ETV Bharat / state

S.T.Somashekhar: ಕಾಂಗ್ರೆಸ್ ಸೇರ್ಪಡೆ ಕೇವಲ ವದಂತಿ, ಬಿಜೆಪಿ ಬಿಡುವುದಿಲ್ಲ- ಎಸ್.ಟಿ.ಸೋಮಶೇಖರ್ - ಡಿಸಿಎಂ ಡಿಕೆ ಶಿವಕುಮಾರ್

S.T.Somashekhar statement on joining congress: ಡಿ.ಕೆ.ಶಿವಕುಮಾರ್ ಭೇಟಿ ವೇಳೆ ಒಂದೆರಡು ಒಳ್ಳೆಯ ಮಾತಾಡಿದ್ದೇನೆಯೇ ಹೊರತು ಅವರೊಂದಿಗೆ ರಾಜಕೀಯ ಮಾತನಾಡಿಲ್ಲ ಎಂದು ಎಸ್.ಟಿ.ಸೋಮಶೇಖರ್​ ತಿಳಿಸಿದರು.

BJP MLA ST Somashekhar
ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್
author img

By

Published : Aug 17, 2023, 3:30 PM IST

ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆ

ಬೆಂಗಳೂರು: ಕಾಂಗ್ರೆಸ್‌ನವರು ಬನ್ನಿ ಅಂತ ಕರೆದಿಲ್ಲ, ನಾನು ಹೋಗ್ತೀನಿ ಅಂತ ಅರ್ಜಿ ಹಾಕಿಲ್ಲ. ಈಗಲೂ ನನ್ನಲ್ಲಿ ಬಿಜೆಪಿ ತೊರೆಯುವ ಚಿಂತನೆ ಇಲ್ಲ. ಮುಂದೆಯೂ ಬಿಜೆಪಿ ಬಿಡುವ ಪ್ಲಾನ್ ಇಲ್ಲ. ಕಾಂಗ್ರೆಸ್ ಪಕ್ಷ ಸೇರುವ ವಿಚಾರ ಕೇವಲ ವದಂತಿಯಷ್ಟೇ ಎಂದು ಮಾಜಿ ಸಚಿವ ಹಾಗು ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಯಶವಂತಪುರದ ಶಾಸಕರ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕ್ಷೇತ್ರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಂದಿದ್ದರು. ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆ ಇದೆ. ಇದರ ಬಗ್ಗೆ ಚರ್ಚೆ ಮಾಡಿದ್ದೇನೆ. ಅವರು ಬರುವುದರ ಬಗ್ಗೆ ನನಗೆ ಯಾವ ಅಧಿಕಾರಿಯೂ ಮಾಹಿತಿ ನೀಡಿರಲಿಲ್ಲ. ಈ ಕುರಿತು ಮಾಹಿತಿ ತಿಳಿಸಿದಾಗ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಅವರ ಬಗ್ಗೆ ಒಂದೆರಡು ಒಳ್ಳೆಯ ಮಾತಾಡಿದ್ದು ಹೌದು, ಇದನ್ನು ಹೊರತುಪಡಿಸಿ ನಾನು ರಾಜಕೀಯ ಮಾತನಾಡಿಲ್ಲ ಎಂದರು.

ಯಶವಂತಪುರ ಕ್ಷೇತ್ರದಲ್ಲಿ ಸ್ಥಳೀಯ ಮೂಲ ಬಿಜೆಪಿಗರು ನನ್ನ ವಿರುದ್ಧ ಕೆಲಸ ಮಾಡಿದ್ದರು. ನನ್ನನ್ನು ಸೋಲಿಸಬೇಕು ಅಂತ ಆಡಿಯೋ ವೈರಲ್ ಮಾಡಿದ್ದರು. ಬಿಜೆಪಿಯವರೇ ನನಗೆ ಕಾಂಗ್ರೆಸ್​ಗೆ ಕಳುಹಿಸುವಂತಿದೆ. ಈ ನನ್ ಮಗನ್ನು ಸೋಲಿಸಬೇಕು ಅಂತ ಸ್ಥಳೀಯ ಬಿಜೆಪಿವರು ಆಡಿಯೋ ಮಾಡಿದ್ದರು. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ನಾನು ಬಿಜೆಪಿ ಬಿಟ್ಟು ಹೋಗಲ್ಲ, ಇದರಲ್ಲಿ ಅನುಮಾನ ಇಲ್ಲ ಎಂದರು.

ರಾಜ್ಯಾಧ್ಯಕ್ಷರ ಭೇಟಿಗೆ ಸಮಯ ಕೇಳಿದ್ದೇನೆ. ನಾನು ಪಕ್ಷ ಬಿಡುತ್ತೇನೆ ಅಂತ ಎಲ್ಲಿಯೂ ಹೇಳಿಲ್ಲ ರಾಜ್ಯ ಮಟ್ಟದ ಬಿಜೆಪಿಯಲ್ಲಿ ನನಗೆ ಗೌರವ ಇದೆ. ಎಲ್ಲ ನಾಯಕರೂ ಗೌರವದಿಂದ ಮಾತನಾಡಿಸುತ್ತಾರೆ. ಆದರೆ ಸ್ಥಳೀಯರು ನನ್ನನ್ನು ಹೊರಗೆ ಕಳಿಸಬೇಕು ಅಂತಾನೇ ಇದನ್ನೆಲ್ಲ ಮಾಡುತ್ತಿದ್ದಾರೆ. ಆದರೆ ನಾನು ಕಾಂಗ್ರೆಸ್​ಗೆ ಹೋಗುವ ಬಗ್ಗೆ ಎಲ್ಲೂ ಹೇಳಿಲ್ಲ. ನಮ್ಮ ಕಾರ್ಯಕರ್ತರ ಜತೆಗೂ ಹೇಳಿಕೊಂಡಿಲ್ಲ. ಇವತ್ತು ಬೆಳಗ್ಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿ.ಟಿ.ರವಿ ಅವರು ಫೋನ್ ಮಾಡಿದ್ದರು. ಸದಾನದಂದ ಗೌಡರೂ ಮನೆಗೆ ಕರೆಸಿ ಮಾತನಾಡಿದರು. ಎರಡು ಸಲ ಪ್ರಧಾನಿಯವರ ಕಾರ್ಯಕ್ರಮವನ್ನೂ ಮಾಡಿದ್ದೇನೆ. ಆದರೆ ಸ್ಥಳೀಯವಾಗಿ ನನ್ನ ವಿರುದ್ಧ ಎತ್ತಿ ಕಟ್ಟುವ ಕೆಲಸ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್ ಅವರನ್ನು ಹೊಗಳಿದ್ದನ್ನೇ ಸ್ಥಳೀಯ ಬಿಜೆಪಿಗರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಮೈಸೂರಿಗೆ ಹೋಗಿದ್ದಾಗ ಜಿ.ಟಿ.ದೇವೇಗೌಡರನ್ನೂ ಹೊಗಳುತ್ತೇನೆ. ಹಾಗಂತ ಜೆಡಿಎಸ್​ಗೆ ಹೋಗುತ್ತೇನೆ ಅಂತ ಅರ್ಥವಾ? ಡಿ.ಕೆ.ಶಿವಕುಮಾರ್ ಅವರನ್ನು ಹೊಗಳಿದ್ದಕ್ಕೆ ನಾನು ಕಾಂಗ್ರೆಸ್​ಗೆ ಹೋಗುತ್ತೇನೆ, ಲೋಕಸಭೆಗೆ ಅಪ್ಪ, ವಿಧಾನಸಭೆಗೆ ಮಗ ಅಂತ ಸೋಷಿಯಲ್ ಮೀಡಿಯಾದಲ್ಲಿ ಬಿಂಬಿಸ್ತಿದಾರೆ ಅಷ್ಟೇ ಎಂದು ತಿಳಿಸಿದರು.

ಇದನ್ನೂ ಓದಿ: ಎಸ್.ಟಿ.ಸೋಮಶೇಖರ್ ವಾಪಸ್ ಬಂದರೆ ಒಪ್ಪುತ್ತೇವೆ, ರಾಜಕೀಯದಲ್ಲಿ ಎಲ್ಲವೂ ಸಾಧ್ಯ: ಡಾ.ಜಿ.ಪರಮೇಶ್ವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.