ಬೆಂಗಳೂರು: ಸ್ಪಾ ಹಾಗೂ ಪಬ್ಗಳಿಗೆ ನುಗ್ಗಿ ಮಾಲೀಕರಿಗೆ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಆರೋಪದ ಮೇಲೆ ಟ್ಯಾಬ್ಲಾಯ್ಡ್ ಪತ್ರಿಕೆಯೊಂದರ ಸಂಪಾದಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂಪಾದಕ ಪ್ರಭು ಎಂಬಾತ ನಗರದ ವಿವಿಧ ಕಡೆಗಳಲ್ಲಿರುವ ಸ್ಪಾ ಹಾಗೂ ಪಬ್ಗಳಿಗೆ ಹೋಗಿ, ಕಾನೂನು ಬಾಹಿರವಾಗಿ ಸ್ಪಾ ನಡೆಸುತ್ತಿದ್ದೀರಾ ಎಂದು ಮಾಲೀಕರಿಗೆ ಧಮ್ಕಿ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ.
![Journalist's Scared for owners of spa and clubs](https://etvbharatimages.akamaized.net/etvbharat/prod-images/5898730_thumbna.jpg)
ಈ ಸಂಬಂಧ ಮಾಲೀಕರು ಮಾರತ್ ಹಳ್ಳಿ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದಾನೆ. ಈತ ಈ ಹಿಂದೆಯೂ ನಗರದ ಬೇರೆ ಬೇರೆ ಪಬ್ ಹಾಗೂ ಸ್ಪಾಗಳಿಗೆ ಹೋಗಿ, ಮಾಲೀಕರ ಬಳಿ ಹಣ ಕೇಳುವ ಪ್ರವೃತ್ತಿ ಬೆಳೆಸಿಕೊಂಡಿದ್ದ ಎನ್ನಲಾಗ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.