ಬೆಂಗಳೂರು: ವಿಧಾನಸಭೆ ಕಲಾಪ ಚಿತ್ರೀಕರಣಕ್ಕೆ ಮಾಧ್ಯಮದ ಮೇಲೆ ನಿಷೇಧ ಹೇರಿದ ಬಳಿಕ ಇದೀಗ ವಿಧಾನಸಭೆ ಮೊಗಸಾಲೆಗೂ ಪತ್ರಕರ್ತರಿಗೆ ನಿರ್ಬಂಧ ಹೇರಲಾಗಿದೆ.
ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಮೊಗಸಾಲೆಗಳಿಗೆ ಪತ್ರಕರ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಸಂಬಂಧ ಪತ್ರಕರ್ತರಿಗೆ ಸ್ಪೀಕರ್ ನಿರ್ಬಂಧ ಹೇರಿ ಮೌಖಿಕ ಆದೇಶ ಹೊರಡಿಸಿದ್ದಾರೆ. ಉಭಯ ಮೊಗಸಾಲೆಗಳಲ್ಲಿ ಪತ್ರಕರ್ತರನ್ನು ಹೊರಗೆ ಕಳಿಸಲು ಮಾರ್ಷಲ್ಗಳಿಗೆ ಸ್ಪೀಕರ್ ಸೂಚಿಸಿದ್ದಾರೆ.
ವಿಧಾನಸಭೆ ಮೊಗಸಾಲೆಯಲ್ಲಿ ಇರುವ ಕ್ಯಾಂಟೀನ್ಗೆ ಮಾತ್ರ ಪತ್ರಕರ್ತರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಕ್ಯಾಂಟೀನ್ನಲ್ಲಿ ತಿಂಡಿ, ಊಟ ಬೇಗ ಮುಗಿಸಿ ಅಲ್ಲಿಂದ ಹೊರಡಲು ಪತ್ರಕರ್ತರಿಗೆ ಸೂಚನೆ ನೀಡಲು ಮಾರ್ಷಲ್ಗಳಿಗೆ ತಿಳಿಸಲಾಗಿದೆ.