ETV Bharat / state

ಸ್ಯಾಂಟ್ರೋ ರವಿ ಒಬ್ಬ ಕ್ರಿಮಿನಲ್, ಆತನ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ: ಕೆ ಗೋಪಾಲಯ್ಯ

ಕುಮಾರಸ್ವಾಮಿ ಆರೋಪಕ್ಕೆ ಉತ್ತರ ನೀಡಿದ ಅಬಕಾರಿ ಸಚಿವ - ಮದ್ಯ ಖರೀದಿ ವಯಸ್ಸಿನ ಇಳಿಕೆ ಬಗ್ಗೆ ಸಾರ್ವಜನಿಕರ ಆಕ್ಷೇಪದ ಬಗ್ಗೆ ಚರ್ಚೆ - ಬಿಜೆಪಿ ಮುಖಂಡ ಸಾರಥಿ ಸತ್ಯ ಪ್ರಕಾಶ್ ನೀಡಿರುವ ನಾಲ್ಕು ಉಚಿತ ಆಂಬ್ಯುಲೆನ್ಸ್​ಗಳಿಗೆ ಚಾಲನೆ ನೀಡಿದ ಕೆ ಗೋಪಾಲಯ್ಯ.

k gopalaiah reaction
ಕೆ ಗೋಪಾಲಯ್ಯ
author img

By

Published : Jan 15, 2023, 4:38 PM IST

ಸ್ಯಾಂಟ್ರೋ ರವಿ ಒಬ್ಬ ಕ್ರಿಮಿನಲ್, ಆತನ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ

ದೊಡ್ಡಬಳ್ಳಾಪುರ: ಸ್ಯಾಂಟ್ರೋ ರವಿಗೆ ಸರ್ಕಾರದಿಂದ ಯಾವುದೇ ವಿಶೇಷ ಆತಿಥ್ಯ ಕೊಟ್ಟಿಲ್ಲ. ಅವನೊಬ್ಬ ಕ್ರಿಮಿನಲ್, ಸೆರೆ ಸಿಕ್ಕಿದ್ದಾನೆ, ಆತನ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಇಂದು ಕುಮಾರಸ್ವಾಮಿ ಅವರು ಸರ್ಕಾರ ಮತ್ತು ಗೃಹ ಸಚಿವರ ವಿರುದ್ಧ ಮಾಡಿದ ಆರೋಪಕ್ಕೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಉತ್ತರಿಸಿದ್ದಾರೆ.

ದೊಡ್ಡಬಳ್ಳಾಪುರ ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಬಿಜೆಪಿ ಮುಖಂಡ ಸಾರಥಿ ಸತ್ಯ ಪ್ರಕಾಶ್ ಅವರು ತಾಲೂಕಿನ ಜನರ ನೆರವಿಗಾಗಿ ನೀಡಿರುವ ನಾಲ್ಕು ಉಚಿತ ಆಂಬ್ಯುಲೆನ್ಸ್​ಗಳಿಗೆ ಅಬಕಾರಿ ಸಚಿವ ಕೆ. ಗೋಪಾಲಯ್ಯ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು ಗ್ರಾಮೀಣ ಜನರಿಗೆ ಉಚಿತ ಆರೋಗ್ಯ, ಉಚಿತ ಶಿಕ್ಷಣ ದೊರೆತರೆ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಸಾರಥಿ ಸತ್ಯ ಪ್ರಕಾಶ್ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ನೆರವು ದೊರಕಿಸಲು, ನಾಲ್ಕು ಉಚಿತ ಆಂಬ್ಯುಲೆನ್ಸ್‌ ಸೇವೆ ಒಗಿಸಲು ಮುಂದಾಗಿರುವುದು ಪ್ರಶಂಸನೀಯ ಕಾರ್ಯವಾಗಿದೆ ಎಂದರು.

ಇಂದು ಬೆಂಗಳೂರಿನ ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಹೆಚ್​​ ಡಿ ಕುಮಾರಸ್ವಾಮಿ, ಗುಜರಾತ್​ನಲ್ಲಿ ಬಿಜೆಪಿ ಸರ್ಕಾರ ಇದೆ. ಕೆಲದಿನಗಳ ಹಿಂದೆ ಆರಗ ಜ್ಞಾನೇಂದ್ರ ಅವರೂ ಗುಜರಾತ್​ಗೆ ಹೋಗಿದ್ದರು. ಸರ್ಕಾರ ಸ್ಯಾಂಟ್ರೋರವಿಗೆ ರಾಜಾತಿಥ್ಯ ನೀಡುತ್ತಿದೆ ಎಂದು ಆರೋಪಿಸಿದ್ದರು. ಕುಮಾರಸ್ವಾಮಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸ್ಯಾಂಟ್ರೋ ರವಿಗೆ ಸರ್ಕಾರದಿಂದ ಯಾವುದೇ ವಿಶೇಷ ಆತಿಥ್ಯ ಕೊಟ್ಟಿಲ್ಲ. ಅವನೊಬ್ಬ ಕ್ರಿಮಿನಲ್, ಸೆರೆ ಸಿಕ್ಕಿದ್ದಾನೆ, ಆತನ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಮದ್ಯ ಖರೀದಿ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಲು ಸರ್ಕಾರ ಅಬಕಾರಿ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ಸಹ ವ್ಯಕ್ತವಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ನಿನ್ನೆ ಮತ್ತು ಇವತ್ತು ರಜೆ ಇರುವುದರಿಂದ ಸೋಮವಾರ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ಇದನ್ನೂ ಓದಿ: ಗೃಹ ಸಚಿವರು ಗುಜರಾತ್​ಗೆ ಹೋದ ಮೇಲೆ ಸ್ಯಾಂಟ್ರೋ ರವಿ ಬಂಧನ ಆಗಿದ್ಯಾಕೆ: ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಏನಿದು ಅಬಕಾರಿ ಕಾಯ್ದೆಗೆ ತಿದ್ದುಪಡಿ: ರಾಜ್ಯದಲ್ಲಿ ಮದ್ಯಪಾ‌ನ‌ ಮಾರಾಟಕ್ಕಿರುವ ಕಾನೂನುಬದ್ಧ ವಯಸ್ಸನ್ನು ಇಳಿಸುವ ಸಂಬಂಧ ಕಾನೂನಿಗೆ ತಿದ್ದುಪಡಿ ತರಲು ಸರ್ಕಾರ ತೀರ್ಮಾನಿಸಿದೆ. ಈ ವಿಚಾರವಾಗಿ ಕರಡು ಅಧಿಸೂಚನೆಯನ್ನು ಜನವರಿ 10ರಂದು ಹೊರಡಿಸಿದ್ದು, ಸಾರ್ವಜನಿಕರಿಂದ ಆಕ್ಷೇಪ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ಈ ಹಿಂದೆ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ಕಾನೂನಿತ್ತು. ಈಗ ಕರ್ನಾಟಕ ಅಬಕಾರಿ (ಪರವಾನಿಗೆಯ ಸಾಮಾನ್ಯ ಷರತ್ತು-ತಿದ್ದುಪಡಿ) ನಿಯಮ 2023 ತರಲು ಮುಂದಾಗಿರುವ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದೆ. ಅದರಂತೆ, ಮದ್ಯ ಕೊಳ್ಳುವ ನಿರ್ಬಂಧವನ್ನು ಸಡಿಲಿಸಿ ವಯಸ್ಸಿನ ಮಿತಿಯನ್ನು 18 ವರ್ಷಕ್ಕಿಳಿಸಲು ಸರ್ಕಾರ ಮುಂದಾಗಿದೆ.

2015ಕ್ಕೂ ಮೊದಲು ರಾಜ್ಯದಲ್ಲಿ ಕುಡಿತದ ವಯಸ್ಸು 18 ಇತ್ತು. ನಂತರ ಅದನ್ನು ತಿದ್ದುಪಡಿಗೊಳಿಸಿ ಕನಿಷ್ಠ ವಯೋಮಿತಿಯನ್ನು 21ಕ್ಕೆ ಏರಿಕೆ ಮಾಡಲಾಗಿತ್ತು. ಕರ್ನಾಟಕ ಅಬಕಾರಿ ಪರವಾನಿಗೆ (ಸಾಮಾನ್ಯ ಷರತ್ತು) ನಿಯಮ 1967 ಅನ್ನು 2015ರಲ್ಲಿ ಕರ್ನಾಟಕ ಅಬಕಾರಿ ಇಲಾಖೆ ತಿದ್ದುಪಡಿಗೆ ತಂದು ಕುಡಿತದ ವಯಸ್ಸನ್ನು ಕನಿಷ್ಠ 18 ರಿಂದ 21 ವರ್ಷಕ್ಕೆ ಏರಿಸಿತ್ತು. ಅದರಂತೆ ಪಬ್, ಬಾರ್​ಗಳಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ತಿದ್ದುಪಡಿಯಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ: ಮದ್ಯ ಖರೀದಿ ವಯಸ್ಸನ್ನು 18ಕ್ಕೆ ಇಳಿಸಲು ಮುಂದಾದ ಅಬಕಾರಿ ಇಲಾಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.