ETV Bharat / state

ದೊರೆಸ್ವಾಮಿ ವಿರುದ್ಧ ಕಿಡಿ... ಆದರೂ ನಾನು ಹಾಗೆ ಕರೆಯಲ್ಲ ಅಂದ್ರು ಈಶ್ವರಪ್ಪ ! - ಸಚಿವ ಕೆ.ಎಸ್‌.ಈಶ್ವರಪ್ಪ

ಅಮೂಲ್ಯ ಜೊತೆ ಫೋಟೊ ತೆಗೆಸಿಕೊಂಡಿದ್ದು ಯಾಕೆ ಎನ್ನೋದನ್ನ ದೊರೆಸ್ವಾಮಿ ಸ್ಪಷ್ಟಪಡಿಸಲಿ. ಕನ್ನಯ್ಯ ಜೊತೆ ಇತರರ ಜೊತೆ ಯಾಕೆ ಫೋಟೊ ತೆಗೆಸಿಕೊಂಡಿದ್ದು ಅಂತ ದೊರೆಸ್ವಾಮಿ ತಿಳಿಸಲಿ. ನಾನು ದೊರೆಸ್ವಾಮಿ ಅವರನ್ನು ಪಾಕಿಸ್ತಾನ ಏಜೆಂಟ್ ಅಂತಾ ಕರೆಯಲ್ಲ. ಆದರೆ, ನೀವು ಹಿರಿಯರಾಗಿ ನಮಗೆ ಮಾರ್ಗದರ್ಶನ ಮಾಡಿ‌ ಸಚಿವ ಈಶ್ವರಪ್ಪ ವ್ಯಂಗ್ಯವಾಗಿ ಹೇಳಿದ್ದಾರೆ.

K S Eswarappa angry against Doreswamy
ಸಚಿವ ಕೆ.ಎಸ್‌.ಈಶ್ವರಪ್ಪ
author img

By

Published : Feb 28, 2020, 5:41 PM IST

ಬೆಂಗಳೂರು: ದೊರೆಸ್ವಾಮಿ ವಿರುದ್ಧ ಹೇಳಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಸಚಿವ ಕೆ.ಎಸ್‌.ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಅಮೂಲ್ಯ ಜೊತೆಗಿರುವ ಫೋಟೋವನ್ನು ಪ್ರದರ್ಶಿಸಿದರು‌. ದೊರೆಸ್ವಾಮಿ ಅವರು ಅಮೂಲ್ಯ ಕುಟುಂಬದವರ ಜತೆ ಹೋಗಿ ಫೋಟೋ ತೆಗೆಸಿಕೊಂಡಿದ್ದಾರೆ. ಕಾಂಗ್ರೆಸ್ ನವರು ಏನು ಹೇಳಿದರೂ ಅವರು ಸೋಬಾನೆ ಹಾಡ್ತಾರೆ. ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ಅವರನ್ನು ಕೊಲೆಗಡುಕ ಅಂದ್ರು, ಅವತ್ತೇ ಕಾಂಗ್ರೆಸ್​ನವರು ಸಿದ್ದರಾಮಯ್ಯರನ್ನು ಹೊರಗೆ ಹಾಕಬೇಕಾಗಿತ್ತು ಎಂದು ಕಿಡಿ ಕಾರಿದರು.

ಅಮೂಲ್ಯ ಜೊತೆ ಫೋಟೊ ತೆಗೆಸಿಕೊಂಡಿದ್ದು ಯಾಕೆ ಎನ್ನೋದನ್ನ ದೊರೆಸ್ವಾಮಿ ಸ್ಪಷ್ಟಪಡಿಸಲಿ. ಕನ್ನಯ್ಯ ಜೊತೆ ಇತರರ ಜೊತೆ ಯಾಕೆ ಫೋಟೊ ತೆಗೆಸಿಕೊಂಡಿದ್ದು ಅಂತ ದೊರೆಸ್ವಾಮಿ ತಿಳಿಸಲಿ. ನಾನು ದೊರೆಸ್ವಾಮಿ ಅವರನ್ನು ಪಾಕಿಸ್ತಾನ ಏಜೆಂಟ್ ಅಂತಾ ಕರೆಯಲ್ಲ. ಆದರೆ, ನೀವು ಹಿರಿಯರಾಗಿ ನಮಗೆ ಮಾರ್ಗದರ್ಶನ ಮಾಡಿ‌ ಎಂದು ಹೇಳಿದರು.

ಸಚಿವ ಕೆ.ಎಸ್‌.ಈಶ್ವರಪ್ಪ

ಸದನ ನಡೆಯಲು ಬಿಡಲ್ಲ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಅದ್ಹೇಗೆ ನಡೆಯಲು ಬಿಡಲ್ಲ ಅಂತ ನಾವೂ ನೋಡುತ್ತೇವೆ ಎಂದು ಇದೇ ವೇಳೆ ಸವಾಲು ಸ್ವೀಕಾರ ಮಾಡಿದರು. ಯತ್ನಾಳ್ ಹೇಳಿಕೆ ವಿಚಾರಕ್ಕೆ ಧರಣಿ ಮಾಡುತ್ತೀರಿ. ಪಾಕಿಸ್ತಾನ ಜಿಂದಾಬಾದ್ ಅಂದವರ ವಿರುದ್ಧ ಏನು ಮಾಡಿದ್ರಿ. ನಿಮ್ಮ ವಿಚಾರ ರಾಷ್ಟ್ರಭಕ್ತರ ಪರವೋ?, ವಿರುದ್ಧವೋ? ಅನ್ನೋದನ್ನು ಸ್ಪಷ್ಟಪಡಿಸಿ ಎಂದರು.

ಪಾಕಿಸ್ತಾನದ ಏಜೆಂಟ್ ರೂಪದಲ್ಲಿ ಅನೇಕ ವ್ಯಕ್ತಿಗಳು ನಮ್ಮ ರಾಜ್ಯದಲ್ಲಿ, ನಮ್ಮ ರಾಷ್ಟ್ರದಲ್ಲಿ ಇದ್ದಾರೆ. ಯತ್ನಾಳ್ ಹೇಳಿಕೆಯನ್ನು ಹಿಡಿದುಕೊಂಡು ಈಗ ಪ್ರತಿಭಟನೆ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಯಡಿಯೂರಪ್ಪ ಹುಟ್ಟುಹಬ್ಬ ಸಮಾರಂಭದಲ್ಲಿ ಗೈರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ಬೆಳಗ್ಗೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ಹುಟ್ಟುಹಬ್ಬ ಕಾರ್ಯಕ್ರಮ ನಿಮಿತ್ತ ಆರೋಗ್ಯ ಶಿಬಿರ ಮತ್ತು ಯಡಿಯೂರಪ್ಪ ಅವರಿಗೆ ಉತ್ತಮ ಆಯಸ್ಸು, ಆರೋಗ್ಯ ಕೊಡಲಿ ಅಂತಾ ಹೋಮ, ಹವನ ಮಾಡಿದ್ದೇವೆ. ಅದರಲ್ಲಿ ಪಾಲ್ಗೊಂಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.