್ ಕಾಲೇಜು ಒಂದು ವರ್ಷದ ಓದಿನ ನಷ್ಟಕ್ಕೊಳಗಾದ 10 ವಿದ್ಯಾರ್ಥಿಗಳಿಗೆ ತಲಾ 10 ಲಕ್ಷ ರೂ.ಗಳಂತೆ ಒಂದು ಕೋಟಿ ರೂ.ಗಳ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದೆ. ನಿಯಮ ಪಾಲಿಸದ ಕಾಲೇಜಿನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದೂ ಸೇರಿದಂತೆ ಕಾನೂನುಗಳಡಿ ಲಭ್ಯವಿರುವ ಕ್ರಮಗಳನ್ನು ಜರುಗಿಸಬೇಕು ಎಂದು ನ್ಯಾಯಪೀಠ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿದೆ.

ವಿದ್ಯಾರ್ಥಿಗಳ ಪ್ರವೇಶ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಎರಡನೇ ಅರ್ಜಿದಾರ ವಿದ್ಯಾರ್ಥಿಯ ಹೆಸರನ್ನು ಒಂದು ಸಣ್ಣ ಕಾಗದದಲ್ಲಿ ಬರೆದು ರಿಜಿಸ್ಟರ್​ನಲ್ಲಿ ಅಂಟಿಸಲಾಗಿದೆ. ಉಳಿದಂತೆ 3ನೇ, 6ನೇ, 7ನೇ ಮತ್ತು 8ನೇ ಅರ್ಜಿದಾರರ ಹೆಸರನ್ನು ಪ್ರಾಂಶುಪಾಲರು ಮತ್ತು ಸಹಾಯಕ ರಿಜಿಸ್ಟ್ರಾರ್ ಪರಿಶೀಲನೆ ನಂತರ ಸೇರ್ಪಡೆ ಮಾಡಲಾಗಿದೆ. ಆದರೆ ಅವರ ವಿಳಾಸ ಮತ್ತು ವೈಯಕ್ತಿಕ ವಿವರಗಳೂ ಸಹ ಇಲ್ಲ ಎಂದು ನ್ಯಾಯಾಲಯ ಹೇಳಿತು.

ಹಾಜರಾತಿ ಪುಸ್ತಕ ಪರಿಶೀಲಿಸಿದರೆ ಅದರಲ್ಲಿ ಹೆಸರುಗಳನ್ನು ಎಲ್ಲೆಲ್ಲೋ ಬರೆಯಲಾಗಿದೆ, ಆಲ್ಫಬೆಟಿಕಲ್ ಕ್ರಮದಲ್ಲಿ ಇಲ್ಲ. ಹಾಗಾಗಿ ಇದೆಲ್ಲ ಗಮನಿಸಿದರೆ ವಿದ್ಯಾರ್ಥಿಗಳನ್ನು ತಡವಾಗಿ ಪ್ರವೇಶ ಮಾಡಿಕೊಳ್ಳಲಾಗಿದೆ ಮತ್ತು ತಾಂತ್ರಿಕ ತೊಂದರೆ ಕಾರಣ ನೀಡಿ ಅಪ್ ಲೋಡ್ ಮಾಡಿಲ್ಲ ಎಂದೂ ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: 2021-22ರಲ್ಲಿ ಮೊದಲ ವರ್ಷದ ಬಿಎಸ್ಸಿ ನರ್ಸಿಂಗ್ ಕೋರ್ಸ್‌ಗೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಕ್ಕೆ ಪೋರ್ಟಲ್ ಓಪನ್ ಮಾಡಲು ಮತ್ತು ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲು ನಿರ್ದೇಶನ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರವೇಶ ಮಾಡಿಕೊಂಡಿದ್ದರು ತಾಂತ್ರಿಕ ದೋಷದಿಂದಾಗಿ ವಿಶ್ವವಿದ್ಯಾಲಯದ ಪೋರ್ಟಲ್​ನಲ್ಲಿ ಹೆಸರು ಮತ್ತು ವಿವರಗಳು ಅಪ್ ಲೋಡ್ ಆಗಿಲ್ಲ ಎಂದು ಅರ್ಜಿದಾರರು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೆಚ್ಚುವರಿ ಅಡ್ವೋಕೇಟ್ ಜನರಲ್‌ಗಳ ನೇಮಕ : ಹಿರಿಯ ನ್ಯಾಯವಾದಿ ವಿಕ್ರಂ ಹುಯಿಲಗೋಳ, ಸರ್ಕಾರಿ ವಕೀಲರಾದ ಪ್ರತಿಮಾ ಹೊನ್ನಾಪುರ ಸೇರಿದಂತೆ 15 ವಕೀಲರನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್​ಗಳನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಬೆಂಗಳೂರು ಪೀಠಕ್ಕೆ 10 ಮಂದಿ, ಧಾರವಾಡಕ್ಕೆ ಇಬ್ಬರು ಮತ್ತು ಕಲಬುರಗಿ ಪೀಠಕ್ಕೆ ಮೂರು ಮಂದಿ ಎಎಜಿಗಳನ್ನು ನೇಮಿಸಿ ಕಾನೂನು ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಪೀಠಕ್ಕೆ ಹೆಚ್ಚುವರಿ ಅಡ್ವೊಕೇಟ್ ಜನರಲ್​ಗಳಾಗಿ ವಿಕ್ರಂ ಹುಯಿಲಗೋಳ, ಕೆಂಪಣ್ಣ, ಸಂತೋಷ್ ಎಸ್. ಗೋಗಿ, ಪ್ರತಿಮಾ ಹೊನ್ನಾಪುರ, ಎಸ್. ಇಸ್ಮಾಯಿಲ್ ಜಬೀವುಲ್ಲಾ, ಸಿ.ಎಸ್. ಪ್ರದೀಪ್, ರೂಬೆನ್ ಜಾಕೋಬ್, ವಿ.ಜಿ. ಭಾನುಪ್ರಕಾಶ್, ಕಿರಣ್ ರೋಣಾ ಮತ್ತು ಎಸ್. ಎ. ಆಹ್ಮದ್ ನೇಮಕಗೊಂಡಿದ್ದಾರೆ. ಅಂತೆಯೇ ಧಾರವಾಡ ಪೀಠಕ್ಕೆ ಜೆ.ಎಂ. ಗಂಗಾಧರ, ಕೇಶವ ರೆಡ್ಡಿ, ಕಲಬುರಗಿ ಪೀಠಕ್ಕೆ ಮಲ್ಹಾರರಾವ್, ವೈ.ಎಚ್. ವಿಜಯಕುಮಾರ್ ಮತ್ತು ಅರ್ಚನಾ ಬಿ.ತಿವಾರಿ ನೇಮಿಸಲಾಗಿದೆ.

ಇದನ್ನೂ ಓದಿ: ಚಿತ್ರದುರ್ಗದ ಮುರುಘಾ ಮಠಕ್ಕೆ ಜಿಲ್ಲಾ ಪ್ರದಾನ ನ್ಯಾಯಾಧೀಶರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.