ಬೆಂಗಳೂರು: ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯೆಲಿ ಧಾರಾವಾಹಿ ಇತಿಹಾಸ ಸೃಷ್ಟಿಸಿದ್ದು, ಈ ವಾರ 15.2 ಟಿಆರ್ಪಿ ಪಡೆದುಕೊಂಡು ಮತ್ತೆ ಅಗ್ರ ಸ್ಥಾನದಲ್ಲಿದೆ.
ಜೊತೆಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಆಗಿ ಮಿಂಚುತ್ತಿರುವ ಅನಿರುದ್ಧ್ ಧಾರಾವಾಹಿ ಆರಂಭವಾದಾಗಿನಿಂದಲೂ ಅದೇ ಹುರುಪು ಕಾಪಾಡಿಕೊಂಡಿದ್ದಾರೆ. ಆರೂರು ಜಗದೀಶ್ ಅವರ ನಿರ್ದೇಶನದ ಈ ಧಾರಾವಾಹಿಯ ಯಶಸ್ಸಿನ ಹಿಂದೆ ಅನಿರುದ್ಧ್, ಅನು ಸಿರಿಮನೆ, ಜೆಂಡೆ, ಮೀರಾ ಹೀಗೆ ಇಡೀ ಕಲಾವಿದರ ಪರಿಶ್ರಮವಿದ್ದು, ತೆರೆಯ ಹಿಂದಿನ ತಂತ್ರಜ್ಞರು ಕೂಡಾ ಸಾಕಷ್ಟು ಶ್ರಮಿಸಿದ್ದಾರೆ.
ಇನ್ನು ಧಾರಾವಾಹಿಯು ದಿನದಿಂದ ದಿನಕ್ಕೆ ಕೂತೂಹಲ ಹೆಚ್ಚಿಸುತ್ತಿದ್ದು, ವಿಭಿನ್ನ ಕಥಾ ಶೈಲಿಗೆ ಪ್ರೇಕ್ಷಕರು ಫಿದಾ ಆಗಿದ್ದಂತೂ ನಿಜ. ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆದುಕೊಂಡು ವೀಕ್ಷಕರನ್ನು ಟಿವಿ ಮುಂದೆಯಿಂದ ಅಲ್ಲಾಡದಂತೆ ಮಾಡಿರುವ ಈ ಧಾರಾವಾಹಿ ಹಿಂದಿ ಧಾರಾವಾಹಿಗಳನ್ನು ಹಿಂದಿಕ್ಕುವ ಸನಿಹದಲ್ಲಿದೆ ಎಂದರೆ ತಪ್ಪಾಗಲಾರದು.